ಬಸವಸಾಗರಕ್ಕೆ ೩೦ ಸಾವಿರ ಕ್ಯೂಸೆಕ್ ನೀರು ಒಳಹರಿವು

oppo_2
oppo_2
Published on

ಕೊಡೇಕಲ್: ಕಳೆದ ಎರಡು ದಿನಗಳಿಂದ ಜಲಾಶಯಕ್ಕೆ ಕಡಿಮೆಯಾಗಿದ್ದ ನೀರಿನ ಒಳಹರಿವಿನಲ್ಲಿ ಮಂಗಳವಾರ ಕೊಂಚ ಏರಿಕೆ ಕಂಡು ಬಂದಿದ್ದು, ಮಧ್ಯಾಹ್ನದಿಂದ ಬಸವಸಾಗರ ಜಲಾಶಯಕ್ಕೆ ೩೦ ಸಾವಿರ ಕ್ಯೂಸೆಕ್ ಪ್ರಮಾಣದ ನೀರಿನ ಒಳಹರಿವು ಉಂಟಾಗಿದೆ ಎಂದು ಆಣೆಕಟ್ಟು ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಲಾಶಯದ ಹಿನ್ನಿರಿನ ವ್ಯಾಪ್ತಿ ಪ್ರದೇಶದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದ ಕಾರಣ ನೀರಿನ ಒಳಹರಿವಿನಲ್ಲಿ ಏರಿಳಿತಗಳು ಕಂಡು ಬರುತ್ತಿದ್ದು, ಇದರಿಂದಾಗಿ ಜಲಾಶಯದ ನೀರಿನ ಸಂಗ್ರಹ ಮಟ್ಟ ಕಾಯ್ದುಕೊಳ್ಳಲು ಅಧಿಕಾರಿಗಳು ನಿರತರಾಗಿದ್ದಾರೆ. ಬಾನುವಾರ ಜಲಾಶಯಕ್ಕೆ ೫೦ ಸಾವಿರ ಕ್ಯೂಸೆಕ್ ಪ್ರಮಾಣ ನೀರಿನ ಒಳಹರಿವು ಉಂಟಾದ ಕಾರಣ ಜಲಾಶಯದ ೧೪ ಮುಖ್ಯ ಕ್ರಸ್ಟ್ ಗೇಟು ತೆರೆದು ನದಿಗೆ ೫೨ ಸಾವಿರ ಕ್ಯೂಸೆಕ್ ನೀರು ಬಿಡಲಾಗಿತ್ತು. ಆದರೆ ಭಾನುವಾರ ದಿಢೀರನೇ ಒಳಹರಿವಿನಲ್ಲಿ ಇಳಿಕೆ ಕಂಡು ಬಂದಿದ್ದು ಮಂಗಳವಾರ ಬೆಳಗ್ಗೆಯಂದು ಜಲಾಶಯಕ್ಕೆ ಕೇವಲ ೧೨ ಸಾವಿರ ನೀರಿನ ಒಳಹರಿವಿತ್ತು. ಆದರೆ ಮಧ್ಯಾಹ್ನದಿಂದ ಜಲಾಶಯಕ್ಕೆ ಮತ್ತೆ ೩೦ ಸಾವಿರ ಕ್ಯೂಸೆಕ್ ಪ್ರಮಾಣದ ಒಳಹರಿವು ಉಂಟಾದ ಕಾರಣ ೯ ಗೇಟುಗಳ ಮೂಲಕ ೩೦೦೭೫ ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಒಟ್ಟಾರೆ ನೀರಿನ ಒಳಹರಿವಿನಲ್ಲಿ ಏರಿಳಿತಗಳು ಕಂಡು ಬರುತ್ತಿರುವ ಕಾರಣ ಜಲಾಶಯದ ನೀರಿನ ಸಂಗ್ರಹದಲ್ಲಿಯೂ ಕೂಡ ಏರಿಳಿತಗಳ ಕಂಡು ಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net