

ಬೀದರ್: ವಿಶ್ವಗುರು ಬಸವಣ್ಣನವರ ತತ್ವ, ಸಿದ್ಧಾಂತಗಳನ್ನು ನಂಬಿ ಶ್ರದ್ಧೆಯಿಂದ ಆಚರಣೆ ಮಾಡುವವರಿಗೆ ಎಂದಿಗೂ ಬಸವ ರP್ಷÀಣೆ ಸಿಗಲಿದೆ ಎಂದು ಅನುಭವ ಮಂಟಪ ಟ್ರಸ್ಟ್ ಅಧ್ಯP್ಷÀರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟz್ದÉÃವರು ಹೇಳಿದರು.
ಇಲ್ಲಿನ ಪೂಜ್ಯ ಡಾ.ಚನ್ನಬಸವ ಪಟ್ಟz್ದÉÃವರು ರಂಗಮAದಿರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನ ಕೊಡಮಾಡುವ 2023ನೇ ಸಾಲಿನ ರಾಜ್ಯಮಟ್ಟದ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿ ಸ್ವೀಕರಿಸಿದ ಅವರು, ಕಾಯಕ ಮತ್ತು ದಾಸೋಹ ತತ್ವ ಅಳವಡಿಸಿಕೊಂಡು ಶರಣರು ಹೇಳಿದಂತೆ ನಡೆದರೆ ಬಸವಣ್ಣ ನಮಗೆ ಬುಲೆಟ್‌ಪ್ರೂï ಇದ್ದಂತೆ. ಪ್ರತಿಯೊಬ್ಬರೂ ಶರಣ ಸಾಹಿತ್ಯ ಮೈಗೂಡಿಸಿಕೊಂಡು ಜೀವನ ಸಾಗಿಸಿ ಎಂದು ಕರೆ ನೀಡಿದರು.
ಚಿಕ್ಕವನಿದ್ದಾಗ ನಾನು ಬಹಳ ದೈವ ಭಕ್ತನಾಗಿದ್ದೆ. ಪ್ರತಿ ಶನಿವಾರ ಹನುಮಾನ ಮಂದಿರಕ್ಕೆ ಹೋಗುತ್ತಿದ್ದೆ. ಪ್ರೌಢ ಶಾಲೆಯಲ್ಲಿದ್ದಾಗ ಔರಾದ್‌ನಲ್ಲಿ ಶ್ರೀ ಲಿಂಗಾನAದ ಸ್ವಾಮೀಜಿ ಪ್ರವಚನ ನೀಡಿದರು. ಒಂದು ರಾತ್ರಿ ಪೂಜ್ಯರ ಪ್ರವಚನ ಕೇಳಿದ ನಂತರ ನಾನು ಬಸವ ತತ್ವದ ಕಡೆ ವಾಲಿದೆ. ಬಹುದೇವರ ಸ್ಮರಣೆ ಬಿಟ್ಟು ಇಷ್ಟಲಿಂಗವೇ ಸರ್ವಸ್ವ ಮಾಡಿಕೊಂಡೆ. ಬಸವಗುರು ಕೃಪೆ, ಡಾ.ಚನ್ನಬಸವ ಪಟ್ಟz್ದÉÃವರು ಮಾರ್ಗದರ್ಶನದಲ್ಲಿ ಬಸವ, ಮಠದ ಸಂಸ್ಕೃತಿ ಕಡೆ ಬಂದಿರುವೆ ಎಂದು ಹೇಳಿದರು.
ಶಾಂತಿವರ್ಧಕ ಶಿP್ಷÀಣ ಸಂಸ್ಥೆ ನಿರ್ದೇಶಕಿ ಡಾ.ಗೀತಾ ಈಶ್ವರ ಖಂಡ್ರೆ ಉದ್ಘಾಟಿಸಿದರು. ಶ್ರೀ ಡಾ.ಶಿವಾನಂದ ಸ್ವಾಮೀಜಿ ಹುಲಸೂರು, ಪೂಜ್ಯ ಡಾ.ಗಂಗಾAಬಿಕೆ ಅಕ್ಕ, ಶ್ರೀ ಗುರುಬಸವ ಪಟ್ಟz್ದÉÃವರು ಸಾನ್ನಿಧ್ಯ, ಮಾಗನೂರು ಬಸಪ್ಪ ಪ್ರತಿಷ್ಠಾನದ ಅಧ್ಯP್ಷÀ ಎಂ.ಬಿ. ಸಂಗಮೇಶ್ವರ ಗೌಡರು ಅಧ್ಯP್ಷÀತೆ ವಹಿಸಿದ್ದರು.
