ಬಸವಾದಿ ಶರಣರ ಮಾರ್ಗದಲ್ಲಿ ನಡೆದರೆ ಜೀವನ ಸಾರ್ಥಕ

CTD ANUBAVA SRAVANA
Published on

ಚಿತ್ರದುರ್ಗ: ಶರಣ ಸಾಹಿತ್ಯ ಕನ್ನಡದ ಅತ್ಯಮೂಲ್ಯ ಆಸ್ತಿಯಾಗಿದೆ ಎಂದು ಚಿತ್ರದುರ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಪ್ರೊ. ಬಿ.ಮಂಜುನಾಥ ಹೇಳಿದರು.
ಮುರುಘಾ ಮಠದಿಂದ ಚಿತ್ರದುರ್ಗ ತಾಲೂಕು ಜಂಪಣ್ಣನಾಯಕನ ಕೋಟೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಅನುಭಾವ ಶ್ರಾವಣ ಕಾರ‌್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಾದಿ ಶರಣರ ಮಾರ್ಗದಲ್ಲಿ ನಡೆದರೆ ಜೀವನ ಸಾರ್ಥಕವಾಗಲಿದೆ ಎಂದರು.
ಸಮ್ಮುಖ ವಹಿಸಿದ್ದ ಹೆಗ್ಗುಂದ ವನಕಲ್ಲು ಮಲ್ಲೇಶ್ವರ ಮಠದ ಶ್ರೀ ಬಸವ ರಮಾನಂದ ಸ್ವಾಮೀಜಿ ಅವರು ಮಾತನಾಡಿ, 12ನೇ ಶತಮಾನದ ವಚನ ಚಳವಳಿ, ಈ ಶತಮಾನಕ್ಕೆ ದೊರೆತಿರುವ ಬಳುವಳಿ. ಜಾತಿ, ಮತ, ಪಂಥ ಭೇದವಿಲ್ಲದ ಏಕೈಕ ಪರಂಪರೆ ಎಂದರೆ ಅ ದು ಶರಣ ಪರಂಪರೆ ಎಂದರು.
ಸಾನ್ನಿಧ್ಯ ವಹಿಸಿದ್ದ ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಅವರು ಮಾತನಾಡಿ, ಈ ಬಾ ರಿಯ ಶರಣ ಸಂಸ್ಕೃತಿ ಉತ್ಸವದಲ್ಲಿ ಜಯದೇವ ಜಗದ್ಗುರುಗಳ 150ನೇ ಜಯಂತ್ಯುತ್ಸವದ ಪ್ರಯುಕ್ತ ವಿಶೇಷ ಕಾರ‌್ಯಕ್ರಮ ಏರ್ಪಡಿಸಲಾ ಗುವುದು ಎಂದರು.
ಜಾಗತಿಕ ಲಿಂಗಾಯತ ಮಹಾಸಭಾದ ಸಂಘಟನಾ ಕಾರ್ಯದರ್ಶಿ ಬಸವರಾಜ ಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮದ ಟಿ.ಐ.ಚನ್ನಬಸಪ್ಪ, ಯು.ಮಂಜುನಾಥ್, ಎಲ್.ಟಿ.ಏಕಾಂತಪ್ಪ ಮತ್ತಿತರರು ಇದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಟಿ.ಎಲ್.ಬಸವರಾಜಪ್ಪ ಸ್ವಾಗತಿಸಿ, ಗೀತಾ ರುದ್ರೇಶ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net