

ತುಮಕೂರು: ಸಮಾಜದಲ್ಲಿನ ಮೇಲುಕೀಳು, ಬಡತನ, ಅಜ್ಞಾನ ತೊಲಗಬೇಕಾದರೆ ಬಸವತತ್ವದ ಅನುಷ್ಠಾನದಿಂದ ಮಾತ್ರ ಸಾಧ್ಯ ಎಂದು ಬಸವತತ್ವ ಚಿಂತಕಿ ಶಬ್ರೀನಾ ಮಹಮದಾಲಿ ಹೇಳಿದರು.
ನಗರದ ಮುರುಘ ರಾಜೇಂದ್ರ ಸಭಾಂಗಣದಲ್ಲಿ ಶನಿವಾರ ಬಸವಕೇಂದ್ರ, ಜಯದೇವ ವಿದ್ಯಾರ್ಥಿನಿಲಯ ಟ್ರಸ್ಟ್, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಟಕ ಏರ್ಪಡಿಸಿದ್ದ ಬಸವಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಕಲುಷಿತಗೊಂಡಿರುವ ಬಸವತತ್ವವನ್ನು ಶುದ್ಧೀಕರಣಗೊಳಿಸಿ ಅವನ್ನು ಜಾಗತೀಕರಣಗೊಳಿಸಿದರೆ ಬಸವಣ್ಣ ಜಗತ್ತಿನ ಶ್ರೇಷ್ಠ ಮನೋವಿಜ್ಞಾನಿಯಾಗಿ ಬಣ್ಣಿಸಲ್ಪಡುತ್ತಾನೆ ಎಂದರು.
ಸಮಸಮಾಜ ನಿರ್ಮಾಣ ಮಾಡಲು ಬಸವಣ್ಣ ಇಡೀ ಜಗತ್ತಿನಲ್ಲೇ ವೈಶಿಷ್ಟ$್ಯಪೂರ್ಣವಾದ ಶರಣ ಸಂಸತಿಯನ್ನು ಸ್ಥಾಪಿಸಿ ಕನ್ನಡ ನೆಲದ ಅಸ್ಮಿತೆ ಎನಿಸಿಕೊಂಡಿದ್ದಾರೆ. ಸ್ಥಾಪಿತ ಸಂಸತಿಯ ವಿರುದ್ಧ ಸಮಾನ ಮನಸ್ಕ ಶರಣರನ್ನು ಸಂಘಟಿಸಿ ಅವಿರತವಾದ ಹೋರಾಟವನ್ನು ನಡೆಸಿ ಸರ್ವಸಮಾನತೆಯ ಸಮಾಜವನ್ನು ಕಟ್ಟುವ ಉದ್ದೇಶದಿಂದ ಶರಣ ಸಂಸತಿ ಹುಟ್ಟುಹಾಕಿದರು ಎಂದು ತಿಳಿಸಿದರು.
ಶೋಷಿತ ಸಮುದಾಯಗಳ ಶೂದ್ರ ವರ್ಗಗಳ ಬಾಳಿಗೆ ಬೆಳಕಾಗಿ ಬಂದ ಬಸವಣ್ಣ ಕಗ್ಗತ್ತಲಿನಲ್ಲಿದ್ದ ಅವರಿಗೆ ಆತ್ಮವಿಶ್ವಾಸವನ್ನು ತುಂಬಿ ಅವರಿಗೆ ಸಾಮಾಜಿಕ ಅಂತಸ್ತನ್ನು ನೀಡಲು ಏಕದೇವೋಪಾಸನೆಯ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ಲಿಂಗಾಯಿತರೆಲ್ಲರೂ ಅರಿವಿನ ಕುರುಹಾದ ಪೂಜಾ ಮಧ್ಯವರ್ತಿಗಳಿಲ್ಲದ ಇಷ್ಠಲಿಂಗಾರಾಧನೆಯನ್ನೆ ಮಾಡುವಂತೆ ಹೇಳಿ ದೇವಾಲಯವನ್ನು ನಿರಾಕರಿಸಿ ದೇಹವನ್ನೇ ದೇವಾಲಯವನ್ನಾಗಿ ಮಾಡಿದ ವಿಶ್ವದ ಶ್ರೇಷ್ಠ ಚಿಂತಕ ಬಸವಣ್ಣ ಎಂದು ಬಣ್ಣಿಸಿದರು.
