

ಬಸವಕಲ್ಯಾಣ: ಮಲ್ಲಿಕಾರ್ಜುನ ವಾಡಿ ಗ್ರಾಮದಲ್ಲಿ ಬುಧವಾರ ಹಾಗೂ ಗುರುವಾರ ಸಂಭ್ರಮದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.
ಗ್ರಾಮದ ಶ್ರೀ ಹನುಮಾನ ಮಂದಿರದಲ್ಲಿ ಬುಧವಾರ ರಾತ್ರಿ ಭಜನೆ, ಶ್ರೀ ಕೃಷ್ಣನಿಗೆ ವಿಶೇಷ ಪೂಜೆ, ಅಲಂಕಾರ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಗುರುವಾರ ಬೆಳಗ್ಗೆ ಬಾಲ ಗೋಪಾಲನಿಗೆ ಅಲಂಕಾರ, ಅಭಿಷೇಕ, ಮಹಾಮಂಗಳಾರತಿ ಜರುಗಿದವು. ದೇಗುಲದ ಆವರಣದಲ್ಲಿ ತೊಟ್ಟಿಲೋತ್ಸವ ನಡೆಯಿತು.
ಮಧ್ಯಾಹ್ನ ಅಪಾರ ಭಕ್ತರ ಮಧ್ಯೆ ಮೊಸರಿನ ಗಡಿಗೆ ಒಡೆಯುವ ಸ್ಪರ್ಧೆ ನಡೆಯಿತು. ಯುವಕರು ಸಂಭ್ರಮದಿಂದ ಆಟವಾಡಿದರು. ಬಳಿಕ ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಕೃಷ್ಣ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು. ಕೋಲಾಟ, ಭಜನೆ ಹಾಗೂ ಯುವ ಜನತೆಗೆ ನೃತ್ಯ ಗಮನಸೆಳೆಯಿತು.
ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ಪ್ರಮುಖರಾದ ಸಿದ್ದು ಸೂಗೂರ, ಸತೀಶ ರಂಜೇರಿ, ಅಕ್ರಂಪಾಶಾ, ವಿಷ್ಣುವರ್ಧನ್ ಜಿ. ಪುಣೆ, ಗೋದಾವರಿ ಪುಣೆ, ಸುಭಾಷ ಅಂತಪ್ನಳ್ಳಿ, ಶಂಕರ ಹೆಗಡೆ, ಹರಿ ಇರುವಟೆ, ಶ್ರೀಕಾಂತ ಪುಣೆ, ಮಚ್ಚಿಂದರ ಪುಣೆ, ಕೃಷ್ಣ ಪುಣೆ, ಮಂಜು ಹೆಗಡೆ, ಶ್ರೀಕಾಂತ ಹೆಗಡೆ, ಪ್ರವೀಣ ಪುಣೆ, ಬಸವರಾಜ ಬಾರಾಬಾಯಿ, ಭವಾನಿ ಬಾರಾಬಾಯಿ, ಹನುಮಂತ ಚಿಂತಾಳ, ಅಭಿಷೇಕ ಹೆಗಡೆ, ಲP್ಷÀ್ಮಣ ಪುಣೆ, ಶಿವಶಂಕರ ಪುಣೆ ಇತರರಿದ್ದರು.