ಬಸವ ಭವನಕ್ಕೆ ಪ್ರಿಯಾಂಕ್ ಅನುದಾನದ ಭರವಸೆ

17-7 ctpr .1
ಚಿತ್ತಾಪುರದಲ್ಲಿ ಬಸವ ಭವನ ನಿರ್ಮಾಣ ನಿಮಿತ್ತ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ರಮೇಶ ಮರಗೋಳ, ಲಿಂಗಾರೆಡ್ಡಿಗೌಡ ಭಾಸರೆಡ್ಡಿ, ಶಿವರಾವ ಪಾಟೀಲ್ ಬೆಳಗುಂಪಾ, ಶಿವಾನಂದ ಪಾಟೀಲ್, ಸೋಮಶೇಖರ ಪಾಟೀಲ್ ಬೆಳಗುಂಪಾ, ಜಗಣ್ಣಗೌಡ ರಾಮತೀರ್ಥ ಇತರರಿದ್ದರು.
Published on

ಚಿತ್ತಾಪುರ: ಪಟ್ಟಣದಲ್ಲಿ ಭವ್ಯ ಬಸವ ಭವನ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಅನುದಾನ ನೀಡುವುದಾಗಿ ಭರವಸೆ ನೀಡಿದ್ದು, ೨-೩ ಎಕರೆ ಭೂಮಿ ಖರೀದಿಸಲು ಸಮಾಜದ ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಬಸವ ಭವನ ನಿರ್ಮಾಣ ಸಮಿತಿ ಅಧ್ಯಕ್ಷ ರಮೇಶ ಮರಗೋಳ ಹೇಳಿದರು.

ಬಾಪುರಾವ ಪಾಟೀಲ್ ಕಲ್ಯಾಣ ಮಂಟಪದಲ್ಲಿ ಬಸವ ಭವನ ನಿರ್ಮಾಣ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಸಣ್ಣ-ಪುಟ್ಟ ಸಮಾಜದವರು ತಮ್ಮದೇ ಭವನಗಳನ್ನು ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಸಮುದಾಯಕ್ಕೂ ಭವನದೊಂದು ನಿರ್ಮಿಸುವ ನಿಟ್ಟಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಮಾಡಿದ್ದು, ಅದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಜಿಪA ಮಾಜಿ ಪ್ರತಿಪಕ್ಷ ನಾಯಕ ಶಿವಾನಂದ ಪಾಟೀಲ್ ಮಾತನಾಡಿ, ಸಮಾಜದ ಪ್ರತಿಯೊಬ್ಬರೂ ಭವನ ನಿರ್ಮಾಣಕ್ಕೆ ಆರ್ಥಿಕವಾಗಿ ಸಹಾಯ ಮಾಡಬೇಕು. ಜಿಲ್ಲೆಯಲ್ಲಿಯೇ ಮಾದರಿ ಭವನ ಆಗಬೇಕಿದೆ ಎಂದರು.

ವೀರಶೈವ ಸಮಾಜದ ತಾಲೂಕು ಗೌರವಧ್ಯಕ್ಷ ಲಿಂಗಾರೆಡ್ಡಿಗೌಡ ಭಾಸರೆಡ್ಡಿ, ಮಾಜಿ ಅಧ್ಯಕ್ಷ ಚಂದ್ರಶೇಖರ ಅವಂಟಿ, ಮುಖಂಡರಾದ ಸೋಮಶೇಖರ ಪಾಟೀಲ್ ಬೆಳಗುಂಪಾ, ವೀರಣ್ಣಗೌಡ ಪರಸರೆಡ್ಡಿ, ಭೀಮರೆಡ್ಡಿಗೌಡ ಕುರಾಳ ಮಾತನಾಡಿದರು.

ಸಮಾಜದ ಮಾಜಿ ಅಧ್ಯಕ್ಷ ಶಿವರಾವ ಪಾಟೀಲ್ ಬೆಳಗುಂಪಾ, ಪ್ರಮುಖರಾದ ಶಿವಲಿಂಗಪ್ಪ ವಾಡೇದ್, ಮಲ್ಲಿನಾಥ ಇಂದೂರ, ಬಸವರಾಜ ಇಂಗಿನ್, ರವೀಂದ್ರ ಸಜ್ಜನಶೆಟ್ಟಿ, ಡಾ.ಚಂದ್ರಶೇಖರ ಕಾಂತಾ, ಸಿದ್ದಣ್ಣಗೌಡ ಮಾಲಿಪಾಟೀಲ್, ಮಹಾಂತಗೌಡ ದಂಡಗುAಡ, ರಾಮರೆಡ್ಡಿ ಕೊಳ್ಳಿ, ರಮೇಶ ಬೋಮ್ಮನಳ್ಳಿ, ರವಿಂದ್ರರೆಡ್ಡಿ ಭಂಕಲಗಿ, ಓಂಕಾರೇಶ್ವರ ರೇಷ್ಮಿ, ಅಣ್ಣಾರಾವ ಬಾಳಿ, ಆನಂದ ಪಾಟೀಲ್ ನರಬೋಳಿ, ಬಸವರಾಜ ಪಾಟೀಲ್ ಬೆಳಗುಂಪಾ, ಶರಣಗೌಡ ಪಾಟೀಲ್ ಚಾಮನೂರ, ಶರಣಗೌಡ ಭೀಮನಳ್ಳಿ, ನಾಗರೆಡ್ಡಿ ಗೋಪಸೇನ್, ವೀರಣ್ಣ ಸುಲ್ತಾನಪುರ, ರಾಜಶೇಖರ ಯದ್ಲಾಪುರ, ಸಿದ್ದು ರಾಜಾಪುರ, ಬಸವರಾಜ ಸಂಕನೂರ, ಬಸಯ್ಯಸ್ವಾಮಿ ಸಾತನೂರ ಇತರರಿದ್ದರು.

ಶಾಂತಣ್ಣ ಚಾಳಿಕಾರ ನಿರೂಪಣೆ ಮಾಡಿದರು. ಜಗಣ್ಣಗೌಡ ರಾಮತೀರ್ಥ ಸ್ವಾಗತಿಸಿದರು. ಅಂಬರೇಶ ಸುಲೇಗಾಂವ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net