ಬಸವ ಚಿತ್ರಕ್ಕೆ ಅವಮಾನ ಸಿಡಿದ ಮಹಾಸಭಾ

13ydg04
Published on

ಯಾದಗಿರಿ: ಹಲಕರ್ಟಿಯಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಅಪಮಾನ ಮಾಡಿರುವುದನ್ನು ಖಂಡಿಸಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಹಲಕರ್ಟಿಯಲ್ಲಿ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಕಳೆದ ವರ್ಷ ಬಸವ ಜಯಂತಿಯಂದು ಬಸವೇಶ್ವರ ಭಾವಚಿತ್ರವುಳ್ಳ ದೊಡ್ಡ ಫ್ಲೆಕ್ಸ್ ಕಟ್ಟಲಾಗಿತ್ತು. ಮಂಗಳವಾರ ರಾತ್ರಿ ವೇಳೆ ಕಿಡಿಗೇಡಿಗಳು ಫೋಟೋದ ಹಲವೆಡೆ ಸಿಗೆರೇಟ್ನಿಂದ ಸುಟ್ಟಿದ್ದಾರೆ.ಮಹಾತ್ಮರ ಭಾವಚಿತ್ರಗಳಿಗೆ ನಿರಂತರ ಅವಮಾನವಾಗುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಬಸವೇಶ್ವರ ಭಾವಚಿತ್ರಕ್ಕೆ ಅಪಮಾನ ಮಾಡಿದವರನ್ನು ಪತ್ತೆ ಹಚ್ಚಿ, ಉಗ್ರ ಶಿಕ್ಷೆ ನೀಡಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಮಹಾಸಭಾ ಪದಾಧಿಕಾರಿಗಳು ಒತ್ತಾಯಿಸಿದರು.

12ನೇ ಶತಮಾನದ ಮಹಾನ್ ಶರಣ ವಿಶ್ವಗುರು ಬಸವಣ್ಣ, ಇಡೀ ಜಗತ್ತಿಗೆ ದಾರ್ಶನಿಕರು. ವಿಕೃತ ಮನಸ್ಸಿನವರು ಬಸವೇಶ್ವರರ ಭಾವಚಿತ್ರವನ್ನು ಸುಟ್ಟಿದ್ದಾರೆ. ಇದು ಸರಿಯಲ್ಲ, ಕೃತ್ಯ ನಡೆಸಿದ ದುಷ್ಕಮರ್ಿಗಳನ್ನು ಕೂಡಲೇ ಪೊಲೀಸರು ಬಂಧಿಸಬೇಕು. ಇಲ್ಲದೆ ಹೋದರೆ ಎಲ್ಲೆಡೆ ಹೋರಾಟ ಮಾಡಬೇಕಾಗುತ್ತದೆ. ಶ್ರೇಷ್ಠರ ಮೂರ್ತಿ, ಭಾವಚಿತ್ರಗಳಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net