ಬಲಶೆಟ್ಟಿಹಾಳದಲ್ಲಿ ಬಾಪೂಜಿಗೆ ನಿತ್ಯ ಪೂಜೆ

ydg06
Published on

ಕೊಡೇಕಲ್: ಬಹುತೇಕ ನಗರ ಮತ್ತು ಪಟ್ಟಣಗಳಲ್ಲಿ ಗಾಂಧೀಜಿ ಹೆಸರಿನ ವೃತ್ತ, ರಸ್ತೆ ಇರುವುದು ಸಹಜ. ಆದರೆ ಹುಣಸಗಿ ತಾಲೂಕಿನ ಬಲಶೆಟ್ಟಿಹಾಳದಲ್ಲಿ ರಾಷ್ಟçಪಿತ ಮಹಾತ್ಮ ಗಾಂಧೀಜಿ ದೇವಸ್ಥಾನ ನಿರ್ಮಿಸಿ, ನಿತ್ಯ ಅವರ ಹೆಸರಿನಲ್ಲಿ ಪೂಜೆ ನಡೆಯತ್ತಿರುವುದು ವಿಶೇಷ.

ದೇಶಕ್ಕೆ ೧೯೪೭ರಲ್ಲಿ ಸ್ವಾತಂತ್ರÈ ದೊರಕಿಸಿಕೊಟ್ಟ ಬಾಪೂಜಿ ಅವರು ೧೯೪೮ರಲ್ಲಿ ಗೂಡ್ಸೆ ಗುಂಡಿಗೆ ಬಲಿಯಾದರು. ಇದರಿಂದ ವಿಚಲಿತರಾಗಿ ಅವರ ತತ್ವಾದರ್ಶ ಪಾಲಿಸಿಕೊಂಡು ಬಂದಿದ್ದ ಅಪ್ಪಟ ಗಾಂಧಿ ಅಭಿಮಾನಿಯಾದ ಗ್ರಾಮದ ದಿ.ಹಂಪಣ್ಣ ಚಿಂಚೋಳಿ ಸಾಹುಕಾರ ಹಾಗೂ ಅನುಯಾಯಿಗಳು ೧೯೪೯ರಲ್ಲಿ ಈ ದೇವಸ್ಥಾನ ನಿರ್ಮಿಸಿ, ಅಂದಿನಿAದ ಇಂದಿನವರೆಗೆ ಪ್ರತಿ ನಿತ್ಯ ಪೂಜೆ ಸಲ್ಲಿಸುತ್ತಿರುವುದು ಈ ಗ್ರಾಮದ ವಿಶೇಷತೆಯಾಗಿದೆ.

ಹಿರಿಯರಿಂದ ಹಿಡಿದು ಕಿರಿಯರವರೆಗೂ ಭಯ, ಭಕ್ತಿ, ಅಭಿಮಾನವಿದೆ. ಗ್ರಾಮದಲ್ಲಿ ಏನೇ ನ್ಯಾಯ ಮಾಡಬೇಕಾದರೆ ಗಾಂಧೀಜಿ ದೇವಸ್ಥಾನ ಕಟ್ಟೆಯಲ್ಲಿಯೇ ಇತ್ಯರ್ಥ. ಹೀಗಾಗಿ ಈ ದೇವಸ್ಥಾನದ ಕಟ್ಟೆಯನ್ನು ನ್ಯಾಯದ ಕಟ್ಟೆ ಎಂದೂ ಕೂಡ ಕರೆಯಲ್ಪಡುತ್ತಾರೆ.

ಈ ದೇವಸ್ಥಾನ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರದಲ್ಲಿರುವ ಕಾರಣ ಶಿಕ್ಷಕರು ಮಕ್ಕಳಿಗೆ ಗಾಂಧಿ ಕುರಿತು ಮಕ್ಕಳಿಗೆ ಪಾಠ ಮಾಡುತ್ತಾರೆ. ಅಲ್ಲದೆ ವಿಶೇಷ ಹಬ್ಬ ಹರಿದಿನ ಮತ್ತು ರಾಷ್ಟಿçÃಯ ಕರ‍್ಯಕ್ರಮ ಇದ್ದರೆ ಗ್ರಾಮಸ್ಥರು ಈ ದೇವಸ್ಥಾನವನ್ನು ಸುಣ್ಣ ಬಣ್ಣದಿಂದ ಅಲಂಕೃತಗೊಳಿಸುವ ಮೂಲಕ ಆಚರಣೆ ಮಾಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net