ಬಳಿಗಾರ್ ಅವರದು ಸರಳ ವ್ಯಕ್ತಿತ್ವ

6 skp 1
ಎಚ್.ಟಿ. ಬಳಿಗಾರ್ ಜನ್ಮದಿನಾಚರಣೆ ಅಂಗವಾಗಿ ಬಳಿಗಾರ್ ಫೌಂಡೇಶನ್‌ನಿಂದ ಶಿಕಾರಿಪುರದ ವಿದ್ಯಾಜ್ಯೋತಿ ಬುದ್ಧಿಮಾಂದ್ಯ ವಸತಿ ಶಾಲೆಗೆ ದಿನಬಳಕೆಯ ಸಾಮಗ್ರಿ ವಿತರಿಸಲಾಯಿತು. ಬಸವರಾಜ್, ಹುಚ್ಚುರಾಯಪ್ಪ, ರಸೂಲ್ ಸಾಬ್, ರೇವಣಪ್ಪ, ಐಶ್ವರ್ಯಾ, ಭೂಮಿಕಾ ಇತರರಿದ್ದರು.
Published on

ಶಿಕಾರಿಪುರ: ಬಳಿಗಾರ್ ಅವರದು ಸ್ನೇಹಮಯಿ ವ್ಯಕ್ತಿತ್ವ. ಅಜಾತಶತ್ರುವಿನಂತೆ ಬೆಳೆದು ಜನಮನ ಗೆದ್ದಿದ್ದರು. ರಾಗದ್ವೇಷಗಳಿಲ್ಲದ ಅತ್ಯಂತ ನಿರ್ಮಲ ಹೃದಯಿ ಎಂದು ಬಳಿಗಾರ್ ಫೌಂಡೇಶನ್ ಅಧ್ಯಕ್ಷ ವೈಭವ ಬಸವರಾಜ್ ಬಣ್ಣಿಸಿದರು.

ಫೌಂಡೇಶನ್‌ನಿಂದ ಶುಕ್ರವಾರ ದೊಡ್ಡಪೇಟೆ ವಿದ್ಯಾಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಎಚ್.ಟಿ.ಬಳಿಗಾರ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಳಿಗಾರ್ ಅವರು ಶೋಷಿತರ, ನೊಂದವರ, ಅಸಹಾಯಕರ ಪರವಾಗಿದ್ದರು. ಹಾಗಾಗಿ ಅವರ ಜನ್ಮದಿನವನ್ನು ಬಡ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ಆಚರಿಸಲಾಗಿದೆ. ಈ ಶಾಲೆಗೆ ಫೌಂಡೇಶನ್‌ನಿಂದ ದಿನಬಳಕೆಯ ಸಾಮಗ್ರಿ ನೀಡುತ್ತಿದ್ದು, ಮುಂದೆಯೂ ಅವರ ಆಶಯದಂತೆ ನೊಂದವರ, ದುರ್ಬಲರ ಪರವಾಗಿ ಇರುತ್ತೇವೆ ಎಂದರು.

ಗೌರವಾಧ್ಯಕ್ಷ ಶಿವಣ್ಣ ಮಾತನಾಡಿ, ಬಳಿಗಾರ್ ಅವರು ಕೇವಲ ರಾಜಕರಾಣಿಯಗಿರದೆ ಎಲ್ಲರ ಜತೆ ಬೆರೆತು ಬಡವರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಬಸವಣ್ಣ ಮತ್ತು ಅಂಬೇಡ್ಕರ್ ಆಚಾರ, ವಿಚಾರಗಳನ್ನು ಪಾಲಿಸುತ್ತಿದ್ದ ಅಪರೂಪದ ವ್ಯಕ್ತಿ ಎಂದು ಹೇಳಿದರು.

ಗೌರವಾಧ್ಯಕ್ಷ ಕೆ.ಎಸ್.ಹುಚ್ಚುರಾಯಪ್ಪ ಮಾತನಾಡಿ, ಅಸಹಾಯಕರ ಮತ್ತು ನೊಂದವರ ಪರವಾಗಿ ಫೌಂಡೇಶನ್ ಕೆಲಸ ಮಾಡಿದರೆ ಬಳಿಗಾರರ ಹೆಸರು ಶಾಶ್ವತವಾಗಿ ಉಳಿಯುತ್ತದೆ ಎಂದು ತಿಳಿಸಿದರು.

ಬುದ್ಧಿಮಾಂದ್ಯ ಮಕ್ಕಳ ಶಾಲೆಯ ಸಂಸ್ಥಾಪಕ ಈರಪ್ಪ ಮಾತನಾಡಿ, ಯಾವುದೇ ಅನುದಾನವಿಲ್ಲದೆ ಕಳೆದ 10 ವರ್ಷಗಳಿಂದ ನಡೆಸುತ್ತಿರುವ ಬುದ್ಧಿಮಾಂದ್ಯ ಮಕ್ಕಳ ಶಾಲೆಗೆ ಫೌಂಡೇಶನ್ ಸಹಾಯ ಮಾಡಿರುವುದು ಸಂತಸ ತಂದಿದೆ ಎಂದರು.

ಉಪಾಧ್ಯಕ್ಷ ರಸೂಲ್ ಸಾಬ್, ರೇವಣಪ್ಪ, ನಾಗಪ್ಪ ನಾಗೆಹಳ್ಳಿ, ನಾಗರಾಜ್, ಟಿ.ಓಂಕಾರಪ್ಪ, ಐಶ್ವರ್ಯಾ, ಭೂಮಿಕಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net