

ಚಿತ್ರದುರ್ಗ: ಸಾಂಸ್ಕೃತಿಕ ನಾಯಕ, ಮಾನವತಾವಾದಿ ಬಸವಣ್ಣ ಒಂದು ವರ್ಗಕ್ಕೆ ಸೀಮಿತವಲ್ಲ ಎಂದು ಮುರುಘಾಮಠದ ಆಡಳಿತಾಧಿಕಾರಿ ಶಿವಯೋಗಿ ಕಳಸದ ಹೇಳಿದರು.
ಮುರುಘಾಮಠದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಬಸವೇಶ್ವರ ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧರಿಸಿದ ನಂತರ ಮಾತನಾಡಿದರು.
ವಿಶ್ವಮಾನ್ಯರಾದ ಅವರ ಆದರ್ಶಗಳನ್ನು ಬದುಕಿನಲ್ಲಿ ನಾವು ಪಾಲಿಸಿದರೆ, ಸುಂದರ ಸಮಾಜ ನಿರ್ಮಾಣವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಮೇ 10ರಂದು ಅನುಭವ ಮಂಟಪದಲ್ಲಿ ಸಮಾರಂಭ, ಮೊದಲೆರಡು ದಿನ ವಿವಿಧ ರೀತಿಯ ಕಾರ್ಯಕ್ರಮ ನಡೆಯಬೇಕು. ವಚನ ಕಂಠಪಾಠ, ವೇಷಭೂಷಣ ಮೊದಲಾದ ಸ್ಪರ್ಧೆ ಆಯೋಜಿಸಬೇಕು ಎಂದು ಸಲಹೆ ನೀಡಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷೆ ಆರ್.ಶೈಲಜಾಬಾಬು ಮಾತನಾಡಿ, ಜಯಂತಿ ವೇಳೆ ಮಹಾ ಶರಣರ ವಚನ ಹಾಡಿಸುವ ಮೂಲಕ ಹಬ್ಬದ ರೀತಿಯಲ್ಲಿ ಆಚರಿಸಬೇಕು ಎಂದರು.
ವೀರಶೈವ ಸಮಾಜದ ಕಾರ್ಯದರ್ಶಿ ಪಿ.ವೀರೇಂದ್ರಕುಮಾರ್ ಮಾತನಾಡಿ, ವೀರಶೈವ ಸಮಾಜ ಅಷ್ಟೇ ಅಲ್ಲ. ಎಲ್ಲ ಒಳಪಂಗಡಗಳು, ವಿವಿಧ ಸಮುದಾಯದವರು ಸೇರಿ ಆಚರಿಸಬೇಕು. ಈ ವೇಳೆ ಯುವಸಮೂಹಕ್ಕೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಮುಖಂಡ ಸುರೇಶ್‌ಬಾಬು ಮಾತನಾಡಿ, ಎರಡು ದಿನ ಶ್ರೀಮಠದಲ್ಲಿ, ಒಂದು ದಿನ ನೀಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಕಾರ್ಯಕ್ರಮ ಹಮ್ಮಿಕೊಂಡರೆ ಅನುಕೂಲವಾಗಲಿದೆ ಎಂದರು.
ಬಸವಪ್ರಭು ಶ್ರೀ, ಬಸವ ಕಬೀರ ಶ್ರೀ, ಬಸವ ಮಹಾಂತ ಶ್ರೀ, ಬಸವ ಪ್ರಸಾದ ಶ್ರೀ, ಬಸವ ಮಲ್ಲಿಕಾರ್ಜುನ ಶ್ರೀ, ಬಸವಲಿಂಗಮೂರ್ತಿ ಶ್ರೀ, ಬಸವ ಮಹಾಲಿಂಗ ಶ್ರೀ, ಬಸವ ಭೂಷಣ ಶ್ರೀ, ಬಸವನಾಗಿದೇವ ಶ್ರೀ, ತಿಪ್ಪೇರುದ್ರ ಶ್ರೀ, ಬಸವ ರಮಾನಂದ ಶ್ರೀ, ಮುಖಂಡರಾದ ಕೆ.ಸಿ.ನಾಗರಾಜ್, ನಾಗರಾಜ ಸಂಗಂ, ರಂಗಸ್ವಾಮಿ, ಚಂದ್ರಶೇಖರ್, ತಿಪ್ಪೇಸ್ವಾಮಿ, ಜಯದೇವಮೂರ್ತಿ, ಆರತಿ ಮಹಡಿ ಶಿವಮೂರ್ತಿ, ರುದ್ರೇಶ್ ಐಗಳ್, ಮೋಕ್ಷಾ ರುದ್ರಸ್ವಾಮಿ, ವಾಗೀಶ್‌ಬಾಬು, ಎನ್.ಬಿ.ವಿಶ್ವನಾಥ್, ಜಿ.ಎಸ್. ಉಜ್ಜಿನಪ್ಪ, ವಿಜಯಕುಮಾರ್, ಪೈಲ್ವಾನ್ ತಿಪ್ಪೇಸ್ವಾಮಿ, ಮಹಡಿ ಶಿವಮೂರ್ತಿ, ಟಿ.ಪಿ.ಜ್ಞಾನಮೂರ್ತಿ ಇತರರಿದ್ದರು.