ಬಸವ ಧರ್ಮ ಪೀಠಾಧ್ಯಕ್ಷರ ಆಯ್ಕೆ ನಿರ್ಣಯ ಭಕ್ತರದು

bdr4
Published on

ಬಸವಕಲ್ಯಾಣ: ಬಸವ ಧರ್ಮ ಪೀಠದ ಅಧ್ಯಕ್ಷ ಎಂದು ನಾನು ಸ್ವಯಂ ಘೋಷಣೆ ಮಾಡಿಕೊಂಡಿಲ್ಲ. ಬಸವ ಭಕ್ತರು ಕೈಗೊಂಡ ನಿರ್ಣಯಕ್ಕೆ ನಾನು ಬದ್ಧ ಎಂದು ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ಸ್ಪಷ್ಟಪಡಿಸಿದರು.

ಪೀಠಕ್ಕಾಗಿ ದುಡಿದವರನ್ನು ಹೊರಹಾಕುತ್ತಿರುವುದು ಭಕ್ತರಲ್ಲಿ ನೋವು ತಂದಿದೆ. ಹೀಗಾಗಿ ಯಾರು ಯೋಗ್ಯರು ಎಂದು ಭಕ್ತರೇ ನಿರ್ಣಯ ಕೈಗೊಂಡಿದ್ದಾರೆ. ಪೀಠದ ಅಧ್ಯಕ್ಷರಾಗಬೇಕೆಂಬ ಆಸೆ ನನಗಿಲ್ಲ. ಪೀಠ ರಕ್ಷಣೆಯೇ ನಮ್ಮ ಉz್ದೆÃಶ. ಅಧ್ಯಕ್ಷರು ಅವರೇ ಇರಲಿ. ಆದರೆ ಒಂದು ಸಮಾವೇಶ ಕರೆದು ಎರಡು ಗುಂಪುಗಳನ್ನು ಒಂದಾಗಿಸಲಿ. ಅಧ್ಯಕ್ಷರು ಯಾರು ಎಂಬುದನ್ನು ಭಕ್ತರ ನಿರ್ಣಯಕ್ಕೆ ನಾವೆಲ್ಲರೂ ಬದ್ಧರಾಗಿ ಕೆಲಸ ಮಾಡೋಣ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಸಲಹೆ ನೀಡಿದರು.

ಬಸವಧರ್ಮ ಪೀಠದ ಆಸ್ತಿ ಯಾರೊಬ್ಬರದ್ದಲ್ಲ. ಶರಣರು ಹಾಗೂ ಲಕ್ಷಾಂತರ ಭಕ್ತರ ಶ್ರಮದಿಂದ ಪೀಠ ಹೆಮ್ಮರವಾಗಿ ಬೆಳೆದಿದೆ. ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವ ಜಗದ್ಗುರು ಡಾ.ಮಾತೆ ಗಂಗಾದೇವಿ ನಡೆ ಸರಿಯಲ್ಲ ಎಂದು ಕಿಡಿಕಾರಿದರು.

ಲಿಂಗೈಕ್ಯ ಡಾ.ಮಾತೆ ಮಹಾದೇವಿ ಆಶಯಕ್ಕೆ ವಿರುದ್ಧವಾಗಿ ಮಾತೆ ಗಂಗಾದೇವಿ ನಡೆದುಕೊಳ್ಳುತ್ತಿದ್ದಾರೆ. ಸಂಸ್ಥೆ ಬೆಳವಣಿಗೆಗೆ ಶ್ರಮಿಸಿದ ಸ್ವಾಮೀಜಿಗಳು ಹಾಗೂ ಟ್ರಸ್ಟ್ ಸದಸ್ಯರನ್ನು ನಿಯಮಬಾಹಿರವಾಗಿ ತೆಗೆದು ಹಾಕುತ್ತಿದ್ದಾರೆ. ಬಸವ ತತ್ವದ ಕನಿಷ್ಠö್ಠ ಅರಿವು ಇಲ್ಲದವರ ಕೈಗೆ ಸಂಸ್ಥೆ ಹಸ್ತಾಂತರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುಳ್ಳು ದಾಖಲೆ ಸೃಷ್ಟಿಸಿ ನಮ್ಮನ್ನು ತೆಗೆದು ಹಾಕಿರುವ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಸಂಸ್ಥೆಯಿAದ ನಮ್ಮನ್ನು ದೂರ ಇಟ್ಟಿದ್ದರಿಂದ ಪ್ರತ್ಯೇಕವಾಗಿ ಸ್ವಾಭಿಮಾನಿ ಕಲ್ಯಾಣ ಪರ್ವ ಆಯೋಜಿಸಿz್ದÉÃವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಕಾರ್ಯಕ್ರಮ ಮಾಡಬಹುದು. ಕಲ್ಯಾಣ ಪರ್ವ ನಡೆಸಲು ಇವರ ಅನುಮತಿ ಪಡೆಯಬೇಕಿಲ್ಲ ಎಂದು ತಿರುಗೇಟು ನೀಡಿದರು.

ರಾಷ್ಟಿçÃಯ ಬಸವದಳ ಸಂಘಟನೆಯಲ್ಲಿ ಗಂಗಾ ಮಾತಾಜಿ ಇಲ್ಲ. ಹೀಗಾಗಿ ಪೀಠಕ್ಕಾಗಿ ದುಡಿದ ಬಸವರಾಜ ಪಾಟೀಲ್ ಶಿವಪುರ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಸಂಚರಿಸಿ ಸದಸ್ಯತ್ವ ಅಭಿಯಾನ ನಡೆಸಿ ಸಂಘಟನೆ ಬಲಪಡಿಸುವುದಾಗಿ ಶ್ರೀ ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net