ಕಸಾಪ ಜಿಲ್ಲಾಧ್ಯP್ಷÀ ಸುರೇಶ ಚನ್ನಶೆಟ್ಟಿ ಆಶಯ ನುಡಿ, ಕರ್ನಾಟಕ ಕಾಲೇಜು ಪ್ರಾಚಾರ್ಯ ಡಾ.ಬಸವರಾಜ ಬಲ್ಲೂರ್ ಅಭಿನಂದನಾ ನುಡಿ ಭಾಷಣ ಮಾಡಿದರು. ಬೀದರ್ ವಿವಿ ಕುಲಪತಿ ಪ್ರೊ.ಬಿ.ಎಸ್. ಬಿರಾದಾರ್, ಕಸಾಪ ದಾವಣಗೆರೆ ಜಿಲ್ಲಾಧ್ಯP್ಷÀ ಬಿ.ವಾಮದೇವಪ್ಪ, ಡಾ.ಎಚ್.ಎಸ್. ಮಂಜುನಾಥ ಕುರ್ಕಿ, ಪ್ರಮುಖರಾದ ಬಿ.ಜಿ. ಶೆಟಕಾರ, ಸೋಮಶೇಖರ ಪಾಟೀಲ್ ಗಾದಗಿ, ರಾಜೇಂದ್ರಕುಮಾರ ಗಂದಗೆ, ಶರಣಪ್ಪ ಮಿಠಾರೆ, ಬಸವರಾಜ ಧನ್ನೂರ, ಜಯರಾಜ ಖಂಡ್ರೆ, ಬಸವರಾಜ ಬುಳ್ಳಾ, ಎಂ.ಎಸ್. ಮನೋಹರ, ಶ್ರೀಕಾಂತ ಸ್ವಾಮಿ, ಶಿವಶಂಕರ ಟೋಕರೆ ಇತರರಿದ್ದರು.
ಕನ್ನಡ ಸಾಹಿತ್ಯ ಪರಿಷತ್ ಬೀದರ್, ದಾವಣಗೆರೆ ಜಿಲ್ಲಾ ಘಟಕ ಹಾಗೂ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದಿಂದ ಕಾರ್ಯಕ್ರಮ ಸಂಘಟಿಸಲಾಗಿತ್ತು.
ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿ ಪ್ರದಾನ: ಶಿP್ಷÀಣ, ವಸತಿ ಸೌಲಭ್ಯಕ್ಕಾಗಿ ಭಾಲ್ಕಿ ಹಿರೇಮಠ ಸಂಸ್ಥಾನಕ್ಕೆ ಬಂದೆ. ವ್ಯಾಸಂಗ ಪೂರ್ಣಗೊಳಿಸಿ ನೌಕರಿ ಮಾಡುವ ಗುರಿ ಇತ್ತು. ಆದರೆ ಆಗಿದ್ದು ಮಠಾಧೀಶ… ತಮ್ಮ ಜೀವನದ ಹಳೆಯ ದಿನಗಳನ್ನು ಶ್ರೀ ಡಾ.ಬಸವಲಿಂಗ ಪಟ್ಟz್ದÉÃವರು ಮೇಲುಕು ಹಾಕಿದರು. ಭಾಲ್ಕಿ ಮಠಕ್ಕೆ ಬಂದಿದ್ದು ಯಾವ ಕಾರಣಕ್ಕೆ? ಭವಿಷ್ಯದ ಉz್ದÉÃಶವೇನು ಎಂಬಿತ್ಯಾದ ವಿಷಯಗಳನ್ನು ಪೂಜ್ಯರು ತಮ್ಮ ಭಾಷಣದಲ್ಲಿ ಹಂಚಿಕೊAಡರು. ಮನೆಯಲ್ಲಿ ಬಹಳ ಬಡತನ ಇದ್ದುದರಿಂದ ವ್ಯಾಸಂಗಕ್ಕಾಗಿ ಭಾಲ್ಕಿ ಮಠಕ್ಕೆ ಬಂದೆ. ಪೂಜ್ಯ ಡಾ.