ಬಸವನ ಕರೆತರಲು ಒಂದಾಗೋಣ

_DSC3478 copy
Published on

ಯಾದಗಿರಿ: ಯಾದಗಿರಿ ಜಿಲ್ಲೆಯಾಗಿ ದಶಕವಾರೂ ಜಿಲ್ಲಾ ಕೆಂದ್ರದಲ್ಲಿ ಬಸವೇಶ್ವರ ಪುತ್ಥಳಿ ಸ್ಥಾಪನೆ ಸಾಧ್ಯವಾಗುತ್ತಿಲ್ಲ. ಇದು ನಮ್ಮಲ್ಲಿನ ಒಡಕು ಎತ್ತಿ ತೋರಲಿದ್ದು, ಪುತ್ಥಳಿ ಸ್ಥಾಪನೆಗಾಗಿ ವೀರಶೈವ ಸಮಾಜದ ಪ್ರತಿಯೊಬ್ಬರೂ ಒಗ್ಗಟ್ಟಾಗಿ ನಿಲ್ಲಬೇಕಾದ ಅಗತ್ಯವಿದೆ ಎಂಬ ಅಭಿಪ್ರಾಯ ಶನಿವಾರ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ವ್ಯಕ್ತವಾಗಿದೆ.

ಕಚೇರಿ ಉದ್ಘಾಟಿಸಿದ ಶಾಸಕ ವೆಂಕಟರಡ್ಡಿ ಮುದ್ನಾಳ್ ಮಾತನಾಡಿ, ನಮ್ಮದು ಹೇಳಿಕೊಳ್ಳಲು ದೊಡ್ಡ ಸಮಾಜ. ಆದರೆ ಜಗತ್ತಿಗೆ ಜ್ಞಾನದಾಸೋಹ ಉಣಬಡಿಸಿದ ಬಸವೇಶ್ವರ ಪುತ್ಥಳಿ ನಿಮರ್ಾಣಕ್ಕೆ ಕಾಲ ಕೂಡಿಬರುತ್ತಿಲ್ಲ ಎಂಬುದು ಬೇಸರದ ವಿಷಯ ಎಂದರು. ಈ ಮಾತಿಗೆ ವೇದಿಕೆಯಲ್ಲಿದ್ದ ಎಲ್ಲ ಅತಿಥಿಗಳು ಅನುಮೋದಿಸಿದರು. ಒಗ್ಗಟ್ಟಿನ ಕೊರತೆ, ನಮ್ಮ ನಮ್ಮಲ್ಲೇ ಕಿತ್ತಾಟಗಳಿದ್ದರೆ ಬೇರೆಯವರು ನಮಗ್ಹೇಗೆ ಗೌರವ ಕೊಡುತ್ತಾರೆ ಎಂದ ಶಾಸಕರು, ಸೂಕ್ಷ್ಮವಾಗಿ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ಹೇಳುವುದನ್ನು ಮರೆಯಲಿಲ್ಲ.

ಹುಣಸಗಿಯಂಥ ಸಣ್ಣ ಪಟ್ಟಣದಲ್ಲಿ ಅಶ್ವಾರೂಢ ಬಸವೇಶ್ವರ ಪುತ್ಥಳಿ ಸ್ಥಾಪನೆಯಾಗಿದೆ. ಆದರೆ ನಮ್ಮಲ್ಲಿ ಸಾಧ್ಯವಾಗುತ್ತಿಲ್ಲ. ಲಿಂಗಾಯತ ಹಾಗೂ ವೀರಶೈವ ಸಮಾಜ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸುದೈವಕ್ಕೆ ಯಾದಗಿರಿ ಜಿಲ್ಲೆಯಲ್ಲಿ ವೀರಶೈವ ಸಮಾಜ ಸಂಘಟಿತವಾಗಿದೆ. ಇನ್ನೂ ಹೆಚ್ಚು ಸಾಂಘಿಕ ಶಕ್ತಿ ಮೆರೆಯಬೇಕು. ಇದಕ್ಕೆ ಸಮಾಜದ ತರುಣರಿಂದ ಹಿಡಿದು ವೃದ್ಧರವರೆಗೂ ಒಗ್ಗಟ್ಟಾಗಬೇಕು ಎಂದು ಸಲಹೆ ನೀಡಿದರು.

