

ಬೆಳಗಾವಿ: ಸ್ಥಳೀಯ ಜಿಲ್ಲಾಸ್ಪತ್ರೆಯಲ್ಲಿ ದಾಖಲಾದ ಬಾಣಂತಿಯರ ಯೋಗಕ್ಷೇಮ ವಿಚಾರಿಸುವ ಮೂಲಕ ಮಾನವ ಬಂಧುತ್ವ ವೇದಿಕೆ ವತಿಯಿಂದ ಬಸವ ಪಂಚಮಿ ನಿಮಿತ್ತ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಹಾಲು- ಹಣ್ಣು ವಿತರಿಸಿದರು. ಬಳಿಕ, ಯುವ ನಾಯಕ ರಾಹುಲ್ ಜಾರಕಿಹೊಳಿ ನೇತೃತ್ವದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಬಸವ ಪಂಚಮಿ ನಿಮಿತ್ತ ಸೋಮವಾರ ಆಯೋಜಿಸಲಾದ ಮಹೇಶ್ ಪೌಂಡೇಶನ್ ಮಕ್ಕಳಿಗೆ ಹಾಲು, ಹಣ್ಣು ನೀಡಿ, ಮಕ್ಕಳನ್ನು ಪ್ರೀತಿಯಿಂದ ಆಲಿಸಿದರು. ಬಳಿಕ ಮಕ್ಕಳೊಂದಿಗೆ ಭೋಜನ ಕೂಟದಲ್ಲಿ ಭಾಗಿಯಾದರು. ಈ ವೇಳೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಮಾತನಾಡಿ, ಹಾಲನ್ನು ವ್ಯರ್ಥ ಮಾಡುವ ಬದಲಿಗೆ ಅದೇ ಹಾಲನ್ನು ಅನಾಥಾಶ್ರಮದ ಅಥವಾ ಬಡ ವಿದ್ಯಾರ್ಥಿಗಳಿರುವ ವಸತಿ ಗೃಹ ಅಥವಾ ಶಾಲೆಗಳ ಮಕ್ಕಳು ಹಾಗೂ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ವಿತರಿಸುವ ಮೂಲಕ ಬಸವ ಪಂಚಮಿ ಹಬ್ಬವನ್ನು ಆಚರಿಸಬೇಕು ಎಂದರು.
ಇಂತಹ ಸಮಾಜಮುಖಿ ಕಾರ್ಯಗಳನ್ನು ಮಾಡಿದಾಗ ಮಾತ್ರ ಬಸವಣ್ಣನವರ ಚಿಂತನೆಗಳಿಗೆ ಗೌರವ ನೀಡಿದಂತಾಗುತ್ತದೆ. ಈ ಹಬ್ಬವನ್ನು ಬಸವ ಪಂಚಮಿ ಹಬ್ಬವಾಗಿ ಆಚರಿಸಬೇಕು ಎಂದು ಹೇಳಿದರು.
ಚಿಕಿತ್ಸೆ ಪಡೆಯುವ ತಾಯಂದಿಯರಿಗೆ ಒಳ್ಳೆಯದು ಆಗಲಿ. ಆಸ್ಪತ್ರೆ ಎಷ್ಟೂ ಸುಸಜ್ಜಿತವಾಗಿದೆ, ಅಷ್ಟೇ ಮಹೇಶ್ ಪೌಂಡೇಶನ್ ಮಕ್ಕಳು ಅಚ್ಚುಕಟ್ಟಾಗಿದ್ದಾರೆ. ಸ್ವಚ್ಚತೆ ನಿಯಮ ಪಾಲನೆಯಿಂದ ಇಂದೊಂದು ಸಮಾಜಕ್ಕೆ ಮಾದರಿ. ಮಕ್ಕಳನ್ನು ಉತ್ತಮವಾಗಿ ಆರೈಕೆ ಮಾಡುವ ಮಹೇಶ್ ಪೌಂಡೇಶನ್ ಕಾರ್ಯ ಮೆಚ್ಚಲೇಬೇಕು ಎಂದು ಸಂತಸ ವ್ಯಕ್ತಪಡಿಸಿದರು. ಶ್ರೀ ಬಸವಪ್ರಕಾಶ ಸ್ವಾಮೀಜಿ ಮಾತನಾಡಿ, ಬಡ ಮಕ್ಕಳು, ಅನಾಥರು ಹಾಗೂ ಆಸ್ಪತ್ರೆಯಲ್ಲಿನ ಬಡ ರೋಗಿಗಳಿಗೆ ಈ ಹಾಲು ಹಂಚುವ ಮೂಲಕ ಬಸವ ಪಂಚಮಿ ಆಚರಣೆ ಅರ್ಥಪೂರ್ಣವಾಗಿ ಹಬ್ಬ ಆಚರಿಸುತ್ತಿರುವುದು ಬದಲಾವಣೆಯ ಸಂಕೇತವಾಗಿದೆ. ಎಲ್ಲರೂ ಮೂಢನಂಬಿಕೆಯಿಂದ ಹೋರ ಬರಬೇಕು’ ಎಂದು ಹೇಳಿದರು. ಹಸಿವಿನಿಂದ ಬಳಲುವ ಮಕ್ಕಳಿಗೆ ಹಾಲು ನೀಡಿದರೆ ಸಮಾಜದಲ್ಲಿ ಒಳ್ಳೆಯ ನಡೆಯನ್ನು ಕಾಣಬಹುದಾಗಿದೆ. ಎಲ್ಲರಿಗೂ ಬಸವ ಪಂಚಮಿಯ ಶುಭಾಶಯ, ಒಳ್ಳೆಯದನ್ನು ಮಾಡಲಿ ಎಂದು ಶ್ರೀಗಳು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆಯ ವಿಭಾಗೀಯ ಸಂಚಾಲಕರಾದ ಭರಮಣ್ಣ ತೋಳಿ, ಸಿದ್ದಿಕ್ ಅಂಕಲಗಿ, ಜ್ಯೋತಿಭಾ , ಪ್ರಕಾಶ ಹಾಗೂ ಮಾನವ ಬಂಧುತ್ವ ವೇದಿಕೆಯ ಕಾರ್ಯಕರ್ತರು ಹಾಗೂ ಇತರರು ಇದ್ದರು.