ಬಸವಣ್ಣ ಹುಟ್ಟು ಹಾಕಿದ್ದು ವಿಶ್ವ ಧರ್ಮ

13-08-Shiva-2
ರಾಯಚೂರಿನ ಕರ್ನಾಟಕ ಸಂಘದಲ್ಲಿ ಭಾನುವಾರ ಏರ್ಪಡಿಸಿದ್ದ ಶರಣ ಚಿಂತನ ಮಂಥನ ಉಪನ್ಯಾಸ ಕಾರ್ಯಕ್ರಮವನ್ನು ಮಾದಾರ ಚನ್ನಯ್ಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸಾಹಿತಿ ರಾಮಸ್ವಾಮಿ ನುಲಿ ಉದ್ಘಾಟಿಸಿದರು. ಸಾಹಿತಿ ಡಾ.ಸರ್ವಮಂಗಳ ಸಕ್ರಿ, ಕರ್ನಾಟಕ ಸಂಘದ ಅಧ್ಯಕ್ಷ ಕೆ.ಶಾಂತಪ್ಪ, ಕಾರ್ಯದರ್ಶಿ ಶ್ರೀನಿವಾಸ ಗಟ್ಟು, ಮಾದಾರ ಚನ್ನಯ್ಯ ಸೇವಾ ಸಮಿತಿ ಗೌರವ ಕಾರ್ಯದರ್ಶಿ ಜೆ.ಎಂ.ವೀರೇಶಕುಮಾರ ಇದ್ದರು.
Published on

ರಾಯಚೂರು: ವಚನ ಚಳುವಳಿ ಮೂಲಕ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದ ಬಸವಣ್ಣ ಹುಟ್ಟು ಹಾಕಿದ್ದು ಕೇವಲ ಲಿಂಗಾಯತ ಧರ್ಮವಲ್ಲ. ಅದು ವಿಶ್ವ ಧರ್ಮವಾಗಿದೆ. ಆ ಸಿದ್ಧಾಂತದ ಅಡಿಯಲ್ಲಿ ಜಗತ್ತಿನಲ್ಲಿ ಹಲವಾರು ಸ್ತರಗಳಲ್ಲಿ ಸಂಶೋಧನೆ ಮತ್ತು ಚರ್ಚೆ ನಡೆಯುತ್ತಿವೆ ಎಂದು ಸಾಹಿತಿ ಡಾ.ಸರ್ವಮಂಗಳ ಸಕ್ರಿ ಹೇಳಿದರು.
ಸ್ಥಳೀಯ ಕರ್ನಾಟಕ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಶರಣ ಚಿಂತನ ಮಂಥನ ಮಾಸಿಕ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡಿ, ಶರಣ ಚಳುವಳಿಯಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಧ್ವನಿಯಾಗಿದ್ದ ಮಾದಾರ ಚನ್ನಯ್ಯ ಸಾಮಾಜಿಕ ಸಾಮರಸ್ಯ, ಸಮಾನತೆಯ ಪ್ರತೀಕವಾಗಿದ್ದರು ಎಂದರು.
ಸಾಹಿತಿ ರಾಮಸ್ವಾಮಿ ನುಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾದಾರ ಚೆನ್ನಯ್ಯರ ಆಶಯ, ಜೀವನ ಸಿದ್ಧಾಂತಗಳು ಮನೆ ಮತ್ತು ಮನಗಳಿಗೆ ತಲುಪಬೇಕಾಗಿದೆ. ಆ ಮೂಲಕ ಸಮಾಜದಲ್ಲಿ ಸಮಾನತೆಯನ್ನು ತರುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಶಾಂತಪ್ಪ ಮಾತನಾಡಿ, ಸಮಾಜದಲ್ಲಿ ಇಂದಿಗೂ ಜಾತಿ ತಾರತಮ್ಯ, ಅಸಮಾನತೆ, ಶೋಷಣೆ ಮತ್ತು ಅಸ್ಪಶ್ಯತೆ ಜೀವಂತ ಇರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ತರುವಂತದ್ದಾಗಿದೆ ಎಂದು ಖೇದ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾದಾರ ಚನ್ನಯ್ಯ ಸೇವಾ ಸಮಿತಿ ಗೌರವ ಕಾರ್ಯದರ್ಶಿ ಜೆ.ಎಂ.ವೀರೇಶಕುಮಾರ, ಕರ್ನಾಟಕ ಸಂಘದ ಕಾರ್ಯದರ್ಶಿ ಶ್ರೀನಿವಾಸ ಗಟ್ಟು, ಮುರಳೀಧರ ಕುಲಕರ್ಣಿ, ಕಲಾವಿದ ಪ್ರಭಾಕರ ಮಂಕಾಲ್, ಅನ್ನಪೂರ್ಣೇಶ್ವರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net