ಮಾಜಿ ಎಂಎಲ್ಸಿ ಚೆನ್ನಾರಡ್ಡಿ ಪಾಟೀಲ್ ತುನ್ನೂರ ಮಾತನಾಡಿ, ಬಸವ ಪುತ್ಥಳಿ ಸ್ಥಾಪನೆ ವಿಷಯದಲ್ಲಿ ರಾಜಕೀಯ ಮಾಡಬೇಕಿಲ್ಲ. ರಾಜ್ಯದಲ್ಲಿ ಬಿಜೆಪಿ ಸಕರ್ಾರ ಅಧಿಕಾರದಲ್ಲಿದೆ. ಸ್ಥಳಿಯವಾಗಿಯೂ ಬಿಜೆಪಿ ಶಾಸಕರಿದ್ದಾರೆ. ಇಲ್ಲಿ ಪಕ್ಷದ ಬಗ್ಗೆ ನಾನು ಮಾತನಾಡಲ್ಲ. ಬಸವೇಶ್ವರ ಪುತ್ಥಳಿ ಸ್ಥಾಪನೆ ವಿಷಯದಲ್ಲಿ ಶಾಸಕರಿಗೆ ನಮ್ಮ ಸಂಪೂರ್ಣ ಸಹಕಾರ ಕೊಡುತ್ತೇವೆ ಎಂದು ಸಾಥ್ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪಗೌಡ ಮಲ್ಹಾರ ಮಾತನಾಡಿ, ವೀರಶೈವ ಸಮಾಜ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗಲಿದೆ. ಜಿಲ್ಲಾ ಕೇಂದ್ರದಲ್ಲಿ ಜಗಜ್ಯೋತಿ ಬಸವೇಶ್ವರ ಪುತ್ಥಳಿ ಸ್ಥಾಪನೆ ಬಗ್ಗೆ ಸಮಾಜದವರು ಸಭೆ ಸೇರಿ ಸೂಕ್ತ ನಿಧರ್ಾರಕ್ಕೆ ಬರಬೇಕು ಎಂದು ಕೋರಿದರು.

ಸಮಾಜದ ತಾಲೂಕು ಅಧ್ಯಕ್ಷ ಆರ್.ವಿಶ್ವನಾಥರಡ್ಡಿ ಮಾತನಾಡಿ, ವೀರಶೈವ ಮಹಾಸಭಾ ತಾಲೂಕು ಘಟಕದ ಕಚೇರಿ ಕಾಯರ್ಾರಂಭ ಮಾಡಿದ್ದು, ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾಜ ಕಟ್ಟುವ ಕೆಲಸ ಮಾಡುವುದಾಗಿ ತಿಳಿಸಿದರು.

ಮಹಾಸಭಾ ನಗರಾಧ್ಯಕ್ಷ ಅಯ್ಯಣ್ಣ ಹುಂಡೇಕಾರ ಮಾತನಾಡಿ, ರಾಜ್ಯದಲ್ಲಿ ಇದೇ ಮೊದಲ ಬಾರಿ ಯಾದಗಿರಿಯಲ್ಲಿ ಸಮಾಜದ ತಾಲೂಕು ಘಟಕದ ಕಚೇರಿ ಆರಂಭಗೊಂಡಿದ್ದು ಉತ್ತಮ ಬೆಳವಣಿಗೆ ಎಂದರು. ಸಾನ್ನಿಧ್ಯ ವಹಿಸಿದ್ದ ಹೆಡಗಿಮದ್ರಾದ ಶ್ರೀ ಶಾಂತಮಲ್ಲಿಕಾಜರ್ುನ ಸ್ವಾಮೀಜಿ, ಯಾದಗಿರಿಯಲ್ಲಿ ವೀರಶೈವ ವಿದ್ಯಾಥಿಗಳಿಗೆ ವಸತಿನಿಲಯ ಸ್ಥಾಪಿಸುವ ಬಗ್ಗೆ ಹಿರಿಯರು ಚಿಂತನೆ ನಡೆಸಬೇಕಿದೆ. ಬೇರೆ ಜಿಲ್ಲೆಗಳಲ್ಲಿ ವಸತಿ ನಿಲಯಗಳಿದ್ದು, ನಮ್ಮಲ್ಲೂ ಶೀಘ್ರ ಕಾಯರ್ಾರಂಭ ಮಾಡಲಿ ಎಂದು ಆಶಯ ವ್ಯಕ್ತಪಡಿಸಿದರು.
ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ್ ಇದ್ದರು. ನೀಲಕಂಠ ಸ್ವಾಗತಿಸಿದರು. ವೆಂಕಟೇಶ ಕಲಕಂಬ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net