

ತಲ್ಲೂರ: ಶರಣರ ಬದುಕು, ಬರಹಗಳು ಪ್ರತಿಯೊಬ್ಬರ ಜೀವನಕ್ಕೂ ದಾರಿದೀಪವಾಗಿವೆ ಎಂದು ಸ್ಥಳಿಯ ಬಸವೇಶ್ವರ ಟ್ರಸ್ಟ್ ಕಮಿಟಿ ಅಧ್ಯ ವಿರೂಪಾ$ಮಾಮನಿ ಹೇಳಿದರು.
ಸುೇತ್ರ ಜಾಲಿಕಟ್ಟಿ ಬಸವೇಶ್ವರ ದೇವಸ್ಥಾನದ ಸಭಾಮಂಟಪದಲ್ಲಿ ಶ್ರಾವಣ ಮಾಸದ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಪ್ರವಚನ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶರಣರು ಮಾತು, ನಡೆ, ನುಡಿ ಎಲ್ಲವೂ ಆದರ್ಶಗಳಾಗಿವೆ ಎಂದರು.
ಇಂಚಲದ ಪೂರ್ಣಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಾರ್ಥಕ ಜೀವನಕ್ಕಾಗಿ ನಾವು ಶರಣರ ವಾಣಿ ಆಲಿಸಬೇಕು. ಬಸವಾದಿ ಶರಣರು ವಚನಗಳ ರೂಪದಲ್ಲಿ ಮಾನವಕುಲದ ಒಳಿತಿಗೆ ಅಪಾರವಾಗಿ ಶ್ರಮಿಸಿದ್ದಾರೆ ಎಂದರು.
ವಿರೂಪಾ$ಮಾಮನಿ ಅವರನ್ನು ಗ್ರಾಮಸ್ಥರು, ಶ್ರೀಗಳು ಸನ್ಮಾನಿಸಿದರು. ಮಲ್ಲಾಪುರ ಗಾಳೇಶ್ವರ ಮಠದ ಚಿದಾನಂದ ಸ್ವಾಮೀಜಿ, ಗುತ್ತಿಗೋಳಿ ಹೊಸಕೋಟಿ ರೇವಯ್ಯಜ್ಜ ಸಾನ್ನಿಧ್ಯ ವಹಿಸಿದ್ದರು, ಕಾರ್ಯದರ್ಶಿ ಚನ್ನಯ್ಯ ಪೂಜೇರ, ಗ್ರಾಪಂ ಮಾಜಿ ಅಧ್ಯ ಬಸವರಾಜ ಕಡಬಿ, ಸಂಗಯ್ಯ ಹಿರೇಮಠ, ವಿರೂಪಾ ಪೂಜೇರ, ಮಹಾದೇವಯ್ಯ ಪೂಜೇರ, ವೆ.ಎ್. ನಾಯ್ಕರ, ತಿಪ್ಪನಾಯ್ಕ ಕಡಬಿ, ಮಲ್ಲನಾಯ್ಕ ನಾಯ್ಕರ, ಈರಣ್ಣ ಕಂಬಾರ, ಸಿದ್ದಯ್ಯ ಪೂಜೇರ, ಮಲ್ಲಿಕಾರ್ಜುನ ಯಡಳ್ಳಿ, ಶಿವಾನಂದ ಅಟಿಗಲ್ಲ ಇತರರು ಇದ್ದರು.