ಚನ್ನಬಸವ ಪಟ್ಟz್ದÉÃವರು ನನಗೆ ಮಠದಲ್ಲಿ ಪ್ರವೇಶ ನೀಡಿದರು. ಅಲ್ಲಿ ಕೆಲಸ ಮಾಡಿಕೊಂಡು ಶಿP್ಷÀಣ ಕಲಿದೆ. ನನ್ನಲ್ಲಿನ ಧಾರ್ಮಿಕ ಭಾವನೆಗಳನ್ನು ಕಂಡು ಪೂಜ್ಯರ ಕಣ್ಣು ಬಿತ್ತು. ಭವಿಷ್ಯದಲ್ಲಿ ಏನು ಮಾಡುವೆ ಎಂದು ಪೂಜ್ಯರು ಕೇಳಿದರು. ನೌಕರಿಯೊಂದಿಗೆ ಬಸವ ತತ್ವ ಪ್ರಸಾರ ಮಾಡುವುದು ನನ್ನ ಉz್ದÉÃಶ ಎಂದು ಹೇಳಿದೆ. ಈ ಮಠದ ಪೀಠಾಧಿಪತಿಯಾಗು ಎಂದರು. ಆಗ ಪೂರ್ವಾಶ್ರಮದ ತಾಯಿ ಮತ್ತು ಮನೆಯವರು ಬಹಳಷ್ಟು ದುಃಖಪಟ್ಟರು. ಮಠಾಧೀಶನಾಗಲು ವಿರೋಧ ಮಾಡಿದರು. ಆದರೆ ಗಟ್ಟಿ ನಿರ್ಧಾರ ಮಾಡಿ ಮಠಾಧೀಶನಾಗಲು ಒಪ್ಪಿದೆ. ಶಿP್ಷÀಣಕ್ಕಾಗಿ ಬಂದು ಮಠಾಧೀಶನಾದೆ ಎಂದು ಹೇಳಿದರು.
ಮಾಗನೂರ ಬಸಪ್ಪ ಸೇವೆ ಮಾದರಿ: ಬಸವ ತತ್ವ ಅಳವಡಿಸಿಕೊಂಡು ಜೀವನ ಸಾಗಿಸಿದ ಮಾಗನೂರು ಬಸಪ್ಪನವರ ಸಮಾಜ ಸೇವೆ ಹಾಗೂ ನೆರವು ಮಾದರಿ ಎಂದು ಕಸಾಪ ದಾವಣಗೆರೆ ಮಾಜಿ ಜಿಲ್ಲಾಧ್ಯP್ಷÀ ಡಾ.ಎಚ್.ಎಸ್. ಮಂಜುನಾಥ ಹೇಳಿದರು. ಉಪನ್ಯಾಸ ನೀಡಿದ ಅವರು, ಹಲವು ಶಾಲಾ-ಕಾಲೇಜು, ಸಂಘ-ಸAಸ್ಥೆಗಳನ್ನು ಕಟ್ಟಿದ ಬಸಪ್ಪ ಅವರು ದಾವಣಗೆರೆಯ ಮಹಾತ್ಮ ಗಾಂಧಿ ಎಂದೇ ಖ್ಯಾತಿ ಹೊಂದಿದ್ದರು. ಬಡತನದಲ್ಲಿ ಬೆಳೆದ ಬಸಪ್ಪನವರು ವಿವಿಧ ಉದ್ಯಮ ಆರಂಭಿಸಿ ಹಲವರಿಗೆ ನೆರವಾದರು. ಅವರ ಗಟ್ಟಿತನದ ವ್ಯಕ್ತಿತ್ವ ಎಲ್ಲರಿಗೂ ಮಾದರಿ ಎಂದು ಸ್ಮರಿಸಿದರು.