ಬಸವೇಶ್ವರ ರಥೋತ್ಸವ ಅದ್ದೂರಿ

Basaveshwar Rathotsava is grand
ಬಸವನಬಾಗೇವಾಡಿ ತಾಲೂಕು ಮನಗೂಳಿ ಪಟ್ಟಣದ ಬಸವೇಶ್ವರ ಜಾತ್ರಾ ಮಹೋತ್ಸವದಂಗವಾಗಿ ಶುಕ್ರವಾರ ಸಂಜೆ ಅಪಾರ ಭಕ್ತರ ಜಯ ಘೋಷದೊಂದಿಗೆ ರಥೋತ್ಸವ ಜರುಗಿತು.
Published on

ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಸಡಗರ ಸಂಭ್ರಮದಿಂದ ರಥೋತ್ಸವ ಜರುಗುತು.

ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಗ್ಗೆ ದೇವಸ್ಥಾನದಲ್ಲಿ ರುದ್ರಾಭಿಷೇಕ ವಿಶೇಷ ಪೂಜೆ ನೆರವೇರಿಸಿ ನಂತರ ದೇವರಿಗೆ ಅಲಂಕಾರ ಮಾಡಲಾಯಿತು. ಮಧ್ಯಾಹ್ನ 3ಕ್ಕೆ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯರು, ಪಟ್ಟಿಕಂಥಿ ಹಿರೇಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಶ್ರೀಗಳ ಸಾನ್ನಿಧ್ಯದಲ್ಲಿ ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಸೋಮನಗೌಡ(ಅಪ್ಪುಗೌಡ) ಪಾಟೀಲ (ಮನಗೂಳಿ) ನೇತೃತ್ವದಲ್ಲಿ ರಥದ ಕಳಸಕ್ಕೆ ಪೂಜೆ ಸಲ್ಲಿಸಿದ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾನಪದ ಕಲಾತಂಡ ವಿವಿಧ ವಾದ್ಯ ಮೇಳದೊಂದಿಗೆ ದೇವಸ್ಥಾನಕ್ಕೆ ಆಗಮಿಸಿದ ನಂತರ ರಥಕ್ಕೆ ಕಳಸಾರೋಹಣ ನೆರವೇರಿಸಲಾಯಿತು. ಅಪಾರ ಜನಸ್ತೋಮದ ಮಧ್ಯೆ ರಥೋತ್ಸವ ಅದ್ದೂರಿಯಾಗಿ ಜರುಗಿತು. ನಂತರ ಆಕರ್ಷಕ ಸಿಡಿಮದ್ದು ಸುಡಲಾಯಿತು.

ರಥೋತ್ಸವದಲ್ಲಿ ದೇವಸ್ಥಾನ ಸಮಿತಿಯ ಸುಭಾಸಗೌಡ ಪಾಟೀಲ, ಚಂದ್ರಶೇಖರಗೌಡ ಪಾಟೀಲ, ಬಸವರಾಜ ಸಜ್ಜನ, ಸಂಗಯ್ಯ ಕಂದಗಲ್ಲಮಠ, ವೈಭವ ಜಂಗಮಶೆಟ್ಟಿ, ಪರಪ್ಪ ಬನಹಟ್ಟಿ, ವಿಠ್ಠಲ ಶಿಂಧೆ, ಸಿದ್ದಪ್ಪ ಹಾವನ್ನವರ, ಬಸವರಾಜ ಬಿರಾದಾರ, ಮಾಂತಯ್ಯ ಹಿಕ್ಕಿಮಠ, ಎಸ್.ಜಿ. ಕಂದಗಲ್ಲ, ವಿನೋದ ಪಾಟೀಲ, ಬಸವರಾಜ ಪದಮಗೊಂಡ, ಜ್ಞಾನೇಶ ಪತ್ತಾರ, ಬಸವಂತರಾಯ ಕುಲಕರ್ಣಿ, ಮಲ್ಲಪ್ಪ ತಪಶೆಟ್ಟಿ, ಬಸನಗೌಡ ಪಾಟೀಲ, ಭೀಮಗೊಂಡ ಹತ್ತರಕಿ, ಸಂಗಪ್ಪ ಪದಮಗೊಂಡ, ಬಾಬು ಯಾದವಾಡ, ಗುರಪ್ಪ ಪದಮಗೊಂಡ, ಮಲ್ಲಪ್ಪ ಬೀಳೂರ, ಶೇಖಪ್ಪ ಹಾವನ್ನವರ, ಈರಪ್ಪ ಹುಣಸಿಕಟ್ಟಿ, ಗೋವಿಂದಪ್ಪ ಚೆನ್ನಾಳ, ನಿಸಾರ ಅಹ್ಮದ ಮಕಾನದಾರ, ಮುಸ್ತಾಕ ಬಾಗೇವಾಡಿ, ವೈಭವ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net