ಬಸ್ ಇಂಜಿನ್ ಸೇರಿದ ನಾಗರ

5 rpt 1
Published on

ರಿಪ್ಪನ್​ಪೇಟೆ: ಖಾಸಗಿ ಬಸ್ಸಿನ ಇಂಜಿನ್​ನಲ್ಲಿ ಸೋಮವಾರ ನಾಗರ ಹಾವೊಂದು ಸೇರಿಕೊಂಡು ಪ್ರಯಾಣಿಕರಿಗೆ ಕೆಲಕಾಲ ಆತಂಕ ಸೃಷ್ಟಿಸಿತು.

ಶಿವಮೊಗ್ಗದಿಂದ ಕುಂದಾಪುರಕ್ಕೆ ಹೊರಟಿದ್ದ ಖಾಸಗಿ ಬಸ್ ಸಂಜೆ 4.30ರ ವೇಳೆಗೆ ಪಟ್ಟಣದ ವಿನಾಯಕ ವೃತ್ತಕ್ಕೆ ಆಗಮಿಸಿದ್ದು ಪ್ರಯಾಣಿಕರನ್ನು ಇಳಿಸಲು ಬಸ್ ನಿಲ್ಲಿಸಲಾಗಿತ್ತು. ಈ ವೇಳೆ ಅರಳಿಮರದಿಂದ ಕೆಳಗೆ ಬಿದ್ದ ನಾಗರ ಹಾವು ಬಸ್​ನಡಿ ನುಗ್ಗಿದೆ. ಇದನ್ನು ಗಮನಿಸಿದ ಚಾಲಕ ಬಂದು ನೋಡುವಷ್ಟರಲ್ಲಿ ಇಂಜಿನ್​ನೊಳಗೆ ಅವಿತಿದೆ. ಇದರಿಂದ ಗಾಬರಿಗೊಂಡ ಎಲ್ಲ ಪ್ರಯಾಣಿಕರು ಬಸ್​ನಿಂದ ಕೆಳಗಿಳಿದಿದ್ದಾರೆ.

ಚಾಲಕ ಮತ್ತು ನಿರ್ವಾಹಕ ಹಾವನ್ನು ಹೊರತೆಗೆಯಲು ಎಷ್ಟೇ ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಕೊನೆಗೆ ಸ್ಥಳೀಯ ಉರಗ ತಜ್ಞರನ್ನು ಕರೆಸಿ ಒಂದೂವರೆ ಗಂಟೆ ಕಾರ್ಯಾಚರಣೆ ನಡೆಸಿದರೂ ಹಾವು ಸಿಗಲೇ ಇಲ್ಲ. ಹೀಗಾಗಿ ಪ್ರಯಾಣಿಕರು ಬಸ್ ಏರಲು ಹಿಂದೇಟು ಹಾಕಿದರು. ಬಳಿಕ ಚಾಲಕ ಹಾಗೂ ನಿರ್ವಾಹಕ ಪ್ರಯಾಣಿಕರಿಗೆ ಧೈರ್ಯ ಹೇಳಿ ಬಸ್ ಏರುವಂತೆ ಮಾಡಿದರು.

5 ಆರ್​ಪಿಟಿ 1,2

ರಿಪ್ಪನ್​ಪೇಟೆಯ ವಿನಾಯಕ ವೃತ್ತದ ಬಳಿ ಬಸ್ ಇಂಜಿನ್​ನಲ್ಲಿ ಸೇರಿದ ನಾಗರ ಹಾವಿಗೆ ಹುಡುಕಾಡುತ್ತಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net