ಬಳ್ಳಾರಿ ; ದಾಖಲೆಯಿಲ್ಲದ 23 ಲಕ್ಷ ರೂ. ನಗದು ವಶ

Cash (1)
ಸಾಂದರ್ಭಿಕ ಚಿತ್ರ
Published on

ದಾಖಲೆಯಿಲ್ಲದೆ ಮನೆಯಲ್ಲಿ ಸಂಗ್ರಹಿಸಿ ಇಡಲಾಗಿದ್ದ 23 ಲಕ್ಷ ರೂ. ನಗದು , 13 ಕೆ.ಜಿ. ಬೆಳ್ಳಿ ಹಾಗೂ 450 ಬಂಗಾರದ ವಸ್ತುಗಳನ್ನು ಪೊಲೀಸರು ದಾಳಿ ನಡೆಸಿ ಮಂಗಳವಾರ ವಶಪಡಿಸಿಕೊಂಡಿದ್ದಾರೆ.
ಇಲ್ಲಿನ ಕಂಬಳಿ ಬಜಾರ್ ನಿವಾಸಿಗಳಾದ ಜ್ಯೂವೆಲರ್ಸ ಮಾಲೀಕರಾದ ಕಮಲೇಶ ಜೈನ್, ಚುನ್ನ್ಿ ಲಾಲ್ ರಾಕೇಶ್ ಕುಮಾರ ಷಾ ಮನೆಗಳಲ್ಲಿ ಜಪ್ತಿ ಮಾಡಲಾಗಿದೆ. ಅನಧಿಕೃತವಾಗಿ ಯಾವುದೇ ದಾಖಲೆಗಳಿಲ್ಲದೆ ದೊರೆತಿದ್ದು, ಇವುಗಳ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಳಸಬಹುದು ಎಂಬ ಸಂದೇಹಯಿದೆ. ಇವುಗಳನ್ನು ಮುಂದಿನ ವಿಚಾರಣೆಗಾಗಿ ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಹಸ್ತಾಂತರಿಸಿ ಪರಿಶೀಲನೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net