ಪ್ರತಿಭೆ ಜತೆ ವಿನಯ ಮುಖ್ಯ

Published on

ಬಳ್ಳಾರಿ : ಪ್ರತಿಯೊಬ್ಬ ಸಾಹಿತಿಗಳಿಗೆ ಪ್ರತಿಭೆ ಜತೆಯಲ್ಲಿಯೇ ವಿನಯಶೀಲತೆ ಮುಖ್ಯ ಎಂದು ಮಕ್ಕಳ ಸಾಹಿತಿ ಶಿವಲಿಂಗಪ್ಪ ಹಂದಿಹಾಳು ಹೇಳಿದರು.

ನಗರದ ಪತ್ರಿಕಭವನದಲ್ಲಿಪ್ರಸ್ತಕ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ್ಯ ಸಾಹಿತ್ಯ ಪುರಸ್ಕಾರ ಪಡೆದಿರುವ ಹಿನ್ನೆಲೆ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಶನಿವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಮಕ್ಕಳ ಸಾಹಿತ್ಯಕ್ಕೆ ಪಂಚತಂತ್ರ ಕಥೆಗಳ ಮೂಲವಾದುದು ಎಂಬ ಅಂಶದಿಂದ ಹೆಚ್ಚಾಗಿ ಮೊದಲು ಮಹತ್ವ ಇರಲಿಲ್ಲ. ಸಾಹಿತಿಗಳಾದ ಎಚ್.ಎಸ್.ವೆಂಕಟೇಶ್ ಮೂರ್ತಿ, ಲಕ್ಷೀನಾರಾಯಣ ಭಟ್ಟ ಸೇರಿದಂತೆ ಇತರರಿಂದ ಮತ್ತೆ ಮಕ್ಕಳ ಸಾಹಿತ್ಯ ಮಹತ್ವ ಪಡೆಯಿತು. ಮಕ್ಕಳಲ್ಲಿನ ಮುಗ್ಧತೆ ಯಾವಾಗಲೂ ನಿಷ್ಕಕಲ್ಮಶದಿಂದ ಕೂಡಿರುತ್ತದೆ ಎಂದರು.

ನೋಟ್‌ಬುಕ್ ಎಂಬ ಐದನೇ ಕೃತಿಗೆ ಈ ಪ್ರಶಸ್ತಿ ಒಲಿದಿದೆ. ಮುಂದಿನ ದಿನಗಳಲ್ಲಿ ಈ ಪುಸ್ತಕ ಅಂಗ್ಲ ಭಾಷೆಗೆ ಅನುವಾದವಾಗಲಿದೆ. ಅಲ್ಲದೆ, ಇನ್ನೂ ಎರಡು ತಿಂಗಳಲ್ಲಿ ‘ ಖಾಲಿ ಹಾಳೆ ’ ಎಂಬ ಮಕ್ಕಳ ಸಾಹಿತ್ಯದ ಕಾದಂಬರಿ ಓದುಗರ ಮಡಿಲಿಗೆ ಸೇರಲಿದೆ ಎಂದು ಹೇಳಿದರು. ಬಳಿಕ ಕಾನಿಪದಿಂದ ಸಾಹಿತಿ ಶಿವಲಿಂಗಪ್ಪ ಹಂದಿಹಾಳು ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net