ಬಲೆಗೆ ಬಿದ್ದ ಭಾರಿ ಗಾತ್ರದ ಕಾಟ್ಲ

25 sgr 2
Published on

ಸಾಗರ: ತಾಲೂಕಿನ ಅದರಂತೆ ಕೆರೆಯಲ್ಲಿ ಸೋಮವಾರ ಮೀನುಗಾರರ ಬಲೆಗೆ ಎಂಟೂವರೆ ಕೆಜಿ ತೂಕದ ಕಾಟ್ಲ ಮೀನು ಸಿಕ್ಕಿದೆ. ಬಂದಗದ್ದೆ ಮತ್ತು ಅದರಂತೆ ಕೆರೆಗಳಲ್ಲಿ ಬಲೆ ಬೀಸಲಾಗಿದ್ದು ಅದರಂತೆ ಕೆರೆಯಲ್ಲಿ ಮೀನುಗಾರರು ಬಲೆಗೆ ಭಾರಿ ಗಾತ್ರದ ಮೀನು ಬಲೆಗೆ ಸಿಕ್ಕಿದೆ. ಇದರ ಜತೆಗೆ ಕಾಟ್ಲ, ಗೌರಿ, ಮಜಳೆ, ಜಬ್ಬು ಮೀನುಗಳು ಮಾರಾಟಕ್ಕಿದ್ದವು. ತಾಲೂಕಿನಾದ್ಯಂತ ಕೆರೆಗಳಲ್ಲಿ ಟೆಂಡರ್ ಮೂಲಕ ಕಳೆದ ವರ್ಷ ಬಿಡಲಾಗಿದ್ದ ಮೀನು ಮರಿಗಳನ್ನು ಸೆರೆ ಹಿಡಿದು ಸ್ಥಳದಲ್ಲಿಯೇ ಮಾರಾಟ ಮಾಡುವ ಪ್ರಕ್ರಿಯೆ ಎಲ್ಲ ಕೆರೆಗಳಲ್ಲೂ ನಡೆಯುತ್ತಿದೆ.

ಮೀನು ಖರೀದಿಸಿದ ಕೃಷ್ಣಪ್ಪ, ನಮ್ಮ ಪ್ರದೇಶದ ಕೆರೆಗಳಲ್ಲಿ ಊರಿನವರೇ ಮೀನು ಮರಿಗಳನ್ನು ಬಿಟ್ಟು ಟೆಂಡರ್ ಹಿಡಿದು ಮಾರಾಟ ಮಾಡುತ್ತಾರೆ. ಈ ಬಾರಿ ಕೆರೆಯಲ್ಲಿ ಭರ್ಜರಿ ಮೀನುಗಳು ಸಿಕ್ಕಿದ್ದು 20 ಸಾವಿರ ರೂ.ಗೂ ಹೆಚ್ಚಿನ ವಹಿವಾಟು ನಡೆದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net