ಬಸವಲಿಂಗ ಸ್ವಾಮೀಜಿ ಕೊಡುಗೆ ಅಪಾರ

web4
ಬಟಕುರ್ಕಿ ಚೌಕಿಮಠದ ಬಸವಲಿಂಗ ಸ್ವಾಮೀಜಿ ಜನ್ಮದಿನ ನಿಮಿತ್ತ ಭಕ್ತರು ಶ್ರೀಗಳನ್ನು ಸತ್ಕರಿಸಿದರು. ಈರಣ್ಣ ಪಟ್ಟಣಶೆಟ್ಟಿ, ವಿರೂಪಾಕ್ಷಪ್ಪ ಮುದಕವಿ, ಡಾ.ವಿ.ವಿ.ಗಾಣಿಗೇರ ಇದ್ದರು.
Published on

ರಾಮದುರ್ಗ: ಬಟಕುರ್ಕಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಚೌಕೇಶ್ವರ ಮಠದ ಪೀಠಾಧಿಪತಿ ಬಸವಲಿಂಗ ಸ್ವಾಮೀಜಿ ಪಾತ್ರ ಪ್ರಮುಖವಾಗಿದೆ ಎಂದು ವಕೀಲ ಈರಣ್ಣ ಪಟ್ಟಣಶೆಟ್ಟಿ ಹೇಳಿದರು. ತಾಲೂಕಿನ ಬಟಕುರ್ಕಿ ಗ್ರಾಮದ ಚೌಕೇಶ್ವರ ಮಠದ ಪೀಠಾಧಿಪತಿ ಬಸವಲಿಂಗ ಸ್ವಾಮೀಜಿ 53ನೇ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಬಟಕುರ್ಕಿ ಗ್ರಾಮವನ್ನು ಪುಣ್ಯಕ್ಷೇತ್ರವಾಗಿ ಪರಿವರ್ತಿಸುವ ಮೂಲಕ ಅಪಾರ ಸಂಖ್ಯೆಯ ಭಕ್ತರನ್ನು ಗಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಲೋಕಾಪುರದ ಮಹಾಂತ ದೇವರು, ಶ್ರೀಕಾಂತಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ವಿರೂಪಾಕ್ಷಪ್ಪ ಮುದಕವಿ, ಡಾ.ವಿ.ವಿ.ಗಾಣಿಗೇರ, ಶಿವಪ್ಪ ಯಾದವಾಡ, ನಾಗಣ್ಣ ನಿರಾಕಾರಿ, ಮಹಾಂತೇಶ ಗುಂಡಾಳಿ, ಅಶೋಕ ಶೆಟ್ಟರ, ನಿಂಗಣ್ಣ ಕಲಾದಗಿ, ಮಹಾಂತೇಶ ದೇಸಾಯಿ, ಬಸಲಿಂಗಪ್ಪ ದುಗಾಣಿ, ಬಸವರಾಜ ಸಿದ್ದಣ್ಣವರ, ಶಿವಾನಂದ ಲಕ್ಕನ್ನವರ ಇತರರಿದ್ದರು.
ಬಟಕುರ್ಕಿ ಚೌಕಿಮಠದ ಬಸವಲಿಂಗ ಸ್ವಾಮೀಜಿ ಜನ್ಮದಿನ ನಿಮಿತ್ತ ಭಕ್ತರು ಶ್ರೀಗಳನ್ನು ಸತ್ಕರಿಸಿದರು. ಈರಣ್ಣ ಪಟ್ಟಣಶೆಟ್ಟಿ, ವಿರೂಪಾಕ್ಷಪ್ಪ ಮುದಕವಿ, ಡಾ.ವಿ.ವಿ.ಗಾಣಿಗೇರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net