ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಚಂದ್ರಾರೆಡ್ಡಿ, ಜಿಲ್ಲಾ ವಕ್ತಾರ ಎಲ್.ಎ.ಮಂಜುನಾಥ್, ಕಿಸಾನ್ ಖೇತ್ ಅಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ನಗರಸಭೆ ಸದಸ್ಯ ಬಿ.ಎಂ.ಮುಬಾರಕ್, ಬ್ಲಾಕ್ ಅಧ್ಯಕ್ಷರಾದ ಪ್ರಸಾದ್‍ಬಾಬು ಇತರರಿದ್ದರು.
ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಬೆಳಗ್ಗೆ, ಮಧ್ಯಾಹ್ನ, ಸಂಜೆ ಒಂದು ಮಾತನಾಡುತ್ತಾರೆ. ನಾನು ಆ ಮಟ್ಟಕ್ಕೆ ಏನೂ ಮಾತನಾಡುವುದಿಲ್ಲ. ಅವರು ಹುಟ್ಟು ಕಾಗ್ರೆಸ್ಸಿಗರು. ಜ್ಞಾನೋದಯ ಆಗಲಿ, ಇರುವುದಾದರೆ ಕಾಂಗ್ರೆಸ್‍ನಲ್ಲಿ ಇರಲಿ ಎಂದು ಹೇಳಿದರು.
ಯಾವ ವರ್ಗದಲ್ಲಿ ಎಷ್ಟು ಜನ ವಿದ್ಯಾವಂತರಾಗಿದ್ದಾರೆ, ಅವರ ಆರ್ಥಿಕ ಪರಿಸ್ಥಿತಿ, ಭೂ ಹಿಡುವಳಿ ಏನು ಎಂಬುದನ್ನು ಆಧಾರವಾಗಿಟ್ಟುಕೊಂಡು ಯಾರು ಯಾವ ವರ್ಗಕ್ಕೆ ಸೇರಬೇಕು ಎಂಬುದನ್ನು ಸ್ವಾಯುತ್ತ ಸ್ಥಾನಮಾನ ಹೊಂದಿರುವ ಆಯೋಗಗಳು ವೈಜ್ಞಾನಿಕವಾಗಿ ತೀರ್ಮಾನ ಮಾಡಬೇಕೇ ಹೊರತು ರಾಜಕೀಯವಾಗಿ ತೀರ್ಮಾನ ಮಾಡಲು ಸಾಧ್ಯವಿಲ್ಲ ಎಂದು ನುಡಿದರು.
ಸಮಾಜದಲ್ಲಿ ಅತಿ ಹಿಂದುಳಿದಿರುವ ಪ.ಜಾತಿಗೆ ಶೇ.15, ಎಸ್‍ಟಿ ಶೇ.7ರಷ್ಟು ಮೀಸಲಾತಿಯನ್ನು ಸಂವಿಧಾನದಲ್ಲಿ ನೀಡಲಾಗಿದೆ.ಉಪಜಾತಿಗಳಲ್ಲಿ ಸಾಮಾಜಿಕ, ಶೈಕ್ಷಣಿಕ ಆರ್ಥಿಕವಾಗಿ ಹಿಂದುಳಿದಿದ್ದರೆ ಅವುಗಳನ್ನು ಮೇಲೆ ತರಲು ವಿಶೇಷ ಯೋಜನೆಗಳಿವೆ. ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದ ಯಾವುದೇ ಸಮಾಜವಾದರೂ ಸರಿ ಒಂದು ಅವಕಾಶ ಮಾಡಿ ಅವರನ್ನು ಮುಖ್ಯವಾಹಿನಿಗೆ ತರಲು ಅವಕಾಶ ಇರುವಾಗ ಮೀಸಲಾತಿ ಹೋರಾಟಗಳಿಂದ ಗೊಂದಲ ಸೃಷ್ಠಿಯಾಗಿ ಯಾವುದೇ ಮುಖ್ಯಮಂತ್ರಿಯೂ ಪರಿಹರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ,ಎರಡು ದಶಕಗಳಿಂದ ಮಾದಿಗ ಸಮುದಾಯ ಒಳಮೀಸಲಾತಿಗೆ ಹೋರಾಟ ಮಾಡುತ್ತಿದ್ದರೂ ಸರ್ಕಾರಕ್ಕೆ ಇವರ ಧ್ವನಿ ಇನ್ನೂ ಕೇಳಿಸಿಲ್ಲ. ಸಿಎಂ ಯಡಿಯೂರಪ್ಪ ಅವರಲ್ಲಿ ಬಸವಣ್ಣನವರ ಚಿಂತನೆ ಮೈಗೂಡಿದ್ದರೆ 12ನೇ ಶತಮಾನದಲ್ಲಿ ಸಮಾನತೆ ಕಾಣಲು ಹೋರಾಟ ಮಾಡಿದ ಮಾನವತಾವಾದಿ ಬಸವಣ್ಣನವರ ಸಮುದಾಯಕ್ಕೆ ಸೇರಿದವರಾಗಿ ಅವರ ಸಿದ್ದಾಂತ, ನಂಬಿಕೆ, ವಿಶ್ವಾಸ ಇದ್ದರೆ ನ್ಯಾ. ಸದಾಶಿವ ಆಯೋಗದ ವರದಿಯನ್ವಯ ಮೀಸಲಾತಿ ವರ್ಗೀಕರಣ ಮಾಡಲಿ,ಜನಸಂಖ್ಯೆ ಆಧಾರದಲ್ಲಿ ಜ.ಜಾತಿಯಲ್ಲಿನ ಎಡ, ಬಲ, ಬೋವಿ, ಲಂಬಾಣಿ, ಕೊರಮ, ಕೊರಚರಿಗೆ ನ್ಯಾಯ ಕೊಡಿಸಬೇಕು. ಬಸವಣ್ಣನವರ ಚಿಂತನೆಯೂ ಇದೇ ಆಗಿತ್ತು ಎಂದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಸವಣ್ಣನವರ ಸಿದ್ದಾಂತಗಳಲ್ಲಿ ನಂಬಿಕೆ, ವಿಶ್ವಾಸ ಇದ್ದರೆ ಮೊಟ್ಟ ಮೊದಲು ಮೀಸಲಾತಿ ವರ್ಗೀಕರಣ ಮಾಡಲಿ ಎಂದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಆಗ್ರಹಿಸಿದರು.
ವಿಜಯವಾಣಿ ಸುದ್ದಿಜಾಲ ಕೋಲಾರ