

ಪವನ ದೇಶಪಾಂಡೆ ಕೊಡೇಕಲ್
ಹುಣಸಗಿ ತಾಲೂಕಿನ ನಾರಾಯಣಪುರನ ಬಸವಸಾಗರ ಜಲಾಶಯ ಈ ಬಾರಿ ತಿಂಗಳಲ್ಲಿಯೇ ಎರಡೆರಡು ಬಾರಿ ಜಲಾಶಯ ಭತರ್ಿಯಾಗಿದ್ದರೂ ಕೂಡ ಈವರೆಗೆ ಬಾಗಿನ ಅಪರ್ಿಸುವ ಭಾಗ್ಯ ಇನ್ನೂ ಕೂಡಿ ಬಂದಿಲ್ಲ.
ಜಲಾಶಯ ವ್ಯಾಪ್ತಿಯಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗದಿದ್ದರೂ ಕೂಡಾ ಮಹಾರಷ್ಟ್ರ ಸೇರಿ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕವಾಗಿ ಸುರಿದ ಮಳೆಯಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬಂದ ಕಾರಣ ಜಲಾಶಯದಲ್ಲಿ ನೀರು ತುಂಬಿ ತುಳುಕುತ್ತಿದೆ.
ಈ ತಿಂಗಳ ಮೊದಲ ವಾರದಲ್ಲಿಯೇ ನೀರಿನ ಸಂಗ್ರಹವಿಲ್ಲದೆ ಭಣಗುಡುತ್ತಿದ್ದ ಬಸವಸಾಗರ ಜಲಾಶಯಕ್ಕೆ ಜು.11ರಿಂದ ನೀರಿನ ಒಳಹರಿವು ಹಂತ ಹಂತವಾಗಿ ಏರಿಕೆಯಾಗತೊಡಗಿತು. ಇದರಿಂದ ತನ್ನ ಸಾಮಥ್ರ್ಯ ಕಾಯ್ದುಕೊಂಡು ಮೊದಲ ಎರಡು ಗೇಟ್ನಿಂದ ಆರಂಭವಾಗಿ 24 ಮುಖ್ಯ ಗೇಟ್ಗಳ ಮೂಲಕ ಅಪಾರ ಪ್ರಮಾಣದ ನೀರು ಕೃಷ್ಣಾ ನದಿಗೆ ಹರಿಸಲಾಗಿದೆ. ತನ್ನ ಒಡಲನ್ನ ತುಂಬಿಕೊಂಡ ಬಸವಸಾಗರಕ್ಕೆ ಬಾಗಿನ ಅಪರ್ಿಸಬೇಕು ಎಂಬ ಬೇಡಿಕೆ ಇಲ್ಲಿನ ರೈತರದ್ದಾಗಿದೆ.
ಜಲಾಶಯಕ್ಕೆ ಕೂಡಿ ಬರದ ಬಾಗಿನ ಭಾಗ್ಯ: ರೈತರ ಜೀವನಾಡಿಯಾದ ಬಸವಸಾಗರ ಜಲಾಶಯ ಒಂದು ತಿಂಗಳಲ್ಲಿಯೇ ಎರಡೆರಡು ಬಾರಿ ಭತರ್ಿಯಾಗುತ್ತಿದ್ದರೂ ಕೂಡಾ ಈವರೆಗೆ ಬಾಗಿನ ಅಪರ್ಿಸುವ ಭಾಗ್ಯ ಸಿಗದಿರುವುದು ಅನ್ನದಾತರಿಗೆ ಪ್ರಶ್ನೆಯಾಗಿ ಕಾಡುತ್ತಿದೆ. ನಮ್ಮಲ್ಲಿ ನಿರೀಕ್ಷಿತ ಮಳೆಯಾಗದಿದ್ದರೂ ಮಹಾರಾಷ್ಟ್ರ ಮಳೆಯಿಂದಾಗಿ ಭತರ್ಿಯಾಗಿರುವ ನಮ್ಮ ತಾಯಿಗೆ (ಜಲಾಶಯಕ್ಕೆ) ಪೂಜೆ ಸಲ್ಲಿಸಬೇಕು ಎಂಬುದು ರೈತರ ಒತ್ತಾಯವಾಗಿದ್ದು, ತುಂಬಿ ಕೊಂಡಿರುವ ಜಲಾಶಯಕ್ಕೆ ಬಾಗಿನ ಅಪರ್ಿಸುವ ದಿನಾಂಕ ಇನ್ನೂ ನಿಗದಿಯಾಗದಿರುವುದು ವಿಪರ್ಯಾಸ ಎನ್ನುವಂತಾಗಿದೆ.
ಭೇಟಿ ನೀಡದ ಜಿಲ್ಲಾ ಉಸ್ತುವಾರಿ ಸಚಿವ: ರಾಜ್ಯದ ಮೂರನೇ ಅತಿ ದೊಡ್ಡ ಆಣೆಕಟ್ಟು ಎಂಬ ಖ್ಯಾತಿ ಹೊಂದಿರುವ ಬಸವಸಾಗ ಜಲಾಶಯ ಭತರ್ಿಯಾಗಿ ಪ್ರವಾಸಿಗರ ಗಮನ ತನ್ನತ್ತ ಸೆಳೆಯುತ್ತಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರೂ ಇತ್ತ ಮುಖ ಮಾಡಿ ಕೂಡ ನೋಡುತ್ತಿಲ್ಲ. ಪ್ರವಾಹ ಉಂಟಾಗಬಹುದು ಎಂದು ಜಿಲ್ಲಾ ಕೇಂದ್ರದಲ್ಲಿ ಸಭೆ ಮುಗಿಸಿ ಕೈತೊಳೆದುಕೊಂಡ ಸಚಿವರು, ಜಲಾಶಯಕ್ಕೆ ಬಾಗಿನ ಅಪರ್ಿಸುವ ಮನಸ್ಸು ಕೂಡ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿವೆ. ಈಗಲಾದರೂ ಸಚಿವರು ಜಲಾಶಯಕ್ಕೆ ಭೇಟಿ ನೀಡಿ ರೈತರ ಜೀವನಾಡಿಯಾಗಿದ್ದ ತಾಯಿ (ಜಲಾಶಯಕ್ಕೆ)ಬಾಗಿನ ಅಪರ್ಿಸುವ ಕಾರ್ಯ ಕೈಗೊಳ್ಳಲಿ ಎಂಬುದು ಈ ಭಾಗದ ರೈತರ ಒತ್ತಾಯವಾಗಿದೆ.