ಬಸಪ್ಪ ಗುಡಿ ಏರಿಯಾ ನಿವಾಸಿಗಳಿಗೆ ಹಕ್ಕುಪತ್ರ ನೀಡಿ

wadi
ವಾಡಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಸಿ.ಫಕ್ರುದ್ದಿನ್ ಅವರಿಗೆ ಬಸಪ್ಪ ಗುಡಿ ಏರಿಯಾದ ನಿವಾಸಿಗಳು ಮನವಿಪತ್ರ ಸಲ್ಲಿಸಿದರು. ಮಲ್ಲಿಕಾರ್ಜುನ ಹಾರಕೂಡ, ಪೂಜಾ ಫುಲಾರೆ, ಈಶ್ವರ ಅಂಬೇಕರ್, ಮನೋಜ ಹಿರೊಳ್ಳಿ, ಬಸವರಾಜ ಪೂಜಾರಿ ಇತರರಿದ್ದರು.
Published on

ವಾಡಿ: ಬಸಪ್ಪ ಗುಡಿ (ಬಸವನ ಖಣಿ) ಏರಿಯಾದ ನಿವಾಸಿಗಳಿಗೆ ಹಕ್ಕುಪತ್ರ ನೀಡುವಂತೆ ಕಳೆದು 40 ವರ್ಷಗಳಿಂದ ಹೋರಾಟ ಮಾಡುತ್ತಿz್ದೆÃವೆ. ಆದರೆ ಇಲ್ಲಿವರೆಗೂ ನಮ್ಮ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ. ಈಗಲಾದರೂ ನಮ್ಮ ಮನವಿಗೆ ಸ್ಪಂದಿಸುವ ಹಕ್ಕು ಪತ್ರ ವಿತರಿಸುವ ಕೆಲಸ ಮಾಡಿ ಎಂದು ಬಸಪ್ಪ ಗುಡಿ (ಬಸವನ ಖಣಿ) ಏರಿಯಾ ನಿವಾಸಿಗಳು ಮನವಿ ಮಾಡಿದರು.

ಪುರಸಭೆಯಿಂದ ಬಸಪ್ಪ ಗುಡಿ (ಬಸವನಖಣಿ) ಏರಿಯಾದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಮುಖ್ಯಾಧಿಕಾರಿಗೆ ಮನವಿಪತ್ರ ಸಲ್ಲಿಸಿದ ನಿವಾಸಿಗಳು, ಬಡಾವಣೆಯಲ್ಲಿ ನಲ್ಲಿಗಳಿವೆ, ಆದರೆ ನೀರಿಲ್ಲ. ಬಾವಿ ನೀರು ಕುಡಿಯಲು ಯೋಗ್ಯವಿಲ್ಲ. ಹನಿ ನೀರಿಗೂ ಪರದಾಡುವಂತ ಸ್ಥಿತಿಯಿದೆ. ಪ್ರಮುಖ ಸ್ಥಳಗಳಲ್ಲಿ ಹೈಮಾಸ್ಟ್ ದೀಪ ಅಳವಡಿಸಬೇಕು. ಕೂಡಲೇ ಹಕ್ಕು ಪತ್ರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಖ್ಯಾಧಿಕಾರಿ ಸಿ.ಫಕ್ರುದ್ದೀನ್ ಸಾಬ್ ಮಾತನಾಡಿ, ಬಸವನಗುಡಿ ಬಡಾವಣೆಯಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲು 50 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಟೆಂಡರ್ ಕರೆದು ನೀರಿನ ಸಮಸ್ಯೆ ಬಗೆಹರಿಸುತ್ತೇವೆ. ಬೀದಿ ದೀಪ ಹಾಗೂ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು. ಪುರಸಭೆ ವ್ಯಾಪ್ತಿಯಲ್ಲಿ ಬರುವ ಬೇಡಿಕೆ ಈಡೇರಿಸುವ ಪ್ರಯತ್ನ ಮಾಡುತ್ತೇನೆ. ಉಳಿದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ವ್ಯವಸ್ಥಾಪಕ ಮಲ್ಲಿಕಾರ್ಜುನ ಹಾರಕೂಡ, ಪರಿಸರ ಅಭಿಯಂತರೆ ಪೂಜಾ ಫುಲಾರೆ, ಪ್ರಮುಖರಾದ ಈಶ್ವರ ಅಂಬೇಕರ್, ಮನೋಜ ಹಿರೊಳ್ಳಿ, ಬಸವರಾಜ ಪೂಜಾರಿ, ಶ್ರೀಮಂತ ಧುಮ್ಮನಸೂರ, ಕೆ.ವಿರೂಪಾಕ್ಷಿ, ಬಸಮ್ಮ ಪಾಟೀಲ್, ಜ್ಯೋತಿ ಗುತ್ತೇದಾರ್, ಸೂರ್ಯಕಾಂತ ಕೊಂಕನಳ್ಳಿ, ಕಿಶನ್ ಜಾಧವ್, ಗಣೇಶ ರಾಠೋಡ್, ರಾಜೇಶ್ ಜಾಧವ್, ಕಿಶನ್ ಪೂಜಾರಿ, ಶಂಕರ್ ಚಿನ್ನಾ ರಾಠೋಡ್, ಪ್ರಭು ಜಾಧವ್, ಶ್ರೀಶೈಲ ಪುರಾಣಿಕ, ರಾಮು ರಾಠೋಡ್, ರವಿ ಕಾರಬಾರಿ, ಪ್ರಕಾಶ ಪೂಜಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net