ಬಸವಣ್ಣನ ತತ್ವಾದರ್ಶ ಯುವ ಜನಾಂಗಕ್ಕೆ ಮಾದರಿಯಾಗಲಿ

WhatsApp Image 2023-07-04 at 7.28.50 PM
Published on

ರಾವಂದೂರು: ಬಸವಣ್ಣನವರ ತತ್ವಾದರ್ಶಗಳು ಯುವ ಜನಾಂಗಕ್ಕೆ ಮಾದರಿಯಾಗಲಿ ಎಂದು ಕೆಪಿಸಿಸಿ ಸದಸ್ಯ ನಿತಿನ್ ವೆಂಕಟೇಶ್ ಸಲಹೆ ನೀಡಿದರು

.
ಪಿರಿಯಾಪಟ್ಟಣ ತಾಲೂಕು ರಾವಂದೂರು ಗ್ರಾಮದಲ್ಲಿ ಏರ್ಪಡಿಸಿದ್ದ 890ನೇ ಬಸವಜಯಂತಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬಸವಣ್ಣನವರ ತತ್ವ ಆದಶರ್ಗಳನ್ನು ಪ್ರತಿಯೊಬ್ಬ ಪ್ರಜೆಯೂ ಅನುಸರಿಸಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದರು.
ಬಸವಜಯಂತಿ ಕಾರ್ಯಕ್ರಮದ ಅಂಗವಾಗಿ ಬಸವಣ್ಣನ ಭಾವಚಿತ್ರವನ್ನು ಅಲಂಕೃತ ಹೂವಿನ ಮಂಟಪದಲ್ಲಿ ಇರಿಸಿ ನಂದಿಧ್ವಜ, ವೀರಗಾಸೆ, ಮಂಗಳವಾದ್ಯ, ಡೊಳ್ಳುಕುಣಿತ, ನಗಾರಿ ಮುಂತಾದ ಕಲಾ ತಂಡದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಮುರುಘಾ ಮಠದ ಶ್ರೀಮೋಕ್ಷಪತಿ ಸ್ವಾಮೀಜಿ, ಬಸವಬಳಗದ ಅಧ್ಯಕ್ಷ ಆರ್.ಎಸ್.ವಿಜಯಕುಮಾರ್, ವಿಜಯೇಂದ್ರ, ಸಿದ್ದೇಶ್, ಆರ್.ಪಿ.ಗಿರೀಶ್, ಸಂದೇಶ, ಪ್ರಭು, ಅನುಷ್‌ಪಟೇಲ್, ಸುಪ್ರೀತ್, ಮಿಥುನ್, ದೀಕ್ಷಿತ್, ಷಡಕ್ಷರಿ ಎಂ.ಜೆ, ಡಾ.ಶಂಕರ್, ಕೆಂಡಗಣ್ಣ, ಪ್ರೀತಮ್, ಆರ್.ಎಸ್.ವಿನಯ್‌ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net