ಬಸವ ಜಯಂತಿ ಆಚರಣೆ ಕಡ್ಡಾಯ

UNTILETED 08
Published on

ಕುರುಗೋಡು: ಸರ್ಕಾರದ ಮಾರ್ಗದರ್ಶನದಂತೆ ಬಸವ ಜಯಂತಿಯನ್ನು ತಾಲೂಕಿನಲ್ಲಿ ನಿಗದಿತ ಸಮಯದೊಳಗೆ ಕಡ್ಡಾಯವಾಗಿ ಆಚರಿಸಿ ಜಿಪಿಎಸ್ ಭಾವಚಿತ್ರ ತೆಗೆದಿಟ್ಟುಕೊಳ್ಳಬೇಕು. ಇಲ್ಲದಿದ್ದರೇ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಹಸೀಲ್ದಾರ್ ನರಸಪ್ಪ ಎಚ್ಚರಿಸಿದರು.

ಪಟ್ಟಣದ ತಾಲೂಕು ಆಡಳಿತ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ತಾಲೂಕುಮಟ್ಟದ ಕಚೇರಿ ಹಾಗೂ ಗ್ರಾಪಂ , ಶಾಲಾ, ಕಾಲೇಜುಗಳಲ್ಲಿ ಜಯಂತಿ ಆಚರಿಸಬೇಕು. ಸಂಜೆ ನಡೆಯುವ ಭಾವಚಿತ್ರದ ಮೆರವಣಿಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಲಿವೆ. ಸ್ವಚ್ಛತೆ, ಕುಡಿಯುವ ನೀರು ಅಗತ್ಯ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net