ಬಸವೇಶ್ವರ ಬ್ಯಾಂಕನಿಂದ ವಿನೂತನ ಸೇವೆ

bkt-25-4
ಬಾಗಲಕೋಟೆ ನಗರದ ಬಸವೇಶ್ವರ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಭಾನುವಾರ ಸಂಪರ್ಕ ರಹಿತ ವ್ಯವಹಾರ ಸೇವೆ ಇವಿಎಂ ಚಿಪ್ ಕಾನಿಪ ಜಿಲ್ಲಾಧ್ಯಕ್ಷ ಆನಂದ ದಲಬಂಜನ ಉದ್ಘಾಟಿಸಿದರು. ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಪತ್ರಕರ್ತರಾದ ಚಂದ್ರಶೇಖರ ಜಿಗಜಿನ್ನಿ, ಮುತ್ತು ನಾಯ್ಕರ, ಮಹೇಶ ಅಂಗಡಿ ಇತರರು ಇದ್ದರು.
Published on

ಬಾಗಲಕೋಟೆ: ಗ್ರಾಹಕರ ಅನುಕೂಲಕ್ಕಾಗಿ ತನ್ನ ಸೇವೆಯಲ್ಲಿ ವಿನೂತನ, ವಿಭಿನ್ನ ಸೇವೆ ಆರಂಭಿಸುವ ಬಸವೇಶ್ವರ ಬ್ಯಾಂಕ್, ಇದೀಗ ಸಂಪರ್ಕ ರಹಿತ ವ್ಯವಹಾರ ಜಾರಿಗೊಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹೇಳಿದರು.

ನಗರದ ಬಸವೇಶ್ವರ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೊಸ ಸೇವೆ ಕುರಿತು ಮಾಹಿತಿ ಹಂಚಿಕೊಂಡ ಅವರು, ಕೋವಿಡ್ ನಂತರದಲ್ಲಿ ವಿಶ್ವದ ಅಂದಾಜು ೩೦೦ ದೇಶಗಳು ಇಂತಹ ವ್ಯವಸ್ಥೆ ಅಳವಡಿಸಿಕೊಂಡಿದ್ದು, ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿ ಬಸವೇಶ್ವರ ಬ್ಯಾಂಕ್ ಅಳವಡಿಸಿಕೊಂಡಿದೆ. ಬ್ಯಾಂಕ್ ನಿಂದ ಇವಿಎಂ ಚಿಪ್ ಒಳಗೊಂಡ ಎಟಿಎಂ ಕಾರ್ಡ್ ಇದೆ. ಪಿಒಎಸ್ ಮಶೀನಗಳಲ್ಲಿ ಇದನ್ನು ಸ್ವೀಪ್ ಮಾಡದೆ ಉಪಯೋಗಿಸಬಹುದಾಗಿದೆ. ೫ ಸಾವಿರದೊಳಗಿನ ವ್ಯವಹಾರಕ್ಕೆ ಪಿನ್‌ಕೋಡ್ ಬಳಸುವ ಅಗತ್ಯವಿಲ್ಲ. ದೈನದಿಂದ ಸಣ್ಣ ಪುಟ್ಟ ವ್ಯವಹಾರಕ್ಕೆ ಸಂಪರ್ಕ ರಹಿತ ಕಾರ್ಡ್ ಬಳಸಬಹುದಾಗಿದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.

ಕಾನಿಪ ಜಿಲ್ಲಾಧ್ಯಕ್ಷ ಆನಂದ ದಲಬಂಜನ ಉದ್ಘಾಟಿಸಿದರು. ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಪತ್ರಕರ್ತರಾದ ಚಂದ್ರಶೇಖರ ಜಿಗಜಿನ್ನಿ, ಮುತ್ತು ನಾಯ್ಕರ, ಮಹೇಶ ಅಂಗಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net