ಬಲಿಷ್ಠ ಭಾರತಕ್ಕಾಗಿ ಮೋದಿ ಗೆಲ್ಲಿಸಿ

3004Klb04
Published on

ಕಲಬುರಗಿ: ಬಲಿಷ್ಠ, ಸದೃಢ ಹಾಗೂ ವಿಕಸಿತ ಭಾರತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಗೆಲ್ಲಿಸಿ ಎಂದು ಬಿಜೆಪಿ ರಾಜ್ಯ ವಕ್ತಾರೆ ಸುರಭಿ ಹೊದಿಗೇರೆ ಮನವಿ ಮಾಡಿದರು.
ಲೋಕಸಭಾ ಚುನಾವಣೆ ನಿಮಿತ್ತ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ್ ಪರ ನಗರದ ರಾಜಾಪುರ, ಪ್ರಶಾಂತನಗರದಲ್ಲಿ ಮನೆ-ಮನೆ ಪ್ರಚಾರದಲ್ಲಿ ಮತಯಾಚಿಸಿ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ೧೦ ವರ್ಷದಲ್ಲಿ ಬಡವರು, ರೈತರು ಹಾಗೂ ನಿರ್ಗತಿಕರ ಪರ ಅನೇಕ ಯೋಜನೆ ಜಾರಿಗೊಳಿಸಿದೆ. ವಿಶೇಷವಾಗಿ ಮಹಿಳೆಯರಿಗೆ ಸೌಲಭ್ಯ ಒದಗಿಸಿದೆ. ಹೊಗೆ ಮುಕ್ತ ದೇಶಕ್ಕಾಗಿ ಉಜ್ವಲ ಯೋಜನೆ ಅಡಿ ಮಹಿಳೆಯರಿಗೆ ಉಚಿತ ಗ್ಯಾಸ್, ಬಯಲು ಮುಕ್ತ ಶೌಚ್ಯ ನಿರ್ಮಾಣಕ್ಕಾಗಿ ದೇಶಾದ್ಯಂತ ಶೌಚಗೃಹ ಕ್ರಾಂತಿ ಮಾಡಿದ್ದಾರೆ ಎಂದು ಹೇಳಿದರು.

ರೈತರಿಗೆ ಸಹಾಯಧನ, ಸಬ್ಸಿಡಿ ದರದಲ್ಲಿ ರಸಗೊಬ್ಬರ ಮತ್ತು ಆಯುಷ್ಮಾನ್ ಭಾರತ ಯೋಜನೆ ಮೂಲಕ ಬಡವರಿಗೆ ಐದು ಲಕ್ಷ ರೂ.ವರೆಗಿನ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡಿ ಬಡವರಿಗೆ ವರದಾನವಾಗಿದೆ. ಯುವಕರಿಗೆ ಉದ್ಯೋಗ ಕೈಗೊಳ್ಳಲು ಸಬ್ಸಿಡಿಯೊಂದಿಗೆ ಸ್ಯೂರಿಟಿ ಇಲ್ಲದೆ ಸಾಲ, ಬೀದಿ ವ್ಯಾಪಾರಿಗಳಿಗೆ ಸಹಾಯಧನ ನೀಡಿದ್ದು ಮೋದಿ ಎಂದು ಹೇಳಿದರು.

ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವಾ ಅಷ್ಠಗಿ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಲಬುರಗಿ ಜಿ¯್ಲÉಗೆ ವಂದೇ ಭಾರತ್ ರೈಲು, ಸಾಮಾನ್ಯ ರೈಲು, ಜವಳಿ ಪಾರ್ಕ್, ಭಾರತ್ ಮಾಲಾ ಹೆದ್ದಾರಿ, ಜಲ್ ಜೀವನ್ ಮಿಷನ್ ಅಡಿ ಮನೆ ಮನೆಗೆ ಕುಡಿಯುವ ನೀರು ಒದಗಿಸಿದೆ ಎಂದು ಹೇಳಿದರು.

ಪಾಲಿಕೆ ಮಾಜಿ ಸದಸ್ಯ ಉದಯ ರೇಷ್ಮೆ, ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರೀತಂ ಪಾಟೀಲ್, ನಗರ ಜಿ¯್ಲÁ ಅಧ್ಯP್ಷÀ ಮಹೇಶ ಚವ್ಹಾಣ್, ಪ್ರಮುಖರಾದ ಗೋಪಾಲಕೃಷ್ಣ ಸರಡಗಿ, ನಾರಾಯಣ ಜಾಗೀರದಾರ, ಅಮಿತ್ ಕುಲ್ಕರ್ಣಿ, ಸತ್ಯ ಪ್ರಮೋದ್ ಪಂತ್, ಸೌರಭ ರಂಗದಾಳ, ವೀರೇಶ ನೀಲಾ, ಶೈಲೇಶ ತುರ್ಕರ, ಶುಭಂ ತಿವಾರಿ, ಕಿರಣ ಸುರಪುರ, ಚೇತನಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net