ಬಸವೇಶ್ವರ ಬ್ಯಾಂಕ್ ಗೆ 4.12 ಕೋಟಿ ರೂ.ನಿವ್ವಳ ಲಾಭ

bkt-18-1
ಬಾಗಲಕೋಟೆ ಬಸವೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಮಾತನಾಡಿದರು
Published on

ಬಾಗಲಕೋಟೆ: ಬಸವೇಶ್ವರ ಸಹಕಾರಿ ಬ್ಯಾಂಕ್ ಗೆ 2021-22 ಸಾಲಿನಲ್ಲಿ 4.12 ಕೋಟಿ ರೂ.ನಿವ್ವಳ ಲಾಭ ಗಳಿಸಿದೆ. ಅನೇಕ ವರ್ಷಗಳಿಂದ ಬ್ಯಾಂಕ್ ಪ್ರಗತಿ ಪಥದಲ್ಲಿ ಸಾಗುತ್ತಿದೆ. ಕೋವಿಡ್ ನಿಂದ ಆರ್ಥಿಕ ಸಂಕಷ್ಟ ಎದುರಾಗಿ ಜನರ ಬದುಕನ್ನು ತಲ್ಲಣಗೊಳಿಸಿದೆ. ಆದರು ಬ್ಯಾಂಕ್ ಸಮರ್ಥವಾಗಿ ಎದುರಿಸಿ ಲಾಭದತ್ತ ಹೆಜ್ಜೆ ಇಟ್ಟಿದೆ ಎಂದು ಬಸವೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹೇಳಿದರು.
1984 ರಲ್ಲಿ ನಮ್ಮ ನಿರ್ದೇಶಕ ಮಂಡಳಿ ಮೊದಲ ಬಾರಿ ಅಧಿಕಾರ ಸ್ವೀಕರಿಸಿದ್ದಾಗ 3349 ಸದಸ್ಯರ ಸಂಖ್ಯೆ ಹೊಂದಿತ್ತು. ಇಂದು 44107 ವರೆಗೆ ಏರಿಕೆಯಾಗಿದೆ. 7 ಲಕ್ಷ ಇದ್ದ ಶೇರು ಬಂಡವಾಳ 28.00 ಕೋಟಿ ವರೆಗೆ ಏರಿಕೆಯಾಗಿದೆ. 3.48 ಲಕ್ಷ ಇದ್ದ ನಿಧಿಗಳು 76.00 ಕೋಟಿಗೆ ಏರಿಕೆಯಾಗಿದೆ. 5.62 ಲಕ್ಷ ರೂ. ಇದ್ದ ದುಡಿಯುವ ಬಂಡವಾಳ 915.00 ಕೋಟಿ ರೂ.ಗಳಿಗೆ ಏರಿದೆ. 2.07 ಲಕ್ಷ ರೂ.ಇದ್ದ ಠೇವುಗಳು 882.00 ಕೋಟಿ ರೂ.ಗಳ ವರೆಗೆ ಇದೆ. 92 ಲಕ್ಷ ರೂ. ಇದ್ದ ಸಾಲ ಬಟವಡೆ 555.00 ಕೋಟಿ ರೂ. ಗಳಿಗೆ ಏರಿದೆ. ಶೇ.26.46 ಇದ್ದ ಎನ್ ಪಿ ಎ ಇಂದು ಶೇ.5.90 ಇದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬ್ಯಾಂಕುಗಳ ಠೇವಣಿಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ. 2020-21 ನೇ ಸಾಲಿನಲ್ಲಿ 778 ಕೋಟಿ ರೂ. ಇದ್ದ ಠೇವಣಿ 2021-22 ಸಾಲಿಗೆ 778 ಕೋಟಿ ರೂ. ಆಗಿದೆ. ಕಳೆದ ವರ್ಷಕ್ಕಿಂತ 44 ಕೋಟಿ ರೂ. ಹೆಚ್ಚಳವಾಗಿದೆ. ಗ್ರಾಹಕರು, ಠೇವಣಿದಾರರ ಹಿತದೃಷ್ಠಿಯಿಂದ ಠೇವಣಿಗಳ ಬಡ್ಡಿದರವನ್ನು ವಾಣಿಜ್ಯ, ರಾಷ್ಟ್ರೀಕೃತ ಬ್ಯಾಂಕ್ಗಳಿಗ್ಗಿಂತ ಹೆಚ್ಚಳ ಮಾಡಲಾಗಿದೆ. ಹಿರಿನಾಗರಿಕರಿಗೆ ಶೇ 0.50 ಹೆಚ್ಚಿನ ಬಡ್ಡಿ ಸೌಲಭ್ಯ ಒದಗಿಸಲಾಗುತ್ತಿದೆ. 31-3-2022 ಕ್ಕೆ ಒಟ್ಟು 555 ಕೋಟಿ ರೂ. ಸಾಲ ವಿತರಿಸಲಾಗಿದೆ. 4.12 ಕೋಟಿ ಲಾಭ ಗಳಿಸಿ ಅ ವರ್ಗಗಳಿಗೆ ಅಡಿಟ್ ವರ್ಗಾಯಿಸಲಾಗಿದೆ. ಬ್ಯಾಂಕ್ ನಲ್ಲಿ ನಿಷ್ಕ್ರೀಯ ಸಾಲ 6305.03 ಲಕ್ಷ ರೂ.ಇರುತ್ತದೆ. ನಿಷ್ಟ್ರೀಯ ಸಾಲವು ನಿವ್ವಳ ಬರತಕ್ಕೆ ಸಾಲಕ್ಕೆ ಎನ್ಪಿಎ ಶೇ.5.90 ಇರುತ್ತದೆ. ಆರ್ ಬಿ ಐ ಅನುತ್ಪಾದಕ ಆಸ್ತಿಯನ್ನು ನಿರ್ಧರಿಸುವ ಕಾಲಮಿತಿಯನ್ನು ಎಲ್ಲ ಬ್ಯಾಂಕ್ ಗಳಿಗೆ 90 ದಿನ ನಿಗದಿ ಪಡಿಸಿದೆ. ಕೋವಿಡ್ ಪರಿಣಾಮದಿಂದ ಆರ್ಥಿಕ ಮೇಲೆ ಅಲ್ಪ ವ್ಯತ್ಯಾಸವಾಗಿದೆ ಎಂದು ಹೇಳಿದರು.
