ಬಳ್ಳಾರಿಗೆ ತಟ್ಟದ ಬಂದ್ ಬಿಸಿ: ಜನಜೀವನ ಯಥಾಸ್ಥಿತಿ

IMG20200108081926.jpg
Published on

ಬಳ್ಳಾರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಡಪಕ್ಷಗಳು ಬುಧವಾರ ಕರೆ ನೀಡಿರುವ ಭಾರತ್ ಬಂದ್ ಗೆ ಬಳ್ಳಾರಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜನಜೀವನ ಯಥಾಸ್ಥಿತಿಯಿದೆ.ಎಂದಿನಂತೆ ಸರ್ಕಾರಿ ಬಸ್, ಖಾಸಗಿ ವಾಹನಗಳ ಸಂಚಾರ ಆರಂಭವಾಗಿದ್ದು, ಪ್ರಯಾಣಿಕರಿಗೂ ಯಾವುದೇ ತೊಂದರೆಯಾಗಿಲ್ಲ.

ಅಂಗಡಿ ಮುಂಗಟ್ಟುಗಳು ಪ್ರಾರಂಭವಾಗಿವೆ.ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಎಂದಿನಂತೆ ವಿದ್ಯಾರ್ಥಿಗಳು ತೆರಳಿದರು.

ಮುನ್ನಚ್ಚರಿಕೆ ಕ್ರಮವಾಗಿ ಪೊಲೀಸರು ನಗರದ ರಾಯಲ್ ಸರ್ಕಲ್, ಮೋತಿ ಸರ್ಕಲ್, ಎಸ್ಪಿ ಸರ್ಕಲ್, ಸುಧಾ ಕ್ರಾಸ್ ಸೇರಿ ವಿವಿಧೆಡೆ ಬಿಡು ಬಿಟ್ಟಿದ್ದು, ಮುಂಚಿತವಾಗಿ ಬಂದ್‌ಗೆ ಸಹಕರಿಸುವಂತೆ ಸಂಘಟನೆ ಮುಖಂಡರು ವ್ಯಾಪಕ ಪ್ರಚಾರ ಕೈಗೊಂಡರೂ ಜನ-ಜೀವನ ಎಂದಿನಂತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net