ಆದಿಮಾನವನ ತಲೆಬುರುಡೆ ಪ್ರದರ್ಶನ

skull
ಬಳ್ಳಾರಿಯ ಸಂಗನಕಲ್ ವಸ್ತು ಸಂಗ್ರಹಲಯದಲ್ಲಿ ಪ್ರೊ.ರವಿ ಕೋರಿಶೆಟ್ಟರ್ ಅವರು ಹೋಮೋ ನರ್ಮದೆಂನ್ಸಿಸ್ ಆದಿ ಮಾನವನ ಪಳೆಯುಳಿಕೆಯನ್ನು ಡಾ.ದಿವಾಕರ್ ಅವರಿಗೆ ಹಸ್ತಾಂತರಿಸಿದರು.
Published on

ಬಳ್ಳಾರಿ: ಇಲ್ಲಿನ ರಾಬರ್ಟ್ ಬ್ರೂಸ್‌ಫುಟ್ ಸಂಗನಕಲ್ ವಸ್ತು ಸಂಗ್ರಹಾಲಯದಲ್ಲಿ ಮೂರರಿಂದ ನಾಲ್ಕು ಲಕ್ಷ ವರ್ಷಗಳ ಹಿಂದಿನ ಆದಿ ಮಾನವನ ಹೋಮೋ ನರ್ಮದೆಂನ್ಸಿಸ್ ಪಳೆಯುಳಿಕೆಗಳನ್ನು ಭಾನುವಾರ ಪ್ರದರ್ಶನಕ್ಕಿಡಲಾಗಿತ್ತು.

ಇದರೊಂದಿಗೆ ಒಟ್ಟು ಹದಿನೈದು ತಲೆಬುರುಡೆಗಳನ್ನು (ಜಗತ್ತಿನಲ್ಲಿ ವಿವಿಧ ಕಾಲಘಟ್ಟದಲ್ಲಿ ಸಿಕ್ಕಿರುವ) ಹೊಂದಿದ ಏಕೈಕ ವಸ್ತುಸಂಗ್ರಹಾಲಯ ಇದಾಗಿದೆ. ಹೋಮೋ ನರ್ಮದೆಂನ್ಸಿಸ್ ಪಳೆಯುಳಿಕೆಯನ್ನು 1982ರಲ್ಲಿ ನರ್ಮದಾ ನದಿ ದಂಡೆ ಮೇಲೆ ವಿಜ್ಞಾನಿ ಅರುಣ್ ಸೋನಾಕೀಯ ಪತ್ತೆ ಹಚ್ಚಿದ್ದರು. ಇದು ತಲೆ ಬುರುಡೆಯ ಬಲ ಭಾಗದ ಒಂದು ತುಣುಕಾಗಿದ್ದು, ಬಹಳಷ್ಟು ಇತಿಹಾಸಕಾರರನ್ನು ಆಕರ್ಷಸಿದೆ.

ಮಾನವನ ಜೈವಿಕ ವಿಕಸನದ ಅಧ್ಯಯನದಲ್ಲಿ ಪ್ರಾಮುಖ್ಯ ಪಡೆದಿದೆ. ಇದುವರೆಗೂ ಭಾರತದಲ್ಲಿ ಸಿಕ್ಕಿರುವ ಆದಿಮಾನವನ ಏಕೈಕ ಪಳೆಯುಳಿಕೆಯಾಗಿದೆ. ಖ್ಯಾತ ದಂತ ವೈದ್ಯ ಎಸ್.ದಿವಾಕರ್, ಪ್ರೊ.ರವಿ ಕೋರಿಶೆಟ್ಟರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net