

ಗೋಕಾಕ: ನಗರದ ಕಿಲ್ಲಾ ಬಸವೇಶ್ವರ ದೇವಸ್ಥಾನದಲ್ಲಿ ವಿಶ್ವಗುರು ಬಸವೇಶ್ವರ ಜಯಂತಿ ಕಾರ್ಯಕ್ರಮವು ಇಲ್ಲಿನ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಸ್ವಾಮೀಜಿ ಹಾಗೂ ಮುಪ್ಪಯ್ಯನ ಮಠದ ರಾಚೋಟೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಈಚೆಗೆ ಜರುಗಿತು.
ಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ಷಟ್‌ಸ್ಥಲ ಧ್ವಜಾರೋಹಣ, ಮಹಾಲಿಂಗೇಶ್ವರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣು ವಿತರಿಸಲಾಯಿತು. ಬಸವೇಶ್ವರರ ನಾಮಕರಣ ಹಾಗೂ ಉಡಿ ತುಂಬುವುದು, ದೇವಸ್ಥಾನದಲ್ಲಿ ಪಲ್ಲಕ್ಕಿ ಪೂಜೆ, ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ, ಪಲ್ಲಕ್ಕಿ ಉತ್ಸವ ಜರುಗಿತು.
ಜಯಾ ಕಮತ, ಡಾ.ಉದಯ ಆಜರೆ, ಬಸವರಾಜ ಹುಳ್ಳೇರ, ಅಜಯ ವಣ್ಣೂರ, ಮಂಜುನಾಥ ಹಿರೇಮಠ, ಡಾ.ಮಹಾಂತೇಶ ಕಡಾಡಿ, ಬಸವಪ್ರಭು ದೇವರು, ಮಹಾಂತ ದೇವರು, ಅಶೋಕ ಪೂಜಾರಿ, ಡಾ.ಮಹಾಂತೇಶ ಕಡಾಡಿ, ಬಸನಗೌಡ ಪಾಟೀಲ ಇತರರಿದ್ದರು.