

ನಾಪೋಕ್ಲು: ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಳೆಯಡ ಕಪ್-2023ರ ಬುಧವಾರದ ಮೊದಲ ಪಂದ್ಯಾಟದಲ್ಲಿ ಮುಕ್ಕಾಟಿರ(ಪುಲಿಕೋಟು) ತಂಡವು 1 ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿ ಜಯ ಸಾಧಿಸಿತು. ಬಲ್ಲಂಡ ತಂಡವು 6 ವಿಕೆಟ್ ನಷ್ಟಕ್ಕೆ 46 ರನ್ ಗಳಿಸಿತು.
ಮುಂದಿನ ಪಂದ್ಯದಲ್ಲಿ ನಾಟೋಳಂಡ ಮತ್ತು ಅಚ್ಚಪಂಡ ತಂಡಗಳು ಸ್ಪರ್ಧಿಸಿದವು. ನಾಟೋಳಂಡ ತಂಡ 4 ವಿಕೆಟ್ ನಷ್ಟಕ್ಕೆ 38 ರನ್ ಗಳಿಸಿದರೆ, ಅಚ್ಚಪಂಡ ತಂಡ 1ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿ ಗೆಲುವು ಸಾಧಿಸಿತು. ಮುಂದಿನ ಪಂದ್ಯದಲ್ಲಿ ಪುಟ್ಟಿಚಂಡ 9 ವಿಕೆಟ್ ನಷ್ಟಕ್ಕೆ 55 ರನ್ ಗಳಿಸಿತು. ಎದುರಾಳಿ ಅಪ್ಪಾರಂಡ ತಂಡವು 3 ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿ ಗೆಲುವು ಸಾಧಿಸಿತು. ಕೀತಿಯಂಡ ತಂಡವು 1 ವಿಕೆಟ್ ನಷ್ಟಕ್ಕೆ 23 ರನ್ ಗಳಿಸಿತು. ಬೇರೆರ ತಂಡ 6 ವಿಕೆಟ್ ನಷ್ಟಕ್ಕೆ 22 ರನ್ ಗಳಿಸಿ ಸೋಲು ಅನುಭವಿಸಿತು. ಕೋಡಿರ ತಂಡದ ವಿರುದ್ಧ ಚನ್ನಪಂಡ ತಂಡವು ಗೆಲುವು ಸಾಧಿಸಿತು. ಕೋಡಿರ ತಂಡ 3 ವಿಕೆಟ್ ನಷ್ಟಕ್ಕೆ 39 ರನ್ ಗಳಿಸಿದರೆ, ಚನ್ನಪಂಡ 4 ವಿಕೆಟ್ ನಷ್ಟಕ್ಕೆ 42 ರನ್ ಗಳಿಸಿತು.
ಅಯ್ಯಕುಟ್ಟೀರ ತಂಡದ ವಿರುದ್ಧ ಕುಂದಿರ ತಂಡ ಗೆಲುವು ಸಾಧಿಸಿತು. ಅಯ್ಯಕುಟ್ಟೀರ ತಂಡ 8 ವಿಕೆಟ್ ನಷ್ಟಕ್ಕೆ 53 ರನ್ ಗಳಿಸಿತು. ಕುಂಡೀರ ತಂಡ 1ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿತು. ಅನ್ನಲಮಾಡ ವಿರುದ್ಧ ಪಾರುವಂಗಡ ತಂಡ ಜಯ ಸಾಧಿಸಿತು. ಅನ್ನಲಮಾಡ ತಂಡ 5 ವಿಕೆಟ್ ನಷ್ಟಕ್ಕೆ 38 ರನ್ ಗಳಿಸಿತು. ಪಾರುವಂಗಡ ತಂಡ 2 ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿ ಜಯಸಾಧಿಸಿತು.
ಮುಂದಿನ ಪಂದ್ಯದಲ್ಲಿ ಅವರೇಮಾದಂಡ ತಂಡ 6 ವಿಕೆಟ್ ನಷ್ಟಕ್ಕೆ 34 ರನ್ ಗಳಿಸಿದರೆ, ಎದುರಾಳಿ ಅಪ್ಪುಡ ತಂಡ 3 ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿತು. ಮುಕ್ಕಾಟಿರ (ಬೇತ್ರಿ) ತಂಡವು 87 ರನ್ ಗಳಿಸಿ ಚೆನಿಯ ಪಂಡ ತಂಡದ ವಿರುದ್ಧ ಜಯ ಸಾಧಿಸಿತು. ಚೆನಿಯಪಂಡ 34 ರನ್ ಗಳಿಸಲಷ್ಟೇ ಶಕ್ತವಾಯಿತು. ಚನ್ನಪಂಡ ತಂಡ 1 ವಿಕೆಟ್ ನಷ್ಟಕ್ಕೆ 21 ರನ್ ಗಳಿಸಿ ಗೆಲುವು ಸಾಧಿಸಿತು. ಕೀತಿಯಂಡ ತಂಡ ಮೂರು ವಿಕೆಟ್ ನಷ್ಟಕ್ಕೆ 20 ರನ್ ಗಳಿಸಿತ್ತು. ಮುಂದಿನ ಪಂದ್ಯದಲ್ಲಿ ಕೂತಂಡ ತಂಡಕ್ಕೆ ನಾಲ್ಕು ವಿಕೆಟ್ ನಷ್ಟಕ್ಕೆ 50 ರನ್ ಲಭಿಸಿತು. ಮಲ್ಲೇಂಗಡ ತಂಡ 1 ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿ ಗೆಲವು ಸಾಧಿಸಿತು. ಮತ್ತೊಂದು ಪಂದ್ಯದಲ್ಲಿ ಕನ್ನಡ ತಂಡಕ್ಕೆ ಕುಂದಿರ ತಂಡ 29 ರನ್ ಗಳ ಟಾರ್ಗೆಟ್ ನೀಡಿತು. ಕನ್ನಂಡ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ, 34 ರನ್ ಗಳಿಸಿ ಜಯ ಸಾಧಿಸಿತು.
ವೀಕ್ಷಕ ವಿವರಣೆಗಳನ್ನು ಕುಲ್ಲೇಟಿರ ಅರುಣ್ ಬೇಬ ಮತ್ತು ಬಾಳೆಯಡ ದಿವ್ಯ ಮಂದಪ್ಪ ನೀಡಿದರೆ, ಟೆಕ್ನಿಕಲ್ ಟೀಂ ಪೊರ್ಕೊವಂಡ ಸುನಿಲ್ ಮತ್ತು 9 ಸದಸ್ಯ ಬಳಗ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.