ಬಲ್ಬ್​ ಹಾಕಲು ಹೋದವ ಸಾವು

Published on

ತಿಪಟೂರು: ಟೀ ಅಂಗಡಿ ಪ್ರಾರಂಭಿಸುವ ಉತ್ಸಾಹದಲ್ಲಿ ಅಂಗಡಿಗೆ ಬಲ್ಬ್​ ಹಾಕಲು ಹೋದ ವ್ಯಕ್ತಿ ವಿದ್ಯುತ್​ ಶಾಕ್​ಗೆ ಬಲಿಯಾಗಿದ್ದಾನೆ. ನಗರದ ದೊಡ್ಡಯ್ಯನಪಾಳ್ಯದ ನಿವಾಸಿ ಸುರೇಶ್​(42) ಮೃತ, ತಮ್ಮ ಮನೆ ಮುಂಭಾಗದಲ್ಲಿ ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಕಾಫಿ-, ಟೀ ವ್ಯಾಪಾರ ಪ್ರಾರಂಭಿಸುವ ಸಿದ್ಧತೆ ನಡೆಸಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಸೋಮವಾರ ಬೆಳಗ್ಗೆ ಕಾಫಿ-, ಟೀ ವ್ಯಾಪಾರ ಪ್ರಾರಂಭಿಸಬೇಕಿತ್ತು. ಅಂಗಡಿ ಪ್ರಾರಂಭದ ಸಿದ್ಧತೆ ನಡೆಸಿದ್ದ ಸುರೇಶ್​, ಭಾನುವಾರ ರಾತ್ರಿ ಅಂಗಡಿಗೆ ವಿದ್ಯುತ್​ ಬಲ್ಬ್​ ಅಳವಡಿಸಲು ಹೋದಾಗ ವಿದ್ಯುತ್​ ಶಾಕ್​ಗೆ ಒಳಗಾಗಿ ಮೃತಪಟ್ಟಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಸುರೇಶ್​ ತಾಲೂಕಿನ ಮಲ್ಲಿಗೆರೆಯ ಅಶ್ವಿನಿ ಜತೆ ವಿವಾಹವಾಗಿ ಏ.21 ಕ್ಕೆ ಸರಿಯಾಗಿ ಎರಡು ತಿಂಗಳಾಗಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net