ಬಳ್ಳಾರಿಗೆ ಗಾಂಧೀಜಿ ಭೇಟಿ ಶತಮಾನವೇ ಕಳೆದಿದೆ

Published on

ಬಳ್ಳಾರಿ : ರಾಷ್ಟ್ರಪಿತನ ಹೋರಾಟದ ಯಶೋಗಾಥೆಯನ್ನು ನೆನೆಯುವ ಹೊತ್ತು ದೇಶದ ಸಮಸ್ತ ಜನರಿಗೆ ಬಂದಂತೆ ಬಳ್ಳಾರಿಯ ಜನರಿಗೂ ಒದಗಿರುವುದು ಸುಕೃತವೆನಿಸಿದೆ. ಸ್ವಾತಂತ್ರ್ಯ ಸಮರಕ್ಕೆ ಕರೆ ನೀಡಿದ್ದ ಮಹಾತ್ಮ ಗಾಂಧೀಜಿಯವರು ಬಳ್ಳಾರಿಗೆ ಭೇಟಿ ಭೇಟಿ ನೀಡಿ ಇಂದಿಗೆ ಬರೋಬ್ಬರಿ 104 ನಾಲ್ಕು ವರ್ಷ ಕಳೆದಿವೆ.
ಪ್ರಸ್ತುತ ಗಣಿ ಜಿಲ್ಲೆ ಎಂದು ಕರೆಸಿಕೊಳ್ಳುವ ಬಳ್ಳಾರಿಯ ರೈಲು ನಿಲ್ದಾಣಕ್ಕೆ ಮಹಾತ್ಮ ಗಾಂಧೀಜಿ ಭೇಟಿ ನೀಡಿ ಇಂದಿಗೆ ನೂರು ವರ್ಷಕ್ಕಿಂತ ಅಧಿಕ ಪೂರೈಸಿದೆ. 1921ರ ಅಕ್ಟೋಬರ್ 1ರಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ನಗರದ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ, ಎಂಟು ಗಂಟೆ ಕಾಲ ಅಲ್ಲಿನ ನೆಲದ ಮೇಲೆ ವಿಶ್ರಾಂತಿ ಪಡೆದು ಮುಂದೆ ಹೋಗಿದ್ದರು ಎಂಬ ಪ್ರತೀತಿ ಇದೆ.
ಇತಿಹಾಸದ ನೆನಪು : ಸ್ವಾತಂತ್ರ್ಯದ ಹೋರಾಟದ ಹೊತ್ತಿನಲ್ಲಿ ಧಾರವಾಡ ಜಿಲ್ಲೆಗೆ ಪ್ರಯಾಣಿಸುವ ವೇಳೆ ಮಹಾತ್ಮ ಗಾಂಧೀಜಿ ಅವರು ಬಳ್ಳಾರಿಗೆ ಆಗಮಿಸಿದ್ದರು. ನಮ್ಮ ನೆಲವನ್ನೂ ಪವಿತ್ರಗೊಳಿಸಿದ್ದರು. ಆಗ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಕಾಂಗ್ರೆಸ್ ನಾಯಕರು ತಮ್ಮಲ್ಲಿ ಭೇಟಿ ನೀಡುವಂತೆ ಮನವಿ ಮಾಡಿದ್ದರು. ಇದರಿಂದ ಭಾರತದ ‘ಬಾಪು’ ಎನಿಸಿಕೊಂಡಿರುವ ಮಹಾತ್ಮ ಗಾಂಧೀಜಿ ಅವರು ಯಾವ ಪ್ರದೇಶಕ್ಕೆ ಪ್ರಯಾಣಿಸದೆ ಬಳ್ಳಾರಿ ರೈಲು ನಿಲ್ದಾಣದಲ್ಲಿ ಎಂಟು ಗಂಟೆ ಉಳಿದುಕೊಂಡು ಎರಡು ರಾಜ್ಯಗಳಿಗೆ ಸೌಹಾರ್ದತೆಯ ಬೀಜ ಬಿತ್ತಿದ್ದರು. ಬಳಿಕ ರೈಲಿನಲ್ಲಿ ಧಾರವಾಡ ಜಿಲ್ಲೆಯತ್ತ ಪ್ರಯಾಣ ಬೆಳೆಸಿದ್ದರು ಎಂಬ ಮಾಹಿತಿ ಚರಿತ್ರೆಯಲ್ಲಿ ದಾಖಲಾಗಿದೆ.
