ಬಸ್ ಆಟೋಗೆ ಡಿಕ್ಕಿ :ಆಟೋ ಚಾಲಕ ಸಾವು

accident-15
Published on

ಹಾಸನ : ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಆಟೋ ಚಾಲಕ ಮೃತಪಟ್ಟಿರುವ ಘಟನೆ ಬಿ.ಎಂ. ರಸ್ತೆಯ ಕೆಎಸ್‌ಆರ್‌ಟಿಸಿ ಪ್ರಾದೇಶಿಕ ಸಾರಿಗೆ ಕಚೇರಿ ಸಮೀಪ ಗುರುವಾರ ರಾತ್ರಿ ನಡೆದಿದೆ.
ಕುವೆಂಪು ನಗರ ನಿವಾಸಿ ಅಂಥೊಣಿ (39) ಮೃತರು. ರಾತ್ರಿ 1.20ರ ಸಮಯದಲ್ಲಿ ಆಡುವಳ್ಳಿಯ ರಮೇಶ್ ಅವರನ್ನು ಕೂರಿಸಿಕೊಂಡು ಮುಖ್ಯ ರಸ್ತೆ ದಾಟುತ್ತಿದ್ದಾಗ ಬಂದ ಕೆಎಸ್‌ಆರ್‌ಟಿಸಿ ಸ್ಲೀಪರ್ ಕೋಚ್ ಬಸ್ ಆಟೋಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಆಟೋ ಪಲ್ಟಿಯಾಗಿ ಅಂಥೊಣಿ ಕೆಳಗೆ ಬಿದ್ದಿದ್ದಾರೆ. ಗಂಭೀರ ಗಾಯಗೊಂಡಿದ್ದ ಅವರನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net