ಬಳ್ಳಾರಿಯಲ್ಲಿ 23, 24ರಂದು ಅಖಿಲ ಭಾರತ ಯುವಜನ ಫೆಡರೇಷನ್ ರಾಜ್ಯ ಸಮ್ಮೇಳನ

IMG-20250313-WA0037
Published on

ಹಾಸನ: ಅಖಿಲ ಭಾರತ ಯುವಜನ ಫೆಡರೇಷನ್ ವತಿಯಿಂದ ಮಾರ್ಚ್ 23, 24ರಂದು ಬಳ್ಳಾರಿಯಲ್ಲಿ ರಾಜ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಫೆಡರೇಷನ್ ಜಿಲ್ಲಾ ಕಾರ್ಯದರ್ಶಿ ಗಿರೀಶ್ ತಿಳಿಸಿದರು.

ಅಖಿಲ ಭಾರತ ಯುವಜನ ಫೆಡರೇಷನ್ 1959ರ ಮೇ 3ರಂದು ಸ್ಥಾಪನೆಗೊಂಡ ಸಂಘಟನೆಯಾಗಿದ್ದು ಭಾರತದ ಯುವಜನತೆಯ ಉಜ್ವಲ ಭವಿಷ್ಯಕ್ಕಾಗಿ ಯುವ ಸಮೂಹವನ್ನು ಸಂಘಟಿಸಿ, ವೈಜ್ಞಾನಿಕ ಸಮಾಜ ನಿರ್ಮಾಣದ ಗುರಿಯೊಂದಿಗೆ ಜನ್ಮ ತಾಳಿದ ದೇಶಪ್ರೇಮಿ ಸಂಘಟನೆಯಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದ ಭಗತ್ ಸಿಂಗ್, ಸುಖದೇವ್ ರಾಜಗುರು. ಚಂದ್ರಶೇಖರ್ ಆಜಾದ್, ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಾಕುಲ್ಲಾ ಖಾನ್‌ರಂತಹ ನೂರಾರು ಕ್ರಾಂತಿಕಾರಿ ಯುವಕರು ಸ್ವಾತಂತ್ರ್ಯ ಭಾರತದ ಬಗ್ಗೆ ಕಂಡಿದ್ದ ಕನಸುಗಳನ್ನು ನನಸು ಮಾಡುವುದು ಮತ್ತು ಅವರ ಆಶಯಗಳನ್ನು ಇಂದಿನ ಯುವ ಜನಾಂಗಕ್ಕೆ ಅರಿವು ಮೂಡಿಸಿ ರಾಷ್ಟ್ರ ಪ್ರಜ್ಞೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಎಚ್ಚರಿಸುವ ಕೆಲಸದಲ್ಲಿ ಎಐವೈಎಫ್ ಸಕ್ರಿಯವಾಗಿದೆ. ಇಂದು ಭಾರತ ದೇಶ ಎದುರಿಸುತ್ತಿರುವ ಸಾಮಾಜಿಕ ಸಮಸ್ಯೆಗಳಾದ ಬಡತನ, ಹಸಿವು, ನಿರುದ್ಯೋಗ, ಭ್ರಷ್ಟಾಚಾರ, ಅಸಮಾನತೆ, ಅಸ್ಪೃಶ್ಯತೆ, ಮೌಢ್ಯತೆ, ಮತೀಯವಾದ, ಹಿಂಸೆ-ಕ್ರೌರ್ಯಗಳನ್ನು ಕೊನೆಗಾಣಿಸಿ ಶಾಂತಿ- ಸೌಹಾರ್ದತೆ-ಸಮಾನತೆಯ ಸಮಸಮಾಜದ ಸ್ಥಾಪನೆಗಾಗಿ ಶ್ರಮಿಸುತ್ತಿದೆ. ಸರ್ವರಿಗೂ ಅನ್ನ, ನೀರು, ಸೂರು, ಶಿಕ್ಷಣ, ಉದ್ಯೋಗ, ಆರೋಗ್ಯ ದೊರಕುವಂತಹ ಸಾಮಾಜಿಕ ವ್ಯವಸ್ಥೆಗಾಗಿ ಹೋರಾಡುತ್ತಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪುಷ್ಪಲತಾ, ಭುವನ್, ಸಚಿನ್, ಹೇಮಂತ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net