

ಕಲಬುರಗಿ: ಪೊಲೀಸ್ ಇಲಾಖೆಯಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದ ಜಿಲ್ಲೆಯ ಗುಪ್ತಚರ ಇಲಾಖೆಯ ಡಿವೈಎಸ್‌ಪಿ ಬಸವೇಶ್ವರ ಹೀರಾ ಅವರಿಗೆ ೨೦೨೪ನೇ ಸಾಲಿನ ರಾಷ್ಟçಪತಿ ಶ್ಲಾಘನೀಯ ಸೇವಾ ಪದಕ ಲಭಿಸಿದೆ.
ಸ್ವಾತಂತ್ರೊತ್ಸವ ನಿಮಿತ್ತ ವಿಶಿಷ್ಟ ಸೇವೆ, ತನಿಖೆಯಲ್ಲಿ ಶ್ರಮಿಸಿದ ಪೊಲೀಸ್ ಅಧಿಕಾರಿಗಳಿಗೆ ನೀಡುವ ಶ್ಲಾಘನೀಯ ಸೇವಾ ಪದಕವನ್ನು ರಾಜ್ಯದ ೧೯ ಪೊಲೀಸ್ ಅಧಿಕಾರಿಗಳಿಗೆ ಲಭಿಸಿದ್ದು, ಅದರಲ್ಲಿ ಜಿಲ್ಲೆಯ ಬಸವೇಶ್ವರ ಹೀರಾ ಅವರಿಗೆ ದೊರಕಿದೆ.
ಮೂಲತಃ ಆಳಂದ ತಾಲೂಕಿನ ರುದ್ರವಾಡಿ ಗ್ರಾಮದ ಬಸವೇಶ್ವರ ಹೀರಾ ಅವರು, ನಾಲ್ಕನೇ ತರಗತಿವರೆಗೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅಧ್ಯಯನ ಮಾಡಿ, ನಂತರ ನಗರದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಂಸ್ಥೆಗಳಲ್ಲಿ ಐದನೇ ತರಗತಿಯಿಂದ ಪದವಿಯವರೆಗೆ ಅಧ್ಯಯನ ಮಾಡಿದ್ದಾರೆ.
೧೯೯೯ರಲ್ಲಿ ಪಿಎಸ್‌ಐ ಹುದ್ದೆಗೆ ಆಯ್ಕೆಯಾದ ಅವರು, ಒಂದು ವರ್ಷದ ತರಬೇತಿ ನಂತರ ೨೦೦೦ದಿಂದ ಏಳು ವರ್ಷ ಬಳ್ಳಾರಿ ಜಿಲ್ಲೆಯ ಐದು ಠಾಣೆಯಲ್ಲಿ ಪಿಎಸ್‌ಐ ಆಗಿ ಸೇವೆ ಸಲ್ಲಿಸಿದರು. ನಂತರ ಬಡ್ತಿ ಹೊಂದಿ ಜೆಸ್ಕಾಂನಲ್ಲಿ ಟ್ರಾಫಿಕ್ ಇನ್‌ಸ್ಪೆಕ್ಟರ್ ಆಗಿದ್ದರು. ಚಿಟ್ಟಗುಪ್ಪ, ಬೀದರ್, ಧಾರವಾಡದಲ್ಲಿ ಸಿಪಿಐ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ಬೀದರ್, ಯಾದಗಿರಿ, ಚಿಂಚೋಳ್ಳಿಯಲ್ಲಿ ಡಿಎಸ್‌ಪಿ ಆಗಿ ಕೆಲಸ ಮಾಡಿದ್ದು, ಪ್ರಸ್ತುತ ಕಳೆದ ಆರು ತಿಂಗಳಿAದ ಕಲಬುರಗಿಯ ಗುಪ್ತಚರ ಇಲಾಖೆಯ ಕಚೇರಿಯಲ್ಲಿ ಡಿವೈಎಸ್‌ಪಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ವಿಶಿಷ್ಟ ಸೇವೆ ಪರಿಗಣಿಸಿ, ರಾಷ್ಟçಪತಿ ಪದಕ ದೊರಕಿದೆ. ಮುಂದಿನ ವಾರ ಬೆಂಗಳೂರಿನ ರಾಜಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯಪಾಲರು ರಾಷ್ಟçಪತಿ ಪದಕ ಪ್ರದಾನ ಮಾಡಲಿದ್ದಾರೆ.