ಬಸವಾದಿ ಶರಣರಿಂದ ಕರ್ನಾಟಕ ಕನ್ನಡಮಯ

Capture
Published on

ಭಾಲ್ಕಿ: ಸಂಸ್ಕೃತ ಭಾಷಾಮಯವಾಗಿದ್ದ ಕರ್ನಾಟಕವನ್ನು ವಚನ ಸಾಹಿತ್ಯದ ಮೂಲಕ ಕನ್ನಡಮಯವಾಗಿ ಪರಿವರ್ತಿಸಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ಪುರಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಚಟುವಟಿಕೆ ಉದ್ಘಾಟನೆ ಹಾಗೂ ಜವಾಬ್ದಾರಿ ಸ್ವೀಕಾರ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಸಂಸ್ಕೃತವನ್ನು ದೇವಭಾಷೆ ಎಂದು ಬಿಂಬಿಸಿದ ಕಾಲದಲ್ಲಿ 12ನೇ ಶತಮಾನದ ಬಸವಣ್ಣನವರು ಸಾಮಾನ್ಯರ ಬಾಯಿಯಿಂದ ಕನ್ನಡದ ವಚನಗಳನ್ನು ಹೇಳಿಸುವ ಮೂಲಕ ಕನರ್ಾಟಕವನ್ನು ಕನ್ನಡಮಯವಾಗಿಸಿದ್ದರು ಎಂದರು.

ಅನ್ಯ ಭಾಷಿಕರೊಂದಿಗೆ ನಾವು ಅವರ ಭಾಷೆಯಲ್ಲೇ ಮಾತನಾಡುವ ರೂಢಿ ಬೆಳೆಸಿಕೊಂಡಿದ್ದರಿಂದ ಗಡಿಯಲ್ಲಿ ಕನ್ನಡದ ಬೆಳವಣಿಗೆ ಕುಂಠಿತವಾಗುತ್ತಿದೆ. ಅನ್ಯ ಭಾಷಿಕ ಸಂಬಂಧಿಕರೊಂದಿಗೆ ನಮ್ಮ ಭಾಷೆಯಲ್ಲಿ ಮಾತನಾಡಿದರೆ ಅವರೂ ಕನ್ನಡ ಕಲಿತುಕೊಳ್ಳುವರು. ಇದರಿಂದ ಭಾಷೆ ಬೆಳವಣಿಗೆ ಆಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ಗಡಿಯಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವ ಕಾರ್ಯವಾಗಬೇಕಿದೆ. ಎಷ್ಟೇ ಕಷ್ಟ ಬಂದರೂ ಕನ್ನಡವನ್ನು ಜೀವಂತವಾಗಿಡಬೇಕಿದೆ. ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ ಅವರು ಪಟ್ಟಣದಲ್ಲಿರುವ ಕಸಾಪವನ್ನು ಗ್ರಾಮ ಮಟ್ಟಕ್ಕೆ ಕೊಂಡೊಯ್ಯುವುದಾಗಿ ಹೇಳಿದ್ದು, ಅವರ ಕಾರ್ಯಕ್ಕೆ ನಾವೆಲ್ಲರೂ ಸಹಕಾರ ನೀಡುವುದಾಗಿ ತಿಳಿಸಿದರು.

ಪುರಸಭೆ ಅಧ್ಯಕ್ಷ ಬಸವರಾಜ ವಂಕೆ, ಪ್ರಮುಖರಾದ ರಾಜಶೇಖರ ಅಷ್ಟೂರೆ, ಮಲ್ಲಿಕಾಜರ್ುನ ಹಲಮಂಡಗೆ, ರಾಜಪ್ಪ ಪಾಟೀಲ್, ಸೂರ್ಯಕಾಂತ ಸುಂಟೆ, ಎಂ.ಎಸ್. ಮನೋಹರ, ಡಾ.ಸೋಮನಾಥ ನುಚ್ಚಾ, ಡಾ.ವೈಜಿನಾಥ ಭಂಡೆ, ಡಿ.ಜಿ.ಜಗತಾಪ, ತಾಪಂ ಇಒ ದೀಪಿಕಾ ನಾಯ್ಕರ್, ಬಿಇಒ ಬಸವಂತರಾಯ ಜಿಡ್ಡೆ, ಕ್ಷೇತ್ರ ಸಮನ್ವಯಾಧಿಕಾರಿ ಮನೋಹರ ಹೋಳ್ಕರ್, ಅಕ್ಷರ ದಾಸೋಹ ಯೋಜನೆ ಎಡಿ ಸೂರ್ಯಕಾಂತ ಪಾಟೀಲ್ ಇದ್ದರು. ರಮೇಶ ಚಿದ್ರಿ ಸ್ವಾಗತಿಸಿದರು. ರಾಜಕುಮಾರ ಸಾಲಿ ಮತ್ತು ದೀಪಕ ಥಮಕೆ ನಿರೂಪಣೆ ಮಾಡಿದರು. ವಿಜಯಕುಮಾರ ವಂದಿಸಿದರು.

ಕಸಾಪ ತಾಲೂಕು ಅಧ್ಯಕ್ಷ ಮಾಮಡಿ ಸದಾಶಯ ನುಡಿ ಹೇಳಿದರು. ನಿಟಕಪೂರ್ವ ಅಧ್ಯಕ್ಷ ಶಶಿಧರ ಕೋಸಂಬೆ ಅಧಿಕಾರ ಹಸ್ತಾಂತರಿಸಿದರು. ತಹಸೀಲ್ದಾರ್ ಕೀತರ್ಿ ಚಾಲಕ ಮಾತನಾಡಿದರು. ದಿಲೀಪ ತರನಳ್ಳೆ ವಿರಚಿತ ಹಸಿದ ಹೊಟ್ಟೆ ಕವನ ಸಂಕಲನ ಕೃತಿ ಬಿಡುಗಡೆ ಮಾಡಲಾಯಿತು. ಕಸಾಪ ತಾಲೂಕು ಮಾಜಿ ಅಧ್ಯಕ್ಷರಾದ ಶಿವಾನಂದ ಗುಂದಗೆ, ಪ್ರೊ.ಶಂಭುಲಿಂಗ ಕಾಮಣ್ಣ, ವೀರಶೆಟ್ಟಿ ಬಾವುಗೆ, ಪ್ರೊ.ಅಂಕುಶ ಢೋಲೆ, ಸುಭಾಷ ಹುಲಸೂರೆ ಅವರನ್ನು ಸನ್ಮಾನಿಸಲಾಯಿತು.
ಜಿಪ್ಸನ್ ಕೋಟೆ ಮತ್ತು ಸಂಗಡಿಗರು ಕನ್ನಡ ಗೀತೆ ಪ್ರಸ್ತುತಪಡಿಸಿದರು. ಸಂಗೀತ ಕಲಾವಿದ ಶಿವಾಜಿ ಸಗರ ಶಾಸ್ತ್ರೀಯ ಸಂಗೀತ ನಡೆಸಿಕೊಟ್ಟರು. ವಿದ್ಯಾರ್ಥಿನಿಯರು ಭರತ ನಾಟ್ಯ ಪ್ರದಶರ್ಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net