ಬಸವಣ್ಣ,ಅಂಬೇಡ್ಕರ್ ಅವರ ತತ್ವ,ಸಿದ್ಧಾಂತಗಳ ಅಳವಡಿಕೆಗೆ ನ್ಯಾಯಾಧೀಶೆ ಸಲಹೆ

Untitled02
Published on


ಚಿತ್ರದುರ್ಗ: ಸಮ ಸಮಾಜ ನಿರ್ಮಾಣಕ್ಕಾಗಿ ಹೋರಾಟ ನಡೆಸಿದ್ದ ಕ್ರಾಂತಿಕಾರಿ ಬಸವಣ್ಣ ಸಾಕಷ್ಟು ವಿರೋಧಗಳನ್ನು ಎದುರಿಸ ಬೇಕಾಯಿತೆಂದು ಜಿ ಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಪ್ರೇಮಾವತಿ ಎಂ.ಮನಗೊಳಿ ಹೇಳಿದರು.

ನಗರದ ವಕೀಲರ ಬಳಗ ಜಿಲ್ಲಾ ನ್ಯಾಯಾಲಯದ ಗ್ರಂಥಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಸವಣ್ಣನವರ ಜಯಂತಿಯಲ್ಲಿ,ಈ ಇಬ್ಬರು ಮಹನೀಯರ ಭಾವ ಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಜಾತಿ,ವರ್ಗ,ಅ ಸಮಾನತೆ ವಿರುದ್ಧ ಬಸವಣ್ಣನವರು ಸಾಕಷ್ಟು ಹೋರಾಟಗಳನ್ನು ನಡೆಸಿದ್ದಾರೆ.

ಅಂಬೇಡ್ಕರ್ ದೇಶಕ್ಕೆ ಬಲಿಷ್ಠವಾದ ಸಂವಿಧಾನವನ್ನು ನೀಡಿ ದ್ದಾರೆ. ಈ ಮಹನೀಯರ ತತ್ವ,ಸಿದ್ಧಾಂತ,ಮೌಲ್ಯಗಳನ್ನು ಪ್ರತಿ ಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಜಯಂತಿಗಳ ಆಚರ ಣೆಗೆ ನಿಜವಾದ ಅರ್ಥ ಸಿಗುತ್ತದೆ ಎಂದರು.
ಸಿವಿಲ್ ಹಿರಿಯ ನ್ಯಾಯಾಧೀಶ ಕೆಂಪರಾಜು ಮಾತನಾಡಿ ಸಮಾಜ ಸುಧಾರಣೆ,ಬದಲಾವಣೆಗಾಗಿ ಬಸವಣ್ಣನವರು ಕ್ರಾಂತಿ ಮಾಡಿದ್ದ ರಿಂದಾಗಿ ವಿಶ್ವ ಗುರು ಎನಿಸಿಕೊಂಡರು. 12ನೇ ಶತಮಾನದಲ್ಲೇ ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಯಾಗಿರ ಬೇಕೆಂಬ ಕಲ್ಪನೆ ಅವರದಾಗಿತ್ತು.

ಅಂದಿನ ಅನುಭವ ಮಂಟಪವೇ ಇಂದಿನ ಪಾರ್ಲಿಮೆಂಟ್. ಸಮ ಸಮಾಜದ ನಿರ್ಮಾಣಕ್ಕಾಗಿ ಹಾಗೂ ಮೂಢ ನಂಬಿಕೆಗಳ ನಿ ರ್ಮೂಲನೆ ನಿಟ್ಟಿನಲ್ಲಿ ಬಸವಣ್ಣನವರ ಕೊಡುಗೆ ಅಪಾರ. ಅನುಭವ ಮಂಟಪ ಚರ್ಚೆಗಳು ವಚನಗಳ ಮೂಲಕ ನಮಗೆ ದೊರೆತಿವೆ ಅ ಂಬೇಡ್ಕರ್ ಸಂವಿಧಾನದ ಮೂಲಕ ಎಲ್ಲ,ಜಾತಿ ಧರ್ಮಗಳಿಗೂ ಸಮಾನತೆಯನ್ನು ನೀಡಿದ್ದಾರೆ. ಎಲ್ಲಿ ಸಂವಿಧಾನ ಬಲಿಷ್ಠವಿರುತ್ತದೋ ಅಲ್ಲಿ ಸ್ಥಿರ ಆಡಳಿತವಿರುತ್ತದೆ ಎಂದರು.

ಪ್ರಧಾನ ಒಂದನೇ ಅಪರ ಜಿಲ್ಲಾ ನ್ಯಾಯಾಧೀಶ ಶಂಕರಪ್ಪ ನಿಂಬಣ್ಣ ಕಲ್ಕಣಿ ಹಾಗೂ ವಕೀಲರ ಸಂಘದ ಅಧ್ಯಕ್ಷ ಸಿ.ಶಿವುಯಾದವ್, ವಕೀಲ ಬೀಸ್ನಳ್ಳಿ ಜಯಣ್ಣ ಮಾತನಾಡಿದರು. ಕಿರಿಯ ವಿಭಾಗ ಒಂದನೇ ಅಪರ ಸಿವಿಲ್ ನ್ಯಾಯಾಧೀಶೆ ಅನಿತಕುಮಾರಿ,ವಕೀಲರ ಸಂ ಘದ ಉಪಾಧ್ಯಕ್ಷ ಜಿ.ಸಿ.ದಯಾನಂದ,ವಕೀಲರಾದ ವೈ.ತಿಪ್ಪೇಸ್ವಾಮಿ, ಮಂಜುನಾಥರೆಡ್ಡಿ,ಎನ್.ಶರಣಪ್ಪ,ಬಿ.ಕೆ.ರಹಮತ್‌ವುಲ್ಲಾ,ನರಹರಿ,ವಿಶ್ವನಾಥ್ ಸೇರಿ ನಾನಾ ವಕೀಲರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net