ಬಳಸಿದ ಅಡುಗೆ ಎಣ್ಣೆ ಸಂಸ್ಕರಿಸಿ ವಾಹನ ಚಲಾವಣೆ ತಂತ್ರಜ್ಞಾನ ಅವಿಷ್ಕರಿಸಿದ ಎನ್ಐಇ ಕಾಲೇಜು ವಿದ್ಯಾರ್ಥಿಗಳು

2
Published on

ಮೈಸೂರು: ಬಳಸಿ ಬಿಸಾಡುವ ಅಡುಗೆ ಎಣ್ಣೆಯನ್ನು ಸಂಸ್ಕರಿಸಿ ವಾಹನಗಳಿಗೆ ಬಳಸುವ ತಂತ್ರಜ್ಞಾನವನ್ನು ನಗರದ ನ್ಯಾಷಿನಲ್ ಇನ್ಸಿಟಿಟ್ಯೂಟ್ ಆಫ್ ಇಂಜಿನಿಯರಿಂಗ್ (ಎನ್‌ಐಇ) ವಿದ್ಯಾರ್ಥಿಗಳ ತಂಡ ಅವಿಷ್ಕರಿಸಿದೆ.
ಇಂಡಸ್ಟ್ರಿಯಲ್ ಆ್ಯಂಡ್ ಪ್ರೊಡಕ್ಷನ್ಸ್ ಎಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಎಂ.ಕೆ.ಹೇಮಂತ್, ವಿ.ಸುಬ್ರಹ್ಮಣ್ಯನ್, ಆರ್.ಸ್ವಾತಿ ಹೆಗ್ಡೆ,್ತ ಸುಫಿಯಾನ್ ಅಹ್ಮದ್ ತಂಡ ಬಳಕೆಯಾದ ಎಣ್ಣೆಯಿಂದ ಜೈವಿಕ ಇಂಧನವನ್ನು ಬೇರ್ಪಡಿಸಿ ಡೀಸೆಲ್‌ನೊಂದಿಗೆ ಮಿಶ್ರಣ ಮಾಡಿ ವಾಹನಕ್ಕೆ ಬಳಸುವ ತಂತ್ರಜ್ಞಾನವನ್ನು ಕಂಡು ಹಿಡಿದಿದ್ದಾರೆ.
ಯೋಜನೆಯ ಮಾರ್ಗದರ್ಶಿ ಕೆ.ವಿ.ಸಂದೇಶ್‌ಗೌಡ ಮಾತನಾಡಿ, ಎಣ್ಣೆಯನ್ನು ಬಳಕೆ ಮಾಡಿದ ಬಳಿಕ ಅದನ್ನು ಹೊರಗೆ ಚೆಲ್ಲುವ ಇಲ್ಲವೇ ಚರಂಡಿಗೆ ಸುರಿಯುವುದು ನಡೆಯುತ್ತಿದೆ. ಇದರಿಂದ ಪರಿಸರ, ಜಲ ಮಾಲಿನ್ಯವೂ ಉಂಟಾಗುತ್ತಿದೆ. ಹೀಗಾಗಿ ಇದನ್ನು ತಪ್ಪಿಸಲು ಈ ತಂತ್ರಜ್ಞಾನ ನೆರವಾಗಲಿದೆ. ಅಲ್ಲದೇ ಇಂಧನದ ಸಮಸ್ಯೆಯನ್ನು ತಕ್ಕಮಟ್ಟಿಗೆ ಕಡಿಮೆ ಮಾಡಲಿದೆ. ಎಂದು ಹೇಳಿದರು.
ವಿದ್ಯಾರ್ಥಿಗಳು ತಯಾರು ಮಾಡಿದ ಇಂಧನವನ್ನು ಶುಕ್ರವಾರ ಕಾಲೇಜಿನ ವಾಹನಕ್ಕೆ ಬಳಸುವ ಪ್ರಾತ್ಯಕ್ಷಿಕೆ ನಡೆಯಿತು.
ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ.ವೈ.ಎಸ್.ವರದರಾಜನ್, ಡಾ.ಕೆ.ಎಂ.ಸುಬ್ಬಯ್ಯ, ಡಾ.ಎಂ.ಮೋಹನ್ ರಾಮ್, ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಸಿ.ಮಂಜುನಾಥ್, ಪ್ರೊ.ಶಾಮಸುಂದರ್, ವಿಭಾಗದ ಮುಖ್ಯಸ್ಥೆ ಎಸ್.ಎನ್.ರಶ್ಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net