ಬಸಟ್ಟಿ ಆದರ್ಶ ಮತ್ತಷ್ಟು ಸಾಧನೆ ಮಾಡಲಿ

19. HBH. 1
Published on

ಹಗರಿಬೊಮ್ಮನಹಳ್ಳಿ: ಒಂದು ಸ್ಪರ್ಧಾತ್ಮಕ ಪರೀಕ್ಷೆ ಉತ್ತೀರ್ಣ ಆಗುವುದೇ ಕಷ್ಟವಾಗಿದೆ. ಹೂವಿನಹಡಗಲಿಯ ಬಸಟ್ಟಿ ಆದರ್ಶ ಶ್ರಮಕ್ಕೆ ಪ್ರತಿಫಲ ಎನ್ನುವಂತೆ ನಾಲ್ಕು ಸರ್ಕಾರಿ ನೌಕರಿ ಸಿಕ್ಕಿವೆ ಎಂದು ಹೊಸ ಆನಂದ ದೇವನಹಳ್ಳಿ ಗ್ರಾಮದ ಪ್ರಮುಖ ಜೆ.ಯೋಗಾನಂದ ಹೇಳಿದರು.

ಹೂವಿನಹಡಗಲಿಯ ಬಸಟ್ಟಿ ಆದರ್ಶ ಒಂದೇ ವರ್ಷದಲ್ಲಿ ನಾಲ್ಕು ಸರ್ಕಾರಿ ಹುದ್ದೆ ಪಡೆದ ಹಿನ್ನೆಲೆಯಲ್ಲಿ ಹೊಸ ಆನಂದ ದೇವನಹಳ್ಳಿ ಗ್ರಾಮಸ್ಥರು ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಬಸಟ್ಟಿ ಆದರ್ಶ ಇದೀಗ ಪಿಎಸ್‌ಐ ಆಗುತ್ತಿದ್ದು, ಇನ್ನಷ್ಟು ಸಾಧನೆ ಮಾಡಲಿ ಎಂದರು.

ಸಾಧಕ ಬಸಟ್ಟಿ ಆದರ್ಶ ಮಾತನಾಡಿ, ಬಿ.ಎಸ್ಸಿ ಕೃಷಿಯಲ್ಲಿ ಪದವಿ ಪಡೆದು ಸಹಕಾರ ಸಂಘಗಳ ನಿರೀಕ್ಷಕನಾಗಿ ಒಂದೆರಡು ತಿಂಗಳು ಕೆಲಸ ಮಾಡಿದ್ದೇನೆ. ಇದೀಗ ಎಸ್‌ಡಿಎ, ಗ್ರಾಮ ಆಡಳಿತಾಧಿಕಾರಿ ಹಾಗೂ ಪಿಎಸ್‌ಐ ನೇಮಕಕ್ಕೆ ಆದೇಶ ಬಂದಿವೆ. ಕೆಎಎಸ್ ಮೇನ್ಸ್ ಪರೀಕ್ಷೆ ಬರೆದಿದ್ದು ಅದು ಕೂಡ ಉತ್ತೀರ್ಣನಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಪ್ರಮುಖರಾದ ಜಿ.ಪಂಪಾಪತಿ, ಕೆ.ರಾಮಣ್ಣ, ಎಚ್.ಎಂ.ರಾಘವೇಂದ್ರ, ವೀರೇಶ, ಸಂತೋಷ ಪೂಜಾರ್, ಬಂಡಿಹಳ್ಳಿ ಮಂಜುನಾಥ, ಯುವರಾಜ, ಗುರುರಾಜ, ಬಿ.ಎಚ್.ಎಂ.ವೀರಭದ್ರಯ್ಯ, ಬಿ.ಗೋಣಿಬಸಪ್ಪ, ಮಾಬುಸಾಬ್, ಸಿದ್ದನಗೌಡ, ಬಸವನಗೌಡ, ಮೃತ್ಯುಂಜಯ, ಸಕರಿಗೌಡ್ರು, ಸಿದ್ದೇಶ, ಮಂಗಳಮ್ಮ ಸಿದ್ದೇಶ, ಕೊಟ್ರದೇವರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net