ಮಹಾಂತಪ್ಪ ತಪಶೆಟ್ಟಿ ಅಧ್ಯಕ್ಷತೆಯಲ್ಲಿ 1925 ರೂ. ಶೇರು ಬಂಡವಾಳದೊಂದಿಗೆ 2-3-1917 ರಂದು ಬೀಳೂರು ಗುರುಬಸವ ಶ್ರೀಗಳ ಆಶೀರ್ವಾದಿಂದ ಬಸವೇಶ್ವರ ಬ್ಯಾಂಕ್ ಆರಂಭವಾಯಿತು. ಕೇವಲ ಆರ್ಥಿಕಕ ಅಭಿವೃದ್ಧಿಗೆ ಮಾತ್ರ ಸೀಮಿಗೊಳಿದೇ ಶೈಕ್ಷಣಿಕ, ಧಾರ್ಮಿಕವಾಗಿಯು ಬ್ಯಾಂಕ್ ಸಮಾಜ ಸೇವೆ ಮಾಡುತ್ತಿದೆ. ಆರ್ಥಿಕ ಸಮಾನತೆಯ ಹರಿಕಾರ ವಿಶ್ವ ಗುರು ಬಸವಣ್ಣ ಅವರ ಆಶಯಗಳ ದಾರಿಯಲ್ಲಿ ಬ್ಯಾಂಕು ಸಾಗುತ್ತಿದೆ. ಬಾಗಲಕೋಟೆ ನಗರದಲ್ಲಿ ಪ್ರಧಾನ ಕಚೇರಿ ಸೇರಿ 6 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ವಿಜಯಪುರ, ಗೋಕಾಕ, ಗಜೇಂದ್ರಗಡ, ಗದಗ, ಧಾರವಾಡ, ಬೆಳಗಾವಿ ಸೇರಿ 27 ಶಾಖೆಗಳೊಂದಿಗೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ. 8 ಜಿಲ್ಲೆಗಳಲ್ಲಿ ಕಾರ್ಯ ಕ್ಷೇತ್ರ ವಿಸ್ತರಿಸಿಕೊಂಡಿದೆ ಎಂದು ತಿಳಿಸಿದರು.
ಬ್ಯಾಂಕಿನ ಉಪಾಧ್ಯಕ್ಷ ಎಂ.ಜಿ.ವಾಲಿ, ನಿರ್ದೇಶಕರಾದ ಶಶಿದರ ಜಿಗಳೂರ, ಸುರೇಶ ಜಂಗಿ, ಸಿದ್ದಲಿಂಗೇಶ್ವರ ಗೋಡಿ, ಜಯಮ್ಮ ಅಬ್ದಲಪುರ, ನಾರಾಯಣ ಕುಲಕರ್ಣಿ, ಶ್ರೀಶೈಲ ಆರಬ್ಬಿ, ರವಿಕುಮಾರ ಪಟ್ಟಣದ, ಸಂಗಪ್ಪ ಕಂಕಣಮೇಲಿ, ವೀರಪ್ಪ ವಿ ಶಿರಗಣ್ಣವರ, ಹೂವಪ್ಪ ರಾಠೋಡ, ಭರತಕುಮಾರ ಈಟಿ, ಉಷಾ ಜಿಗಜಿನ್ನಿ, ನಿಂಗಪ್ಪ ಪಲ್ಲೇದ, ಶ್ರೀನಿವಾಸ ಬಳ್ಳಾರಿ, ಮುಖ್ಯ ಕಾರ್ಯನಿರ್ವಣಾಧಿಕಾರಿ ವಿ.ಎಸ್.ಕೇಮಾಳಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net