

ಕಾರವಾರ: ತಾಲೂಕಿನ ಬಾಳ್ನಿ ಸಮೀಪ ಗುರುವಾರ ನಡೆದ ಸರಣಿ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಮೃತಪಟ್ಟಿದ್ದಾನೆ. ಬಸ್, ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಸತ್ಯಂ ಗೋವಿಂದ ನಾಯ್ಕ (19) ಮೃತಪಟ್ಟಿದ್ದಾನೆ. ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಓವರ್‌ಟೇಕ್ ಮಾಡುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಬಸ್‌ನ ಚಕ್ರದಡಿಗೆ ಸಿಲುಕಿದ್ದ ಈ ಸಂಬಂಧ ಕದ್ರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.