ಬಸವಸಾಗರಕ್ಕೆ ೧ಲಕ್ಷ ಕ್ಯೂಸೆಕ್ ಒಳಹರಿವು

03-07kodekal03
Published on

ಕೊಡೇಕಲ್: ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಬುಧವಾರ ರಾತ್ರಿಯಿಂದ ೧ಲಕ್ಷ ಕ್ಯೂಸೆಕ್ ಪ್ರಮಾಣದ ನೀರಿನ ಒಳಹರಿವು ಉಂಟಾದ ಕಾರಣ ಜಲಾಶಯದ ೩೦ ಮುಖ್ಯಕ್ರಸ್ಟ್ ಗೇಟುಗಳ ಮೂಲಕ ಕೃಷ್ಣಾ ನದಿಗೆ ೯೫೨೬೫ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಬುಧವಾರ ಸಂಜೆವರೆಗೆ ಜಲಾಶಯಕ್ಕೆ ೮೦ ಸಾವಿರ ಕ್ಯೂಸೆಕ್ ನೀರಿನ ಒಳಹರಿವು ಇದ್ದ ಕಾರಣ ಜಲಾಶಯದ ೨೬ ಗೇಟುಗಳ ಮೂಲಕ ನದಿಗೆ ೭೬೩೩೦ ಕ್ಯೂಸೆಕ್ ನೀರು ಬಿಡಲಾಗಿತ್ತು.

ಆದರೆ ಆಲಮಟ್ಟಿ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ನದಿಗೆ ಹರಿಸುತ್ತಿರುವ ಹಿನ್ನೆಲೆಯಲಲ್ಲಿ ಬಸವಸಾಗರ ಜಲಾಶಯಕ್ಕೆ ಬುಧವಾರ ರಾತ್ರಿ ೧೧ರಿಂದ ೧ ಲಕ್ಷ ಕ್ಯೂಸೆಕ್ ಒಳಹರಿವು ಬಂದ ಕಾರಣ ನೀರಿನ ಸಂಗ್ರಹಮಟ್ಟ ಕಾಯ್ದುಕೊಂಡು ಅಧಿಕಾರಿಗಳು ನದಿಗೆ ೯೫೨೬೫ ಕ್ಯೂಸೆಕ್ ನೀರು ಹರಿಸುತ್ತಿದ್ದಾರೆ. ೪೯೨.೨೫೨ ಮೀ ಗರಿಷ್ಠ ನೀರು ಸಂಗ್ರಹದ ಜಲಾಶಯದಲ್ಲೀಗ ನೀರಿನ ಮಟ್ಟ ೪೯೦.೭೩ ಮೀ. ತಲುಪಿದೆ. ೩೩.೩೧೩ ಟಿಎಂಸಿ ಗರಿಷ್ಟ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯ ಸದ್ಯ ೨೬.೭೮ ಟಿಎಂಸಿ ನೀರು ಸಂಗ್ರಹಗೊAಡಿದ್ದು ಶೇ೮೦.೩೯ ಜಲಾಶಯ ಭರ್ತಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net