ಬಸವಣ್ಣನ ಮೂರ್ತಿ ವಿರೂಪಗೊಳಿಸಿದ ಕಿಡಿಗೇಡಿಗಳು!

Published on

ಹುತ್ರಿದುರ್ಗ: ಕುಣಿಗಲ್​ ತಾಲೂಕಿನ ಇಪ್ಪಾಡಿ ಗ್ರಾಪಂನ ಗೋವಿಂದಯ್ಯನಪಾಳ್ಯಕ್ಕೆ ಹೊಂದಿಕೊಂಡಂತೆ ಅರಣ್ಯ ಪ್ರದೇಶದಲ್ಲಿರುವ ಬಸವೇಶ್ವರ ದೇವಾಲಯದ ಮೇಲೆ ನಿರ್ಮಿಸಲಾಗಿರುವ ಬಸವಣ್ಣನ ವಿಗ್ರಹದ ತಲೆ ಮತ್ತು ಮುಖ ಒಡೆದು ವಿರುಪಗೊಳಿಸಿ ಹಾಗೂ ದೇವಾಲಯದ ಒಳಗಿರುವ ಕಲ್ಲಿನ ಮೂರ್ತಿಗಳನ್ನು ಹಳ್ಳಕ್ಕೆ ಎಸೆದಿದ್ದಾರೆ. ಗಿಡದ ಬಸವಣ್ಣ ಎಂದು ಕರೆಯಲ್ಪಡುವ ದೇವಾಲಯದಲ್ಲಿ ಶನಿವಾರ ತಡರಾತ್ರಿ ಕಿಡಿಗೇಡಿಗಳು ಕಲ್ಲಿನಿಂದ ದೇವಾಲಯದ ಬಾಗಿಲು ಒಡೆದು ದೇವರ ಮೂರ್ತಿ ವಿರೂಪಗೋಳಿಸಿರುವ ಕೀಡಿಗೇಡಿಗಳ ಈ ಕೃತ್ಯಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಅವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಗ್ರಾಮಸ್ಥರ ದೂರು ಹಿನ್ನೆಲೆ ಸ್ಥಳಕ್ಕೆ ಕುಣಿಗಲ್​ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net