ಶತಶತಮಾನಗಳಿಂದ ರ್ನಿಲಕ್ಷ್ಯಕ್ಕೆ ಒಳಗಾಗಿದ್ದ ಸ್ತ್ರೀಯರಿಗೆ ಸಮಾನತೆ ತಂದುಕೊಟ್ಟ ಬಸವಣ್ಣ ಅವರು ವ್ಯಕ್ತಿ ಶುದ್ಧಿಯೊಂದಿಗೆ ಸಮಾಜ ಶುದ್ಧಿಯನ್ನು ಸಾಧಿಸಬಹುದು. ಅವರು ವಚನಸಾಹಿತ್ಯ ಮೂಲಕ ಪ್ರತಿಪಾದಿಸಿದ ಸಮಾಜಮುಖೀ ಜೀವನಮೌಲ್ಯಗಳು ಸಾರ್ವತ್ರಿಕವಾದವುಗಳು. ಶರಣರ ಮೂಲ ಆಶಯವೇ ಆತ್ಮಕಲ್ಯಾಣ ಮತ್ತು ಲೋಕಕಲ್ಯಾಣ ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಸ್.ಪರಮೇಶ್ ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಮಾತೆಂಬುದು ಜ್ಯೋರ್ತಿಲಿಂಗ ಎಂದು ಹೇಳಿರುವ ಶರಣರು ಭೌತಿಕವಾಗಿ ತುಟಿಗಳಿಂದ ಹೊರಬರುವ, ಕೇವಲ ಔಪಚಾರಿಕ ಮಾತುಗಳಾಗದೆ ಶಿವನನ್ನು ಭಕ್ತಿಶ್ರದ್ಧೆಗಳಿಂದ ಆರಾಧಿಸುವ ಅನುಭಾವದ ಅಭಿವ್ಯಕ್ತಿಯ ದಿವ್ಯ ಸಾಧನವಾಗಬೇಕು ಎಂದು ಬಸವಣ್ಣನವರು ಅನೇಕ ವಚನಗಳಲ್ಲಿ ತಿಳಿಸಿದ್ದಾರೆ ಎಂದರು.ಶರಣತತ್ವ ಚಿಂತಕರಾದ ಎಂ.ಜಿ.ಶಿವಲಿಂಗಯ್ಯ ಮತ್ತು ಪ್ರೇಮಾ ಶಿವಬಸಪ್ಪ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಮಹಮ್ಮದ್ ಮನ್ಸೂರ್ ಆದಿಲ್, ಅತಿಹೆಚ್ಚು ಅಂಕಗಳಿಸಿದ ವಿ.ಭವಾನಿ, ವರ್ಷಗೌಡ ಮತ್ತು ದ್ವೀತಿಯ ಪಿಯುಸಿಯಲ್ಲಿ ಎಸ್.ದೀಕ್ಷಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಸಮಾರಂಭದಲ್ಲಿ ಕೈಗಾರಿಕೋದ್ಯಮಿ ಡಿ.ವಿ.ಶಿವಾನಂದ್, ಬಸವಕೇಂದ್ರದ ಅಧ್ಯೆ ಸಿದ್ಧಗಂಗಮ್ಮ ಸಿದ್ದರಾಮಣ್ಣ, ಸಂಶೋಧಕ ಡಾ.ಡಿ.ಎನ್.ಯೋಗೀಶ್ವರಪ್ಪ ಉಪಸ್ಥಿತರಿದ್ದರು.