ಬಸವ ಪರ ಸಂಘಟನೆ ವಿಜಯೋತ್ಸವ

Basavpar Sanghtane
Published on

ಬೀದರ್: ಇಲ್ಲಿನ ರಂಗಮಂದಿರಕ್ಕೆ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರ ಹೆಸರು ನಾಮಕರಣ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದಕ್ಕೆ ಬಸವ ಪರ ಸಂಘಟನೆಗಳಿಂದ ಶನಿವಾರ ನಗರದಲ್ಲಿ ವಿಜಯೋತ್ಸವ ಆಚರಿಸಲಾಯಿತು.
ನಗರದ ಬಸವೇಶ್ವರ ವೃತ್ತದಲ್ಲಿ ಭಾರತೀಯ ಬಸವ ಬಳಗದ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಈ ವೇಳೆ ಬಸವ ಬಳಗದ ಜಿಲ್ಲಾಧ್ಯಕ್ಷ ಬಾಬು ವಾಲಿ ಮಾತನಾಡಿ, ಡಾ.ಚನ್ನಬಸವ ಪಟ್ಟದ್ದೇವರ ಕಲ್ಯಾಣ ಕರ್ನಾಟಕದ ನಡೆದಾಡುವ ದೇವರು. ನೂತನ ಅನುಭವ ಮಂಟಪ ಶಿಲ್ಪಿ, ಶಾಂತಿ ವರ್ಧಕ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಗಡಿ ಭಾಗಕ್ಕೆ ಕನ್ನಡ ಜ್ಯೋತಿ ಬೆಳಗಿದ ಪಟ್ಟದೇವರು ಹೊರಗಡೆ ಉರ್ದು ಬೋರ್ಡ್​ ಹಾಕಿ ಒಳಗಡೆ ಕನ್ನಡ ಕಲ್ಲಿಸಿದ ಕನ್ನಡದ ಕಟ್ಟಾಳು ಎಂದು ಬಣ್ಣಿಸಿದರು.
12 ಶತಮಾನದಲ್ಲಿ ವಿಶ್ವ ಗುರು ಬಸವಣ್ಣನವರು ಮಾಡಿದ ಸಾಮಾಜಿಕ ಕ್ರಾಂತಿ ಪೂಜ್ಯರು 20ನೇ ಶತಮಾನದಲ್ಲಿ ಮಾಡಿದರು. ಕಾಯಕವೇ ಕೈಲಾಸ ಮಂತ್ರ ನಿಜ ಜೀವನದಲ್ಲಿ ಅಳವಡಿಸಿಕೊಂಡವರು, ಇಂಥ ಪೂಜ್ಯರ ಹೆಸರು ರಂಗಮಂದಿರಕ್ಕೆ ನಾಮಕರಣ ಮಾಡಿದ್ದು ಬಸವ ಭಕ್ತರಿಗೆ ಸರ್ಕಾರ ಕೊಟ್ಟ ದೊಡ್ಡ ಗೌರವ ಎಂದರು.
ಬಸವ ಸೇವಾ ಪ್ರತಿಷ್ಠಾನದ ಶ್ರೀ ಪ್ರಭುದೇವರು, ಬಸವ ಕೇಂದ್ರದ ಶರಣಪ್ಪ ಮಿಠಾರೆ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರ ಗಂದಗೆ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚೆನ್ನಶೆಟ್ಟಿ, ಜಿಪಂ ಸದಸ್ಯೆ ಶಕುಂತಲಾ ಬೆಲ್ದಾಳೆ, ಪ್ರಮುಖರಾದ ರಮೇಶ ಮಠಪತಿ, ವಿರೂಪಾಕ್ಷ ಗಾದಗಿ, ಪ್ರಭುರಾವ ವಸಮತೆ, ರಾಜಕುಮಾರ ಪಾಟೀಲ್, ಜಯರಾಜ ಖಂಡ್ರೆ, ಶ್ರೀಮಂತ ಸಪಾಟೆ, ಹಣಮಂತ ಬುಳ್ಳಾ, ಪ್ರಕಾಶ ಚಂದಾ, ಬಸವರಾಜ ಜೋಜನಾ, ಶಶಿ ಹೊಸಳ್ಳಿ, ಕಲ್ಯಾಣಿ ಬಿರಾದಾರ, ಶಿವಶಂಕರ ಟೋಕರೆ, ರಮೇಶ ಬಿರಾದಾರ, ದೇವೇಂದ್ರ ಎಮ್ಮೆಕರ್, ಉಮಾಕಾಂತ ಮೀಸೆ, ಅನೀಲ ರಾಜಗಿರಾ, ವಿಜಯಕುಮಾರ ಪಾಟೀಲ್ ಯರನಳ್ಳಿ, ಸುಲೋಚನ ಪಾಟೀಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net