ಜಿಲ್ಲೆಯ ಅಳಿಲು ಸೇವೆ: ಸ್ವಾತಂತ್ರೃ ಸಂಗ್ರಾಮ ಹೋರಾಟದ ರೂವಾರಿಯಾಗಿದ್ದ ಮಹಾತ್ಮ ಗಾಂಧಿಯ ಹೋರಾಟಕ್ಕೆ ಆರ್ಥಿಕ ಸಂಕಷ್ಟ ಎದುರಾಗಬಾರದು ಎಂಬ ಅವರ ಕರೆಗೆ ಓಗೊಟ್ಟ ಸೌಮ್ಯ ಸ್ವಭಾವದ ಬಳ್ಳಾರಿಗರು ಜನರು ತಮ್ಮ ಕೈಲಾದಷ್ಟು ಆರ್ಥಿಕ ನೆರವು ನೀಡಿದ್ದರು ಎಂಬುದನ್ನು ಈಗಲೂ ಜಿಲ್ಲೆಯ ಹಿರಿಯರು ನೆನಪಿಸಿಕೊಳ್ಳುತ್ತಿರುವುದು ಹೆಮ್ಮೆ ಎನಿಸಿದೆ. ಪ್ರತಿ ವರ್ಷ ಗಾಂಧಿ ಜಯಂತಿ ಬಂದಾಗ ‘ಬಾಪು’ ಅವರ ಸ್ವಾತಂತ್ರ್ಯದ ಸಮರದ ದಿನಗಳನ್ನು ಸ್ಮರಿಸುವುದು ಸಾಮಾನ್ಯವಾಗಿದೆ.
ಬಳ್ಳಾರಿಗೆ ಗಾಂಧಿ ಭೇಟಿಗೆ ನೂರರ ನೆನಪು : ರಾಷ್ಟ್ರಪಿತ ಮಹಾತ್ಮ ಗಾಂಧಿ ಗಡಿನಾಡು ಬಳ್ಳಾರಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ದಲ್ಲಿ ಜನರು ನಿಬ್ಬೆರಗಿನಿಂದ ನೋಡಿ ಸಂಭ್ರಮಿಸಿದ್ದರು. ಹೀಗಾಗಿ ಗಾಂಧಿ ತಾತ ಅವರು ಜಿಲ್ಲೆಗೆ ಆಗಮಿಸಿ ನೂರು ವರ್ಷಕ್ಕಿಂತ ಅಧಿಕ ಕಳೆದಿದ್ದು, ಅವರ ಸವಿನೆನಪಿಗೆ ಗಾಂಧೀಜಿ ಅಭಿಮಾನಿಗಳ ಬಳಗದಿಂದ ರೈಲ್ವೆ ನಿಲ್ದಾಣಕ್ಕೆ ಗಾಂಧೀಜಿ ಯವರ ಹೆಸರಿಡಬೇಕು ಎಂದು ಆಗ್ರಹಿಸಿ, ಕಳೆದ ಕೆಲ ವರ್ಷಗಳಿಂದ ಕೇಂದ್ರ, ರಾಜ್ಯ ಸರ್ಕಾರ, ರೈಲ್ವೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಮೇಲೆ ನಿರಂತರ ಒತ್ತಡ ಹೇರಿದರೂ ಯಾವುದೇ ಪ್ರಯೋಜನವಾಗಿಲ್ಲ. ಆಡಳಿತಕ್ಕೆ ಬಂದ ಯಾವ ಸರ್ಕಾರಗಳಿಂದಲೂ ಸ್ಪಂದನೆ ನೀಡಿಲ್ಲ. ಹೀಗಾಗಿ ಮಹಾತ್ಮ ಗಾಂಧೀಜಿಯವರು ಜಿಲ್ಲೆಗೆ ಭೇಟಿ ನೀಡಿದ ಅಕ್ಟೋಬರ್ 1ಕ್ಕೆ ನೂರ ವರ್ಷಕ್ಕಿಂತ ಅಧಿಕ ಕಳೆದಿದ್ದು, ಈ ಬಾರಿಯಾದರೂ ರೈಲ್ವೆ ನಿಲ್ದಾಣಕ್ಕೆ ನೂತನ ನಾಮಕರಣ ಮಾಡಬೇಕೆಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

ಕೋಟ್.. ಗಾಂಧೀಜಿ ಮೌಲ್ಯಗಳನ್ನು ದೇಶದಲ್ಲಿ ಹರಡುವ ಇಚ್ಛೆಯಿಂದ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಬಳ್ಳಾರಿ ರೈಲು ನಿಲ್ದಾಣಕ್ಕೆ ಗಾಂಧೀಜಿ ಹೆಸರನ್ನು ನಾಮಕರಣ ಮಾಡಬೇಕು.

  • ಟಿ. ಜಿ. ವಿಠ್ಠಲ್, ಕಾರ್ಯದರ್ಶಿ, ಗಾಂಧಿ ಭವನ, ಬಳ್ಳಾರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net