

ಚಿತ್ರದುರ್ಗ: ಶ್ರೀ ಬಸವೇಶ್ವರರ ಜಯಂತಿ ಪ್ರಯುಕ್ತ ಏ.28 ರಿಂದ 3 ದಿನಗಳ ಕಾಲ ಮುರುಘಾಮಠದಲ್ಲಿ ವಿಶೇಷ ಕಾರ್ಯಕ್ರಮಗಳು ಹಾಗೂ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
28ರಂದು ಬೆಳಗ್ಗೆ 10ಕ್ಕೆ ಶ್ರೀಮಠದ ಅನುಭವ ಮಂಟಪದಲ್ಲಿ ವಚನ ಕಂಠಪಾಠ, ಅದೇ ಸಮಯದಲ್ಲಿ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಬಸವಾದಿ ಶಿವಶರಣರ ವೇಷಭೂಷಣ ಹಾಗೂ ಶ್ರೀ ಮಠದ ಆವರಣದಲ್ಲಿ ರಂಗೋಲಿ ಸ್ಪರ್ಧೆಗಳನ್ನು(ಬಸವಾದಿ ಶಿವಶರಣರ ಚಿತ್ರಗಳನ್ನೂ ಬಿಡಿಸಬಹುದಾಗಿದೆ)ಏರ್ಪಡಿಸಲಾಗಿದೆ.
29 ರಂದು ಬೆಳಗ್ಗೆ 10ಕ್ಕೆ ಅನುಭವ ಮಂಟಪದಲ್ಲಿ 18ವರ್ಷ ವಯಸ್ಸು ಮೀರಿದವರಿಗೆ ಒಂದು ಗಂಟೆ ಕಾಲಾವಧಿಯಲ್ಲಿ ಸರ್ವ ಶರಣರ ದೃಷ್ಟಿಯಲ್ಲಿ ಬಸವಣ್ಣನವರು ವಿಷಯ ಕುರಿತು ಪ್ರಬಂಧ ಹಾಗೂ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಪಿಯುಸಿ, ಪದವೀಧರರಿಗೆ 7 ನಿಮಿಷ ಕಾಲಾವಧಿಯಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣ ವಿಷಯ ಕುರಿತು ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ.
ಆಯಾ ವಿಭಾಗದ ವಿಜೇತರಿಗೆ ಪ್ರಥಮ 5000 ರೂ., ದ್ವಿತೀಯ 3000 ರೂ., ತೃತೀಯ 2000 ರೂ. ಬಹುಮಾನ ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರ ವಿತರಿಸಲಾಗುವುದು. ತೀರ್ಪುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ. ಏ.24ರೊಳಗೆ ಹೆಸರು ನೋಂದಾಯಿಸಬೇಕು. ಸ್ವ-ವಿವರಗಳ ಮಾಹಿತಿಯನ್ನು 94482 95901/9449974004/9902929701 /9740037176/944864932/9886840737 ಈ ಸಂಖ್ಯೆಗಳಿಗೆ ಸಂಪರ್ಕಿಸಿ ಅಥವಾ ಖುದ್ದಾಗಿ ನೀಡಬಹುದು ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.