ಬಲಿಜ ಸಮಾಜಕ್ಕೆ ಪೂರ್ಣ ಪ್ರಮಾಣದಲ್ಲಿ 2ಎ ಮೀಸಲಾತಿಗೆ ಆಗ್ರಹ; ಉಪವಿಭಾಗಾಧಿಕಾರಿಗಳಿಗೆ ಮನವಿ

SGR WEEEB
Published on

ಸಾಗರ: ಬಲಿಜ ಸಮುದಾಯಕ್ಕೆ ಪೂರ್ಣ ಪ್ರಮಾಣದ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಶ್ರೀಲಕ್ಷ್ಮೀ ಬಲಿಜ ಮಹಿಳಾ ಸಂಘ ಮತ್ತು ಬಲಿಜ ಯುವ ವೇದಿಕೆ ಪದಾಧಿಕಾರಿಗಳು ಉಪವಿಭಾಗಾಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.

21 ಒಳಪಂಗಡ ಹೊಂದಿರುವ ಬಲಿಜ ಜನಾಂಗವು ರಾಜ್ಯದಲ್ಲಿ ಸುಮಾರು 45 ಲಕ್ಷ ಜನಸಂಖ್ಯೆ ಹೊಂದಿದೆ. ಜಿಲ್ಲೆಯ ಜನಸಂಖ್ಯೆಯಲ್ಲಿ ಶೇ 45ರಷ್ಟಿದೆ. ನಮ್ಮದು ಹಿಂದುಳಿದ ಸಮುದಾಯವಾಗಿದ್ದು ಬಳೆ, ಹೂವು, ಅರಿಶಿನ ಕುಂಕುಮ ಸೇರಿದಂತೆ ಸಣ್ಣಪುಟ್ಟ ವಹಿವಾಟು ನಡೆಸಿಕೊಂಡು ಬರುತ್ತಿದ್ದಾರೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿದೆ. ಹಿಂದೆ ಯಾವುದೇ ಉಪ ಸಮಿತಿ ವರದಿಯಿಲ್ಲದೆ ನಮ್ಮ ಸಮಾಜವನ್ನು 3ಎಗೆ ವರ್ಗಾಯಿಸಲಾಗಿದೆ. 2011ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶೈಕ್ಷಣಿಕ ಉದ್ದೇಶಕ್ಕೆ ಮಾತ್ರ ಪ್ರವರ್ಗ 3ಎಯಿಂದ 2ಎಗೆ ವರ್ಗಾಯಿಸಿದ್ದರು. ಹಿಂದಿನಿಂದಲೂ ನಮ್ಮ ಜನಾಂಗಕ್ಕೆ 2ಎ ಮೀಸಲಾತಿ ನೀಡಬೇಕೆಂದು ಸಮಾಜದ ಸಂಘಟನೆಯ ಮೂಲಕ ಒತ್ತಾಯ ಮಾಡುತ್ತಾ ಬಂದಿದ್ದು ಈವರೆಗೆ ಅದು ಅನುಷ್ಠಾನಕ್ಕೆ ಬಂದಿಲ್ಲ. ಆದ್ದರಿಂದ 1994ಕ್ಕಿಂತ ಹಿಂದೆ ಇದ್ದಂತಹ ಪೂರ್ಣ ಪ್ರಮಾಣದ ಪ್ರವರ್ಗ 2ಎ ಮೀಸಲಾತಿ ನೀಡಬೇಕೆಂದು ಸಂಘಟನೆಯ ಮೂಲಕ ಒತ್ತಾಯಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net