ಬಸವ ಜಯಂತಿ ಅದ್ದೂರಿ ಮೆರವಣಿಗೆ

1805 KLB 03
Published on

ಕಲಬುರಗಿ: ಬಸವ ಜಯಂತಿ ನಿಮಿತ್ತ ನಗರದಲ್ಲಿ ಶನಿವಾರ ಜಾಗತಿಕ ಲಿಂಗಾಯತ ಮಹಾಸಭೆ, ಕಾಯಕ ಶರಣರ ಒಕ್ಕೂಟ, ಬಸವಪರ ಸಂಘಟನೆಗಳಿAದ ಬಸವಣ್ಣನವರ ಮೂರ್ತಿಯ ಅದ್ದೂರಿ ಮೆರವಣಿಗೆ ನಡೆಯಿತು. ನಗರದ ನಗರೇಶ್ವರ ಶಾಲೆಯಿಂದ ಆರಂಭವಾದ ಮೆರವಣಿಗೆ ಜಗತ್ ವೃತ್ತದಲ್ಲಿನ ಬಸವೇಶ್ವರ ಮೂರ್ತಿ ಆವರಣಕ್ಕೆ ತಲುಪಿ, ಪೂರ್ಣಗೊಂಡಿತು.

ಮೆರವಣಿಗೆಯುದ್ದಕ್ಕೂ ಡೊಳ್ಳು, ಹಲಗೆ, ಲಂಬಾಣಿ ನೃತ್ಯ, ಚಿಟ್ಟಹಲಗೆ ಮೇಳ ಸೇರಿ ವಿವಿಧ ಕಲಾ ತಂಡಗಳ ಗಮನ ಸೆಳೆದವು. ಕಲಾವಿದರ ವಾದ್ಯ ಮೇಳಕ್ಕೆ ಬಸವ ಭಕ್ತರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಮಹಿಳೆಯರು ಕೋಲಾಟ, ಗೆಜ್ಜೆ ಕುಣಿತದೊಂದಿಗೆ ಸಂಭ್ರಮಿಸಿದರು. ಬಸವಣ್ಣನವರ ಬೃಹತ್ ಮೂರ್ತಿ ಜತೆಗೆ ಕಾಯಕ ಶರಣರ ಭಾವಚಿತ್ರಗಳು, ವಚನಗಳು ಮುದ್ರಣ ಪ್ರದರ್ಶನ ಭಕ್ತಿ ಸಂಚಲನ ಮೂಡಿಸಿತು.

ನೂರಾರು ಬಸವ ಭಕ್ತರು ಷಟಸ್ಥಲ ಧ್ವಜಾರೋಹರಣ ರಾರಾಜಿಸುತ್ತ, ಬಸವಣ್ಣನವರಿಗೆ ಕೀ ಜೈ, ಲಿಂಗಾಯತ ಧರ್ಮಕ್ಕೆ ಜೈ, ಶರಣರಿಗೆ ಜೈಕಾರ ಹಾಕುತ್ತ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಶ್ರೀ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ, ಜಯಂತಿ ಸಮಿತಿ ಅಧ್ಯಕ್ಷ ಜಗನ್ನಾಥ ರಾಚೋಟಿ, ಪ್ರಧಾನ ಕಾರ್ಯದರ್ಶಿ ಎಸ್.ವಿ.ನಿಂಗಪ್ಪ, ಲಿಂಗಾಯತ ಸಭೆಯ ರವೀಂದ್ರ ಶಾಬಾದಿ, ಪ್ರಭುಲಿಂಗ ಮಹಾಗಾಂವಕರ್, ಆರ್.ಜಿ.ಶೆಟಗಾರ್, ಶಾಮರಾವ ಪ್ಯಾಟಿ, ನಳೀನಿ ಮಹಾಗಾಂವಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net