ಬಸವ ಚರಿತಾಮೃತ ಪ್ರವಚನ 30ರಿಂದ

23-01kodekal news 01
Published on

ಕೊಡೇಕಲ್: ಶ್ರೀಗುರು ದುರದುಂಡೇಶ್ವರ ವಿರಕ್ತ ಮಠದಲ್ಲಿ ಕಾರ್ತಿಕೋತ್ಸವ ನಿಮಿತ್ತ ಹಮ್ಮಿಕೊಂಡ ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು ಎಲ್ಲ ಭಕ್ತರು ತನು ಮನದೊಂದಿಗೆ ಸೇವೆ ಸಲ್ಲಿಸುವ ಮೂಲಕ ಕಾರ್ಯಕ್ರಮಗಳ ಯಶಸ್ಸಿಗೆ ಶ್ರಮಿಸಬೇಕು ಎಂದು ಶ್ರೀ ಶಿವಕುಮಾರ ಸ್ವಾಮೀಜಿ ಹೇಳಿದರು.

ಗ್ರಾಮದ ದುರದುಂಡೇಶ್ವರ ವಿರಕ್ತ ಮಠದಲ್ಲಿ ಶನಿವಾರ ಸಂಜೆ ಸಂಜೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ಮಠಕ್ಕೆ ಯಾವುದೇ ಆಸ್ತಿ ಸಂಪತ್ತು ಇಲ್ಲ. ಭಕ್ತರೇ ಶ್ರೀಮಠದ ಆಸ್ತಿ. ಭಕ್ತರ ಸಹಕಾರದಿಂದ ಪ್ರತಿ ವರ್ಷದಂತೆ ಕಾರ್ತಿಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

30ರಿಂದ ಬಸವ ಚರಿತಾಮೃತ ಪ್ರವಚನ ಆರಂಭವಾಗಲಿದ್ದು, ಗಡಿಗೌಡಗಾಂವ್ ಹಾವಗಿ ಮಠದ ಶ್ರೀ ಜಯಶಾಂತಲಿಂಗ ಶಿವಾಚಾರ್ಯರು ಪ್ರವಚನ ನಡೆಸಿಕೊಡಲಿದ್ದಾರೆ. ಫೆ.18ರಂದು ಮಂಗಲೋತ್ಸವ 20ರಂದು ಉಚಿತ ಸಾಮೂಹಿಕ ವಿವಾಹ ಸೇರಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಯುವ ಮುಖಂಡ ಹನುಮಂತ ನಾಯಕ ಬಿಡುಗಡೆ ಮಾಡಿದರು. ರಾಜಾಕುಶಾಲ್ ನಾಯಕ ಜಹಾಗೀರದಾರ, ಶಾಮಸುಂದರ ಜೋಶಿ, ಡಾ.ಬಿ.ಬಿ.ಬಿರಾದಾರ, ಭೀಮನಗೌಡ ತೀರ್ಥ, ಅಯ್ಯಣ್ಣ ಪಡಶೆಟ್ಟಿ, ಸುರೇಶ ದೇವೂರು, ಹಣಮೇಶಪ್ಪ ಪತ್ತಾರ, ಮಲ್ಲಣ್ಣ ಹೂಗಾರ, ತಿಪ್ಪಣ್ಣ ದ್ಯಾಮನಾಳ, ಕರವೇ ತಾಲೂಕು ಅಧ್ಯಕ್ಷ ರಮೇಶ ಬಿರಾದಾರ, ಪ್ರಲ್ಹಾದಗೌಡ ಪೊಲೀಸ್ಪಾಟೀಲ್, ಬಸಣ್ಣ ಬಂಗಾರಗುಂಡ, ಸುಭಾಷ ಪಡಶೆಟ್ಟಿ, ಮಲ್ಲಿಕಾರ್ಜುನ ಆರಲಗಡ್ಡಿ, ಶರಣು ತುಂಬಗಿ, ಬಸಯ್ಯ ಹಿರೇಮಠ, ಸಂಗು, ಸಂಗನಗೌಡ ಬಿರಾದಾರ, ಅಂಬ್ರೇಶ ಪಡಶೆಟ್ಟಿ, ದೇವು ಆರಲಗಡ್ಡಿ , ಸುಭಾಷ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net